ಸಂತಾನಗಳಲ್ಲಿ ಎಷ್ಟು ವಿಧ? : ಮಹಾಭಾರತ ನೀಡುವ ಪಟ್ಟಿ ಇಲ್ಲಿದೆ…

ಸನಾತನ ಸಂಪ್ರದಾಯ ವಿಶಾಲ ದೃಷ್ಟಿಕೋನದಿಂದ ಕೂಡಿದ್ದ ಜೀವನ ಸಂಸ್ಕೃತಿಯಾಗಿತ್ತು ಅನ್ನುವುದಕ್ಕೆ ಪ್ರಾಚೀನ ಸಾಹಿತ್ಯದಲ್ಲಿ ಸಾಕಷ್ಟು ಪುರಾವೆಗಳು ದೊರಕುತ್ತವೆ. ಉದಾಹರಣೆಗೆ, ಹಲವು ಬಗೆಯ ಸಂಬಂಧಗಳಿಂದ ಜನಿಸಿದ ಸಂತಾನಗಳನ್ನು ಅಗೌರವದಿಂದ ಕಾಣದೆ ನಮ್ಮ ಪೂರ್ವಜರು ಸ್ವೀಕರಿಸುತ್ತಿದ್ದ ರೀತಿ….

ಮಹಾಭಾರತದಲ್ಲಿ ಹೀಗೆ ಹಲವು ವಿಧಾನಗಳಿಂದ ಜನಿಸಿದ ಸಂತಾನಗಳ ಉಲ್ಲೇಖವಿದ್ದು, ಅವುಗಳ ಉಪಾಧಿ ಈ ಕೆಳಗಿನಂತಿವೆ:

ಔರಸ ಪುತ್ರ : ವಿಧಿ ವಿಹಿತವಾಗಿ ದಂಪತಿಗಳಿಗೆ ಹುಟ್ಟಿದ ಮಗು

ಅಪವಿದ್ದ :  ತಾಯಿ – ತಂದೆ ತಿರಸ್ಕರಿಸಿರುವ ಮಗುವನ್ನು ತಂದು ಸಾಕಿಕೊಳ್ಳುವದು..

ಕ್ರೀತ :  ಕೊಂಡು ತಂದ ಮಗು.

ಕಾನೀನ : ಮದುವೆ ಆಗುವುದಕ್ಕೆ ಮೊದಲೆ ಕನ್ಯೆಯೊಬ್ಬಳು ಪುರುಷನ ಸುಸರ್ಗದಿಂದ ಮಗವನ್ನು ಪಡೆದ ಮಗು.

ಕ್ಷೇತ್ರಜ್ಞ : ಗಂಡನಿಂದ ಮಕ್ಕಳಾಗದಿದ್ದಾಗ ಗಂಡನ / ಹಿರಿಯರ ಸಲಹೆಯಂತೆ ಪತ್ನಿಯು ಯೋಗ್ಯರನ್ನು ಆಶ್ರಯಿಸಿ ಪಡೆಯುವ ಮಗು

ಕೃತ್ರಿಮ :  ಬೆಳೆದ ಮಗುವನ್ನು ಅದರ ತಂದೆ ತಾಯಿಯ ಅನುಮತಿ ಪಡೆದು ಸಾಕಿಕೊಳ್ಳುವದು.

ಜ್ಞಾತಿ :  ಹತ್ತಿರದ ಬಂಧುವಿನ ಮೂಲಕ ಪತ್ನಿಯು ಮಗುವನ್ನು ಪಡೆಯುವುದು..

ಗೂಢಜ :  ಪರ ಭಾರ್ಯಯಿಂದ ಹುಟ್ಟಿದ, ಯಾರಿಂದ ಸಂತಾನವಾಯಿತೆಂದೇ ತಿಳಿಯದಿರುವ ಸಂಧರ್ಭದ ಶಿಶು.

ಜಾರಜ :  ಜಾರನ ಮೂಲಕ ಪತ್ನಿಯು ಸಂತಾನ ಪಡೆಯುವುದು..

ಪರೀಕ್ರೀತ : ಹಣ ನೀಡಿ ಗಂಡಸೊಬ್ಬನನ್ನು ಮನೆಗೆ ಕರೆದು ಅವನಿಂದ ಸಂತಾನ ಪಡೆಯುವುದು.

ಪೌನರ್ಭವ :  ಪರ ಸ್ತ್ರೀಯಿಂದ ಪಡೆದ ಮಗು.

ದತ್ತ : ದತ್ತು ಪುತ್ರ .

ಸಹೋಢ : ಗರ್ಭಿಣಿ ಯಾಗಿರುವಾಗ ಮದುವೆ ನಡೆದು, ನಂತರ ಹುಟ್ಟುವ ಮಗು

ಇವೆಲ್ಲವೂ ಪುಲ್ಲಿಂಗ ಸೂಚಕಗಳಾಗಿದ್ದು, ಹೆಣ್ಣುಮಕ್ಕಳನ್ನು ಆಯಾ ಪದಗಳ ಸ್ತ್ರೀಲಿಂಗವಾಚಕದಿಂದ ಗುರುತಿಸಲಾಗುತ್ತಿತ್ತು.

 

 

Leave a Reply