ಹಫೀಜ್ ಮಾಡಿದ ಒಂದೇ ಒಂದು ಪಾಪ….! : ಸೂಫಿ ಪದ್ಯ

ಮೂಲ : ಹಫೀಜ್, ಸೂಫಿ ಸಂತಕವಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ಯಾರೋ ಬಂದು
ನನ್ನ ಹತ್ತಿರ ಕುಳಿತರು.
ಭಗವಂತನ ಬಗ್ಗೆ 
ಅದು ಇದು ಮಾತನಾಡಿ
ಉದ್ವೇಗಗೊಂಡರು.

ಅವರ ಮನಸ್ಸಿನ ತಳಮಳಕ್ಕೆ
ನಾನು ಸಮಾಧಾನ ಹೇಳದೇ ಹೋದರೆ,
ಈ ಜಗತ್ತಿನ ಬಗ್ಗೆ 
ಮತ್ತು 
ಸ್ವತಃ ಅವರ ಬಗ್ಗೆಯೇ 
ಭರವಸೆ ಮೂಡಿಸದೇ ಹೋದರೆ ?

ಹಫಿಜ್, ಬೇಗ ಓಡು
ಮಸೀದಿಗೆ ಹೋಗು
ದೇವರ ಮುಂದೆ ಪ್ರಾರ್ಥನೆ ಮಾಡು
ನೀನು ಇದೀಗ ನನಗೆ ಗೊತ್ತಿರುವ
ಒಂದೇ ಒಂದು ಪಾಪ ಮಾಡಿದ್ದೀಯ.

Leave a Reply