ಭಯ ಮತ್ತು ಬಯಕೆಗಳಾಚೆ ಇರುವುದೇ ನಿಜವಾದ ಪ್ರೇಮ

ಪ್ರೇಮವೊಂದೇ ಆತ್ಯಂತಿಕವಾದದ್ದು. ಭಗವಂತನೇ ಅಲ್ಲಿ ಪ್ರಿಯತಮ. ಆತನ ಮೇಲೆ ಯಾವುದೇ ಬಯಕೆ ಮತ್ತು ಭಯಗಳು ಇರುವುದಿಲ್ಲ. ಅದಕ್ಕೆ ರಾಬಿಯಾಳ ಈ ಸಾಲುಗಳಿಗಿಂತ ಬೇರೆ ಸಾಕ್ಷಿ ಬೇಕಾಗಿಲ್ಲ 

saki2

: ಸಾಕಿ

ರ್ಮಗಳು ದೇವರನ್ನು ನಿರ್ಗುಣ ನಿರಾಕಾರ ಎನ್ನುತ್ತಲೇ ಸ್ವರ್ಗ-ನರಕಗಳನ್ನೂ ದೇವರೇ ಸೃಷ್ಟಿಸಿದ ಎಂದು ಹೇಳುತ್ತವೆ. ಆ ಮೂಲಕ ನರಕದ ಶಿಕ್ಷೆಗಳ ಭಯದಿಂದಲೂ ಸ್ವರ್ಗದ ಅನಂತ ಸುಖ ಸಾಗರದ ಆಸೆಯಿಂದಲೂ ದೇವರನ್ನು ಪ್ರೀತಿಸಿ ಎಂದು ಧರ್ಮ ಗ್ರಂಥಗಳ ಮೂಲಕ ಸಾರುತ್ತವೆ. ಧರ್ಮಗಳ ಹುಟ್ಟಿನ ಸಂದರ್ಭದಲ್ಲಿ ಇಂತಹ ಮೋಹ ಮತ್ತು ಭಯಗಳ ಮೂಲಕವೇ ಅನಾಗರಿಕ ಸಮಾಜದಲ್ಲಿ ಧರ್ಮ ಸ್ಥಾಪನೆ ಸಾಧ್ಯವಾಗಿದ್ದು ನಿಜವಾದರೂ ಕಾಲ ಕ್ರಮೇಣ ಧರ್ಮಗಳು ಕವಲೊಡೆದು ಪಂಥಗಳಾದವು. ಅವುಗಳಲ್ಲಿ ಒಂದು ಸೂಫಿ ಪಂಥ. ಅಲ್ಲಿ ಪ್ರೇಮವೊಂದೇ ಆತ್ಯಂತಿಕವಾದದ್ದು. ಭಗವಂತನೇ ಅಲ್ಲಿ ಪ್ರಿಯತಮ. ಆತನ ಮೇಲೆ ಯಾವುದೇ ಬಯಕೆ ಮತ್ತು ಭಯಗಳು ಇರುವುದಿಲ್ಲ. ಅದಕ್ಕೆ ರಾಬಿಯಾಳ ಈ ಸಾಲುಗಳಿಗಿಂತ ಬೇರೆ ಸಾಕ್ಷಿ ಬೇಕಾಗಿಲ್ಲ.

ನಮ್ಮ ಬದುಕಿನಲ್ಲಿ ನಾವೂ ಹೀಗೆ ಭಯ ಮತ್ತು ಬಯಕೆಗಳಿಲ್ಲದೆ ಒಬ್ಬರನ್ನು ಪ್ರೀತಿಸಬಹುದೇ? ಸೂಫಿಗಳು ದೇವರನ್ನು ಪ್ರೇಮಿಸಿದಂತೆ ನಾವು ನಮ್ಮ ಪ್ರೇಮಿಗಳನ್ನು ಅಕಾರಣವಾಗಿ ಪ್ರೀತಿಸಬಹುದೇ? ಖಂಡಿತಾ ಸಾಧ್ಯವಿದೆ. ಮೊದಲನೆಯದಾಗಿ ನಿಮ್ಮ ಪ್ರಿಯತಮ/ಪ್ರಿಯತಮೆಯರ ಮೇಲೆ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ನಮ್ಮ ಆಜ್ಞೆಯಂತೆಯೇ ಅವರು ಬದುಕಬೇಕು ಎಂಬ ಬೆದರಿಕೆ ಭಾವವನ್ನೂ ತೊರೆದು ಬಿಡಿ. ಅವರು ಇರುವಂತೆಯೇ ಅವರನ್ನು ಸ್ವೀಕರಿಸಿ. ಅವರ ಇರುವಿಕೆಯನ್ನು ಧ್ಯಾನಿಸಿ. ಬಲವಂತದಿಂದ ಮತ್ತು ಹಿಂಸೆಯಿಂದ ಪ್ರೀತಿ ದಕ್ಕುವುದಿಲ್ಲ. ಹಾಗೆಯೇ ದೇಹ ಸೌಂದರ್ಯದ ಮೋಹಕ್ಕೋ, ಸೊತ್ತು ಸಂಪತ್ತಿನ ಆಸೆಗೋ ನಮ್ಮಿಂದ ಪ್ರೀತಿಸಲಾಗುವುದಿಲ್ಲ ಎಂಬುದೂ ನೆನಪಿರಲಿ.

ನಿಜದ ಪ್ರೇಮ ಅಕಾರಣವಾಗಿರುತ್ತದೆ. ನೀವು ಯಾಕೆ ಪ್ರೇಮಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ನಿಮ್ಮ ಬಳಿ ನಿರ್ದಿಷ್ಟ ಕಾರಣಗಳೇ ಇಲ್ಲದಿದ್ದರೆ ನೀವು ನಿಜವಾದ ಪ್ರೇಮಿಗಳಾಗಿರುತ್ತೀರಿ. ನೆನಪಿರಲಿ, ನಿಮ್ಮ ನಡುವೆ ಕಾರಣಗಳು; ಅವು ಎಷ್ಟೇ ಸಣ್ಣವಾಗಿದ್ದರೂ ಕೂಡ ಇಲ್ಲವೆಂದಾದಲ್ಲಿ ನೀವು ಅತ್ಯಂತ ಸುಂದರ ಪ್ರೇಮಿಗಳಾಗಿರುತ್ತೀರಿ.

 

Leave a Reply