ನಿಸರ್ಗದತ್ತ ಮಹಾರಾಜರ ನುಡಿಹಾರ : ಕೆಲವು ಹೊಳಹುಗಳು

nd17 ಏಪ್ರಿಲ್ 1869ರಂದು ಮುಂಬೈನಲ್ಲಿ ಜನಿಸಿದ ನಿಸರ್ಗದತ್ತ ಮಹಾರಾಜ್ ಅವರ ಮೂಲ ಹೆಸರು ಮಾರುತಿ. ನಿಸರ್ಗದತ್ತ ಮಹಾರಾಜರವರು ಅದ್ವೈತ ಸಿದ್ದಾಂತ. ನವನಾಥ ಪರಂಪರೆ ಹಾಗೂ ಲಿಂಗಾಯತ ಶೈವ ಪರಂಪರೆಯನ್ನ ಬೋಧಿಸಿದ ಗುರುಗಳು. 1973ರಲ್ಲಿ ಪ್ರಕಟವಾದ ಅವರ ಮರಾಠಿ ಪ್ರವಚನಗಳ “ನಾನು ಅದು!” ಕೃತಿಯು ಇಂಗ್ಲೀಶಿನಲ್ಲಿ “I am that” ಎಂಬ ಹೆಸರಿನಿಂದ ಪ್ರಕಟಗೊಂಡು, ಅವರನ್ನು ಜಗತ್ತಿನಾದ್ಯಂತ ಪರಿಚಯಿಸಿತು. ನಿಸರ್ಗದತ್ತ ಮಹಾರಾಜರ ಕೆಲವು ಬೋಧಪ್ರದ ನುಡಿಮುತ್ತುಗಳ ಕನ್ನಡಾನುವಾದವನ್ನು ಇಲ್ಲಿ ನೀಡಲಾಗಿದೆ.

ಮೂಲ: ನಿಸರ್ಗದತ್ತ ಮಹಾರಾಜ್ | ಅನುವಾದ : ಪ್ರವೀಣಕುಮಾರ್ ಗೋಣಿ

ಕೆಲವು ಸಲ ನಾನೇ ಎಲ್ಲಾ ಎನ್ನುವ ಭಾವ ಹೊಮ್ಮುತ್ತದೆ.
ಅದನ್ನ ನಾನು ಪ್ರೀತಿಯೆಂದು ಕರೆಯುತ್ತೇನೆ !
ಮತ್ತೆ ಕೆಲವು ಸಲ ನಾನೇನೂ ಅಲ್ಲ ಎನ್ನುವ ಭಾವ ಹೊಮ್ಮುತ್ತದೆ
ಅದನ್ನ ನಾನು ಬುದ್ದಿವಂತಿಕೆ ಎಂದು ಕರೆಯುತ್ತೇನೆ !
ಈ ಪ್ರೀತಿ ಹಾಗೂ ಬುದ್ದಿವಂತಿಕೆಗಳ ನಡುವೆಯೇ
ನಿರಂತರವಾಗಿ ಬದುಕು ಸಾಗುತ್ತದೆ.
*
ನಿನ್ನಷ್ಟಕ್ಕೆ ನೀನೇ ನೀನು ಜಗತ್ತಿನಿಂದ ಭಿನ್ನನಾದವನೆಂದು ಭಾವಿಸಿದರೆ
ಜಗತ್ತು ನಿನ್ನ ಹೊರತಾಗಿದೆ ಎನ್ನುವಂತೆ ಗೋಚರವಾಗುತ್ತದೆ;
ಹಾಗೂ
ನಿನಗೆ ಮೋಹ ಮತ್ತು ಭಯದ ಅನುಭವವಾಗುತ್ತದೆ!
ನಾನು ಹಾಗೂ ಈ ಜಗತ್ತು ಭಿನ್ನವೇ ಅಲ್ಲವೆಂದು ಭಾವಿಸುತ್ತೇನೆ.
ಹಾಗಾಗಿ ನಾನು ಮೋಹ – ಭಯಗಳ ಅನುಭವಕ್ಕೆ ಈಡಾಗುವುದೇ ಇಲ್ಲ.
*
ನಿನ್ನಲ್ಲಿ ಏನಿಲ್ಲವೋ ಅದರ ಬಗ್ಗೆ ಚಿಂತಿಸುವುದರ ಬದಲು,
ಯಾವುದನ್ನ ನೀನು ಎಂದೆಂದಿಗೂ ಕಳೆದುಕೊಳ್ಳದಂತೆ ಇರಿಸಿಕೊಂಡಿರುವೆಯೋ
ಅದನ್ನ ನಿನ್ನೊಳಗೆ ಶೋಧಿಸಿಕೋ.
*
ನಿನ್ನ ಎಚ್ಚರದ ಆವಸ್ಥೆಯನ್ನ ಪದಗಳಾಚೆಗಿನ ಶಾಂತಿಯೆಡೆಗೆ ಹರಿಸು.
ಆಗ ನೀನು ಸತ್ಯವನ್ನ ಆಲಿಸಲು ಶಕ್ತನಾಗುವೆ.
*
ನಿನಗೆ ಅಗತ್ಯವೇ ಇಲ್ಲದ್ದನ್ನು ಬೇಡುವುದು ಎಂದು ನಿಲ್ಲಿಸುವೆಯೋ
ಆಗ ಮಾತ್ರ ನಿನಗೆ ಅವಶ್ಯವಿರುವುದನ್ನ ಪಡೆಯುವೆ !!
*
ನು ಘಟಿಸುತ್ತದೆಯೋ, ಅದು ಘಟಿಸುವುದು ನಿನ್ನಿಂದಲೇ, ನಿನ್ನ ಮೂಲಕವೇ.
ನಿನಗೆ ನೀನೇ ಸೃಷ್ಟಿಕರ್ತ.
ಸಂತಸಪಡುವವನು, ನಿರ್ನಾಮ ಮಾಡುವವನು ನೀನೇ… ನೀನಷ್ಟೇ !!

Leave a Reply