ಪಾಂಡವರ ಇತರ ಪತ್ನಿಯರು ಮತ್ತು ಮಕ್ಕಳು : ಇವರ ಹೆಸರು ತಿಳಿದಿತ್ತೇ!?

ಪಂಚಪಾಂಡವರಿಗೆ ದ್ರೌಪದಿಯಷ್ಟೇ ಹೆಂಡತಿಯಲ್ಲ, ಪ್ರತಿಯೊಬ್ಬರಿಗೂ ಸ್ವಯಂವರ ಹಾಗೂ ಗಾಂಧರ್ವ ವಿವಾಹವಾಗಿದ್ದರು. ಆ ಪತ್ನಿಯರಿಂದ ಮಕ್ಕಳನ್ನೂ ಪಡೆದಿದ್ದರು. ಈ ಪತ್ನಿಯರು ಯಾರು, ಅವರ ಹೆಸರೇನು, ಇಲ್ಲಿದೆ ನೋಡಿ…

ಯುಧಿಷ್ಠಿರ : ಶೈವ್ಯ ಕುಲದ ಗೋವಾಸನನ ಮಗಳು ದೇವಿಕಾ. ಇವಳಿಂದ ಪಡೆದ ಮಗ ಯೌಧೇಯ

ಭೀಮ : ಕಾಶೀರಾಜನ ಮಗಳು ವಲಂಧರಾ. ಇವಳಿಂದ ಪಡೆದ ಮಗ ಸರ್ವಗ. ದ್ರೌಪದಿಗೂ ಮೊದಲು ಹಿಡಿಂಬೆಯನ್ನು ಆಸುರೀ ವಿವಾಹವಾಗಿದ್ದ ಭೀಮನಿಗೆ ಘಟೋತ್ಕಚನೆಂಬ ಮಗನೂ ಇದ್ದ.

ಅರ್ಜುನ : ಕೃಷ್ಣನ ಸಹೋದರಿ ಸುಭದ್ರಾ. ಇವಳಿಂದ ಪಡೆದ ಮಗ ಅಭಿಮನ್ಯು. ನಾಗಕನ್ಯೆ ಉಲೂಪಿ ಮತ್ತು ಮಣಿಪುರದ ರಾಣಿ ಚಿತ್ರಾಂಗದೆಯನ್ನು ಗಾಂಧರ್ವ ವಿವಾಹವಾಗಿದ್ದು, ಉಲೂಪಿಯಿಂದ ಇರಾವಂತನನ್ನೂ ಚಿತ್ರಾಂಗದೆಯಿಂದ ಬಭ್ರುವಾಹನನೆಂಬ ಮಗನನ್ನೂ ಪಡೆದಿದ್ದ.

ನಕುಲ : ಚೇದಿ ರಾಜಕುಮಾರಿ ಕರೇಣುಮತಿ. ಇವಳಿಂದ ಪಡೆದ ಮಗ ನಿರಮೈತ್ರ.

ಸಹದೇವ : ಮದ್ರರಾಜ ದ್ಯುತಿಮತನ ಮಗಳು ವಿಜಯಾ. ಇವಳಿಂದ ಪಡೆದ ಮಗ ಸುಹೋತ್ರ.

ಪಾಂಡವರು ದ್ರೌಪದಿಯಲ್ಲಿ ಪಡೆದ ಉಪಪಾಂಡವರು 

ಧರ್ಮರಾಯ : ಪ್ರತಿವಂದ್ಯ

ಭೀಮಸೇನ : ಶ್ರುತಸೋಮ

ಅರ್ಜುನ : ಶ್ರುತಕೀರ್ತಿ

ನಕುಲ : ಶತಾನೀಕ

ಸಹದೇವ : ಶ್ರುತಸೇನ.

 

 

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.