ಅಪಮೃತ್ಯು ನಿವಾರಣೆಗೆ ಶ್ರೀ ಮಹಾ ಮೃತ್ಯುಂಜಯ ಸ್ತೋತ್ರ

ಅಲ್ಪಾಯುಷಿಯಾಗಿ ಜನಿಸಿ, ಮಹಾದೇವ ಶಿವನ ಕೃಪೆಯಿಂದ ದೀರ್ಘಾಯುವಾದ ಮಾರ್ಕಂಡೇಯನು ರಚಿಸಿದ ಸ್ತೋತ್ರವಿದು. ಮಾರ್ಕಂಡೇಯನಿಗೆ ಅಪಮೃತ್ಯು ನಿವಾರಣೆಯಾದಂತೆ, ಇದನ್ನು ಶ್ರದ್ಧಾಭಕ್ತಿ ಮತ್ತು ತಪೋನಿಷ್ಠೆಯಿಂದ ಪಠಿಸುವವರಿಗೆ ಅಪಮೃತ್ಯು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ಮಾರ್ಕಂಡೇಯ ವಿರಚಿತ ಮಹಾಮೃತ್ಯುಂಜಯ ಸ್ತೋತ್ರ ಇಲ್ಲಿದೆ

This slideshow requires JavaScript.


ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಂ ಉಮಾಪತಿಂ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||1||

ಭಾವಾರ್ಥ: ರುದ್ರನೂ ಪಶುಪತಿಯೂ ಸ್ಥಿರರೂಪಿಯೂ ಆದ ಶಿವನಿಗೆ; ನೀಲಕಂಠನೂ ಉಮಾಪತಿಯೂ ಆದ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ ಮೃತ್ಯು ನನಗೇನು ಮಾಡಲು ಸಾಧ್ಯ?

ಕಾಲಕಂಠಂ ಕಾಲಮೂರ್ತಿಂ ಕಾಲಾಗ್ನಿಂ ಕಾಲನಾಶನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||2||

ಭಾವಾರ್ಥ: ಕಾಲಕಂಠನೂ ಕಾಲಮೂರ್ತಿಯೂ ಕಾಲಾಗ್ನಿಯೂ ಕಾಲನಾಶಕನೂ ಆದ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ ಮೃತ್ಯು ನನಗೇನು ಮಾಡಲು ಸಾಧ್ಯ?

ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||3||

ಭಾವಾರ್ಥ: ವಾಮದೇವನೂ ಲೋಕನಾಥನೂ ಜಗದ್ಗುರುವೂ ದೇವದೇವನೂ ಆದ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ ಮೃತ್ಯು ನನಗೇನು ಮಾಡಲು ಸಾಧ್ಯ?

ದೇವದೇವಂ ಜಗನ್ನಾಥಂ ದೇವೇಶಂ ವೃಷಭಧ್ವಜಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||4||

ಭಾವಾರ್ಥ: ದೇವದೇವನೂ ಜಗನ್ನಾಥನೂ ದೇವೇಶನೂ ಪರಮಶಿವನೂ ವೃಷಭಧ್ವಜನೂ ಆದ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ ಮೃತ್ಯು ನನಗೇನು ಮಾಡಲು ಸಾಧ್ಯ?

ಗಂಗಾಧರಂ ಮಹಾದೇವಂ ಶಂಕರಂ ಶೂಲಪಾಣಿನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||5||

ಭಾವಾರ್ಥ: ಗಂಗಾಧರನೂ ಶಂಕರನೂ ಶೂಲಪಾಣಿಯೂ ಆದ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ ಮೃತ್ಯು ನನಗೇನು ಮಾಡಲು ಸಾಧ್ಯ?

ಭಸ್ಮೋದ್ಧೂಲಿತಸರ್ವಾಂಗಂ ನಾನಾಹರ್ಣಭೂಷಿತಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||6||

ಭಾವಾರ್ಥ: ವಿಭೂತಿಯ ಕಣದಿಂದ ಸರ್ವಾಂಗ ಲೇಪಿತನಾದ, ವಿವಿಧಾಭರಣ ಭೂಷಿತನಾದ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ ಮೃತ್ಯು ನನಗೇನು ಮಾಡಲು ಸಾಧ್ಯ?

ಆನಂದಂ ಪರಮಾನಂದಂ ಕೈವಲ್ಯಪದಗಾಮಿನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||7||

ಭಾವಾರ್ಥ: ಆನಂದ ಸ್ವರೂಪನೂ, ಪರಮಾನಂದಕಾರಕನೂ, ಕೈವಲ್ಯಕ್ಕೆ ಹಾದಿ ತೋರುವವನೂ ಆಗಿರುವ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ ಮೃತ್ಯು ನನಗೇನು ಮಾಡಲು ಸಾಧ್ಯ?

ಸ್ವರ್ಗಾಪವರ್ಗದಾತಾರಂ ಸೃಷ್ಟಿಸ್ಥಿತ್ಯಂತಕಾರಿಣಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||8||

ಭಾವಾರ್ಥ: ಸ್ವರ್ಗಸುಖದಾಯಕನೂ, ಸೃಷ್ಟಿ ಸ್ಥಿತಿ ಲಯಕಾರಕನೂ ಆಗಿರುವ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ ಮೃತ್ಯು ನನಗೇನು ಮಾಡಲು ಸಾಧ್ಯ?

ಪ್ರಲಯಸ್ಥಿತಿಸಂಹಾರಮಾದಿಕರ್ತಾರಮೀಶ್ವರಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||9||

ಭಾವಾರ್ಥ: ಪ್ರಲಯ, ಸೃಷ್ಟಿ – ವಿನಾಶಗಳಿಗೆ ಕಾರಣನಾಗಿರುವ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ ಮೃತ್ಯು ನನಗೇನು ಮಾಡಲು ಸಾಧ್ಯ?

ಸತ್ಯಂ ಸತ್ಯಂ ಪುನಃ ಸತ್ಯಮುದ್ಧೃತ್ಯ ಭುಜಮುಚ್ಯತೇ |
ವೇದ ಶಾಸ್ತ್ರಾತ್ ಪರಂ ನಾಸ್ತಿ ನ ದೇವಃ ಶಂಕರಾತ್ ಪರಃ ||10||

ಭಾವಾರ್ಥ: ವೇದಶಾಸ್ತ್ರಕ್ಕಿಂತ ಉತ್ಕೃಷ್ಠವಾಗಿರುವ ತತ್ವ ಬೇರಾವುದೂ ಇಲ್ಲ. ಅದೇ ರೀತಿಯಾಗಿ ಶಂಕರನಿಗಿಂತ ಮಿಗಿಲಾದ ಮತ್ತೊಬ್ಬ ದೇವನಿಲ್ಲ.

ಮಾರ್ಕಾಂಡೇಯಕೃತಂ ಸ್ತೋತ್ರಂ ಯಃ ಪಠೇಚ್ಛಿವಸನ್ನಿಧೌ |
ತಸ್ಯ ಮೃತ್ಯುಭಯಂ ನಾಸ್ತಿ ಅಗ್ನಿಚೋರಭಯಂ ನ ಹಿ  ||೧೧||

ಭಾವಾರ್ಥ: ಮಾರ್ಕಂಡೇಯ ಮಹರ್ಷಿಗಳಿಂದ ರಚಿಸಲ್ಪಟ್ಟ ಈ ಸ್ತೋತ್ರವನ್ನು ಯಾರು ಶಿವ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧಾಪುರಸರವಾಗಿ ಪಠಿಸುವರೋ ಅಂತವರ ಮೃತ್ಯುಭೀತಿಯು ನಾಶವಾಗುವುದಲ್ಲದೆ ಅಗ್ನಿ ಭಯ, ಚೋರಭಯ ಹಾಗೂ ನೈಸರ್ಗಿಕ ವಿಕೋಪಗಳಿಂದ ಯಾವ ಭೀತಿಯೂ ಇರುವುದಿಲ್ಲ.

 

 

Leave a Reply