ಜಪಾನಿನ ಆಂತರಿಕ ಕಲಹದ ಕಾಲದಲ್ಲಿ ಒಮ್ಮೆ ರಾಜನ ಸೈನ್ಯ ಒಂದು ಹಳ್ಳಿಯನ್ನು ಆಕ್ರಮಿಸಿಕೊಂಡಿತು. ಆ ಹಳ್ಳಿಯ ಎಲ್ಲ ಜನರು ಸೈನ್ಯಾಧಿಕಾರಿಯ ಮುಂದೆ ಬಂದು ಕೈಕಟ್ಚಿ ನಿಂತುಕೊಂಡರು, ಒಬ್ಬ ಝೆನ್ ಮಾಸ್ಟರ್ ನನ್ನು ಮಾತ್ರ ಹೊರತುಪಡಿಸಿ.
ಆಶ್ಚರ್ಯಚಕಿತನಾದ ಸೈನ್ಯಾಧಿಕಾರಿ ತಾನೇ ಸ್ವತಃ ಆಶ್ರಮಕ್ಕೆ ಭೇಟಿಕೊಟ್ಟು ಮಾಸ್ಟರ್ ನನ್ನು ಕಾಣಲು ಬಯಸಿದ. ತನ್ನನ್ನು ಕಾಣಲು ಬಂದ ಅಧಿಕಾರಿಯನ್ನು ಮಾಸ್ಟರ್ ಎದ್ದು ಹೋಗಿ ಸ್ವಾಗತಿಸಲಿಲ್ಲ.
ಈ ಅವಮಾನ ಸಹಿಸದ ಸೈನ್ಯಾಧಿಕಾರಿ ಆಕ್ರೋಶದಿಂದ ತನ್ನ ಖಡ್ಗವನ್ನು ಒರೆಯಿಂದ ಹಿರಿಯುತ್ತ “ಮೂರ್ಖ ಮುದುಕ, ನೀನು ಯಾರ ಎದುರು ನಿಂತಿದ್ದೀಯ ಗೊತ್ತಿದೆಯೆ? ನಾನು ಮನಸ್ಸು ಮಾಡಿದರೆ ಕಣ್ಣು ಮುಚ್ಚಿ ತೆಗೆಯುವದರೊಳಗೆ ನಿನ್ನ ರುಂಡ ಕತ್ತರಿಸಹಾಕಬಲ್ಲೆ”
ಮಾಸ್ಟರ್ ತನ್ನ ಎಂದಿನ ಸಮಾಧಾನದಲ್ಲಿ ಉತ್ತರಿಸಿದ “ನಿನಗೆ ಗೊತ್ತಾ, ನೀನು ಯಾರ ಎದುರು ನಿಂತಿದ್ದೀಯ ? ನಾನು ಮನಸ್ಸು ಮಾಡಿದರೆ ಕಣ್ಣು ಮುಚ್ಚಿ ತೆಗೆಯುವುದರೊಳಗಾಗಿ, ನಿನ್ನ ಕಣ್ಣಿಗೆ ಕಾಣಿಸದಂತೆ ಇಲ್ಲಿಂದ ಓಡಿ ಹೋಗಬಲ್ಲೆ”
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)
1 Comment