ಈ ಕೊಳಲಿನ ಮೇಲೆ ಭಗವಂತನ ತುಟಿಗಳ ಗುರುತಿದೆ : ಹಫೀಜ್ ಕಾವ್ಯ

ಶಮ್ಸುದ್ದಿನ್ ಮುಹಮ್ಮದ್ ಹಫೀಜ್, 14ನೇ ಶತಮಾನದಲ್ಲಿ ಜೀವಿಸಿದ್ದ ಪರ್ಷಿಯನ್ ಕವಿ. ಹಫೀಜ್ ಕಾವ್ಯ ತನ್ನ ಸೌಂದರ್ಯ ಮತ್ತು ಕಾಣ್ಕೆಗಳ ಕಾರಣದಿಂದ ಇಂದಿಗೂ ಜನಪ್ರಿಯತೆ ಕಾಯ್ದುಕೊಂಡಿದೆ. ಹಫೀಜ್ ರಚನೆಯ ಕೆಲವು ಕವಿತೆಗಳನ್ನು ಕನ್ನಡದ ಕವಿ ಚಿದಂಬರ್ ನರೇಂದ್ರ ಅನುವಾದಿಸಿದ್ದು, ಅವುಗಳಲ್ಲಿ ಒಂದು ಇಲ್ಲಿದೆ …. 

ನ್ನ ಈ ಕೊಳಲಿನ ಮೇಲೆ
ನಮ್ಮಿಬ್ಬರ ತುಟಿಗಳಿಗೆ
ಸಾಕಗುವಷ್ಟು ಜಾಗ ಇದೆ.

ನನ್ನ ಉಸಿರು,
ನಿನ್ನ ಉಸಿರನ್ನು ಛೇಡಿಸುತ್ತ
ಕಚಗುಳಿಯಿಡುತ್ತ
ಮುದ್ದಾಡುತ್ತಿದ್ದರೆ
ಆ ಸಂಗೀತದ ರುಚಿಯೇ ಬೇರೆ.

ಇಂದು ಮುಂಜಾನೆ
ಹಿತ್ತಲ ಗಿಡದ ರೆಂಬೆಯ ಮೇಲೆ
ಎರಡು ಹಕ್ಕಿಗಳು
ಸೂರ್ಯನೊಂದಿಗೆ ತಮಾಷೆ ಮಾಡುತ್ತ
ಖುಷಿಯಿಂದ ಚೀರಾಡುತ್ತಿದ್ದವು.

ಮುಂದೊಂದು ದಿನ
ನಾವೂ ಹಾಗಾಗುತ್ತೇವೆ.
ಈ ಕೊಳಲಿನ ಮೇಲೆ
ಭಗವಂತನ ತುಟಿಗಳ ಗುರುತಿದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

3 Responses

 1. ಬಾಗೇಪಲ್ಲಿ ಕೃಷ್ಣಮೂರ್ತಿ

  ಈ ಕವಿತೆ ನೇರವಾಗಿ ಉರ್ದುವಿನಿಂದ ಅನುವಾದ ಆಗಿದೆಯೇ? ಇಂಗ್ಲಿಷ್ಗೆ ಅನುವಾದಿಸಿದ ಕವಿತೆ ಯಿಂದ ಆಗಿದೆಯೇ ತಿಳಿಯ ಬಯಸುತ್ತೇನೆ. ಚೆದಂಬರ ನರೇಂದ್ರ ರ ಪುಸ್ತಕ ಎಲ್ಲಿ ಲಭ್ಯ ತಿಳಿಸಿ.

 2. Nagaraj S Rangannavar

  Beloved Friends
  It’s great to read all these articles in this ARALIMARA. THIS TREE HAS SHELTERED VERSATILE MYSTICS AND MASTERS AND POETS. IT’S SO INTERESTING AND VALUABLE TO READ EACH AND EVERY ARTICLES HERE
  WITH DEEP REVERENCE AND GRATITUDE
  NAGARAJ S RANGANNAVAR

Leave a Reply