ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ಅಷ್ಟಲಕ್ಷ್ಮೀ ಸ್ತೋತ್ರ : ನಿತ್ಯಪಾಠ

ಲಕ್ಷ್ಯವನ್ನು ಸಾಧಿಸುವಂತೆ ಅನುಗ್ರಹಿಸುವವಳೇ ‘ಲಕ್ಷ್ಮೀ’. ಸಂಪತ್ತು ಎಂದರೆ ಕೇವಲ ಹಣವಲ್ಲ. ವಿದ್ಯೆ, ಧಾನ್ಯ, ಗೆಲುವು, ಸಂತಾನ ಇತ್ಯಾದಿಗಳು ಕೂಡಾ ಸಂಪತ್ತೇ ಆಗಿವೆ. ಇವನ್ನು ಅಷ್ಟೈಶ್ವರ್ಯಗಳು ಎಂದು ಕರೆಯಲಾಗುತ್ತದೆ. ಈ ಯಾವುದನ್ನು ಪಡೆಯುವುದಕ್ಕೂ ಜಗನ್ಮಾತೆ ಲಕ್ಷ್ಮೀದೇವಿಯ ಕೃಪೆ ಬೇಕು. ಈ ನಿಟ್ಟಿನಲ್ಲಿ ಲಕ್ಷ್ಮೀದೇವಿಯನ್ನು ಪ್ರಸನ್ನಗೊಳಿಸಲು ಅಷ್ಟಲಕ್ಷ್ಮೀ ಸ್ತೋತ್ರ ಇಲ್ಲಿದೆ…

॥ ಆದಿಲಕ್ಷ್ಮಿ ॥

adi

ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೋದರಿ ಹೇಮಮಯೇ
ಮುನಿಗಣ ವಂದಿತ ಮೋಕ್ಷಪ್ರದಾಯನಿ, ಮಂಜುಲ ಭಾಷಿಣಿ ವೇದನುತೇ |
ಪಂಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್ || 1 ||

ದೇವತೆಗಳಿಗೆ ವಂದನೀಯಳಾದ; ಬಂಗಾರ ಮೈಬಣ್ಣದಿಂದ ಶೋಭಿಸುವ ಸುಂದರಿ, ಚಂದ್ರನ ಸಹೋದರಿಯಾದ; ಮುನಿಗಣದಿಂದ ಪೂಜಿಸಲ್ಪಟ್ಟು ಮೋಕ್ಷ ಕರುಣಿಸುವ; ಮೃದುಮಧುರ ಮಾತುಗಳನ್ನಾಡುವ; ಕಮಲದಲ್ಲಿ ನೆಲೆಸಿರುವ, ಸದ್ಗುಣಗಳನ್ನು ಕರುಣಿಸುವ; ಮಧುಸೂದನನ ಪ್ರಿಯತಮೆ ಆದಿಲಕ್ಷ್ಮಿಯೇ ನನ್ನನ್ನು ಕಾಪಾಡು.

॥ ಧಾನ್ಯಲಕ್ಷ್ಮಿ ॥

dhanya

ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ |
ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ || 2 ||

ಸಕಲ ಕಶ್ಮಲಗಳನ್ನೂ ತೊಡೆಯುವ; ವೇದಸ್ವರೂಪಿಣಿಯಾದ; ಕ್ಷೀರಸಾಗರದಲ್ಲಿ ಮೂಡಿಬಂದ; ಮಂತ್ರಗಳಲ್ಲಿ ನೆಲೆಸಿರುವ; ಸದಾ ಮಂಗಳವನ್ನೇ ಉಂಟುಮಾಡುವ; ದೇವತೆಗಳಿಂದ ಆಶ್ರಯಿಸಲ್ಪಟ್ಟಿರುವ; ಮಧುಸೂದನನ ಪ್ರಿಯತಮೆ ಧಾನ್ಯಲಕ್ಷ್ಮಿಯೇ ನನ್ನನ್ನು ಕಾಪಾಡು.

॥ ಧೈರ್ಯಲಕ್ಷ್ಮಿ ॥

dhairya

ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ
ಸುರಗಣ ಪೂಜಿತ ಶೀಘ್ರ ಫಲಪ್ರದ, ಙ್ಞಾನ ವಿಕಾಸಿನಿ ಶಾಸ್ತ್ರನುತೇ |
ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ
ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ || 3 ||

ಜಯವನ್ನು ಕರುಣಿಸುವ; ವಿಷ್ಣುಪತ್ನಿಯೂ ಭೃಗುವಂಶಜಳೂ ಆದ; ಸ್ವತಃ ಮಂತ್ರಸ್ವರೂಪಿನೀಯೂ ಮಂತ್ರದಲ್ಲಿ ನೆಲೆಸಿರುವವಳು ಆದ; ದೇವತೆಗಳಿಂದ ಪೂಜಿಸಲ್ಪಡುವವಳು ಶೀಘ್ರ ವರಗಳನ್ನು ಕರುಣಿಸುವವಳು ಆದ; ಜ್ಞಾನದಾಯಿನಿಯಾದ; ಭವಭಯಗಳನ್ನು ನಿವಾರಿಸುವ, ಪಾಪಗಳಿಂದ ವಿಮೋಚನೆ ಕರುಣಿಸುವ; ಸಾಧ್ಉಜನರಿಂದ ಆಶ್ರಯಿಸಲ್ಪಟ್ಟಿರುವ ಮಧುಸೂದನನ ಪ್ರಿಯತಮೆ ಧೈರ್ಯಲಕ್ಷ್ಮಿಯೇ ನನ್ನನ್ನು ಕಾಪಾಡು.

॥ ಗಜಲಕ್ಷ್ಮಿ ॥

gaja

ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ
ರಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ |
ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ || 4 ||

ದುರ್ಗತಿಗಳನ್ನು ನಿವಾರಿಸುವ; ಸಕಲಶಾಶ್ತ್ರಗಳ ಸಾರಫಲವನ್ನು ನೀಡುವ; ಆನೆ, ಕುದುರೆ, ಕಾಲಾಳುಗಳಿಂದ ಸುತ್ತುವರಿದಿರುವ; ಪಂಡಿತರಿಗೆ ಆಶ್ರಯ ನೀಡಿರುವ; ಹರಿಹರ ಬ್ರಹ್ಮಾದಿಗಳಿಂದ ಪೂಜಿಸಲ್ಪಡುವ, ತಾಪ ನಿವಾರಿಣಿಯಾದ ಮಧುಸೂದನನ ಪ್ರಿಯತಮೆ ಗಜಲಕ್ಷ್ಮಿಯೇ ನನ್ನನ್ನು ಕಾಪಾಡು.

॥ ಸಂತಾನಲಕ್ಷ್ಮಿ ॥

santana

ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಙ್ಞಾನಮಯೇ
ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ |
ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ || 5 ||

ಪಕ್ಷಿವಾಹನಳಾದ; ಜ್ಞಾನ ಪ್ರದಾಯಿನಿಯಾದ; ಸಕಲಗುಣಗಳ ಸಾಗರವೇ ಆಗಿರುವ; ಸದಾ ಲೋಕಹಿತವನ್ನೆ ಮಾಡುವ; ಸಪ್ತಸ್ವರಗಳಿಂದ ಭೂಷಿತಳಾದ; ಸಕಲ ದೇವ – ದೈತ್ಯ – ಮಾನವರಿಂದ ಪೂಜಿಸಲ್ಪಡುವ ಮಧುಸೂದನನ ಪ್ರಿಯತಮೆ ಸಂತಾನಲಕ್ಷ್ಮಿಯೇ ನನ್ನನ್ನು ಕಾಪಾಡು.

॥ ವಿಜಯಲಕ್ಷ್ಮಿ ॥

vijaya

ಜಯ ಕಮಲಾಸಿನಿ ಸದ್ಗತಿ ದಾಯಿನಿ, ಙ್ಞಾನವಿಕಾಸಿನಿ ಗಾನಮಯೇ
ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ |
ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ
ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ || 6 ||

ಕಮಲ ಪುಷ್ಪದಲ್ಲಿ ಸ್ಥಿತಳಾದ, ಜ್ಞಾನವೃದ್ಧಿಸುವ; ಹಾಡುಗಳಿಂದ ಸ್ತುತಿಸಲ್ಪಡುವ; ಕುಂಕುಮಭೂಷಿತಳಾದ; ವಾದ್ಯವೃಂದದ ಆನಂದ ಅನುಭವಿಸುತ್ತಿರುವ; ಶಂಕರಾಚಾರ್ಯರಿಂದ ಕನಕಧಾರಾ ಸ್ತೋತ್ರದ ಮೂಲಕ ಸ್ತುತಿಸಲ್ಪಟ್ಟ; ಮಧುಸೂದನನ ಪ್ರಿಯತಮೆ ವಿಜಯಲಕ್ಷ್ಮಿಯೇ ನನ್ನನ್ನು ಕಾಪಾಡು.

॥ ವಿದ್ಯಾಲಕ್ಷ್ಮಿ ॥

vidya.jpg

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ |
ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ || 7 ||

ಶೋಕನಿವಾರಕಳಾದ, ಕಿವಿಗೆ ಮಣಿಗಳಿಂದ ಮಾಡಿದ ಆಭೂಷಣವನ್ನು ಧರಿಸಿದ, ಶಾಂತಿ ಸೂಸುವ, ಹಾಸ್ಯವನ್ನು ಆನಂದಿಸುವ; ನವನಿಧಿಗಳನ್ನು ಕರುಣಿಸುವ, ಕಮಲಪುಷ್ಪದಲ್ಲಿ ವಿಹರಿಸುವ, ಭಕ್ತರು ಬೇಡಿದ ವರಗಳನ್ನು ಕರುಣಿಸಲು ಸದಾ ಸನ್ನದ್ಧಳಾಗಿರುವ; ಮಧುಸೂದನನ ಪ್ರಿಯತಮೆ ವಿದ್ಯಾಲಕ್ಷ್ಮಿಯೇ ನನ್ನನ್ನು ಕಾಪಾಡು.

॥ ಧನಲಕ್ಷ್ಮಿ ॥

dhana

ಧಿಮಿಧಿಮಿ ಧಿಂಧಿಮಿ ಧಿಂಧಿಮಿ ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ
ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ |
ವೇದ ಪುರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ || 8 ||

ದುಂದುಭಿನಾದದಿಂದ ಮುದಗೊಳ್ಳುವ; ಶಂಖ ನಿನಾದದಿಂದ ಸಂತೋಷಿಸುವ; ವೇದಪುರಾಣಗಳಲ್ಲಿ ಸ್ತುತಿಸಲ್ಪಟ್ಟಿರುವ; ವೇದಪ್ರಣೀತ ಜೀವನ ಮಾರ್ಗದಲ್ಲಿ ಕೈಹಿಡಿದು ನಡೆಸುವ, ಮಧುಸೂದನನ ಪ್ರಿಯತಮೆ ಧನಲಕ್ಷ್ಮಿಯೇ ನನ್ನನ್ನು ಕಾಪಾಡು.

॥ ಮಂಗಳ ಶ್ಲೋಕ ॥

lak
ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ ||

ಶ್ರದ್ಧಾಭಕ್ತಿಯಿಂದ ಪೂಜಿಸುವ ಭಕ್ತರಿಗೆ ಬೇಡಿದ ವರಗಳನ್ನು ಕರುಣಿಸುವ, ಮಹಾವಷ್ಣುವಿನ ವಕ್ಷದಲ್ಲಿ ನೆಲೆಸಿದ್ದು, ಭಕ್ತರಿಗೆ ಮೋಕ್ಷ ದೊರಕಿಸುವ ಅಷ್ಟಭಾಗ್ಯಗಳನ್ನು ನೀಡುವ ಮಹಾಲಕ್ಷ್ಮಿಗೆ ನಾನು ವಂದಿಸುತ್ತೇನೆ.

ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿ ತೇ ಜಯಃ |
ಜಗನ್ಮಾತ್ರೇ ಚ ಮೋಹಿನ್ಯೈ ಮಂಗಳಂ ಶುಭ ಮಂಗಳಮ್ ||

ಶಂಖಚಕ್ರಗಳನ್ನು ಕೈಯಲ್ಲಿ ಹಿಡಿದು ಜಗತ್ತನ್ನು ವ್ಯಾಪಿಸಿರುವ, ಜಗತ್ತಿನ ತಾಯಿಯಾದ, ಸಕಲರನ್ನೂ ಮೋಹಗೊಳಿಸುವ ಮಾತೆ ಮಹಾಲಕ್ಷ್ಮಿಯಿಂದ ಸನ್ಮಂಗಳ ಉಂಟಾಗಲಿ. ಮಾತೆಗೆ ಜಯವಾಗಲಿ.

Leave a Reply