ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ನಮ್ಮ ಬಹಳಷ್ಟು ಸಮಸ್ಯೆಗಳು
ಶುರುವಾಗೋದೇ
ಭಾಷಾ ಶಾಸ್ತ್ರದಲ್ಲಿನ ಗೊಂದಲಗಳಿಂದಾಗಿ
ಮತ್ತು ಕೆಲವು ಸಾಮಾನ್ಯ ತಪ್ಪು ತಿಳುವಳಿಕೆಗಳಿಂದಾಗಿ.
ಶಬ್ದಗಳನ್ನು
ಕೇವಲ ಅರ್ಥದ ಮುಖ ನೋಡಿ ಬಳಸಬೇಡಿ.
ಪ್ರೇಮದ ಅಖಾಡಾದಲ್ಲಿ ಕಾಲಿಟ್ಟಾಗ
ನಾವು ಕಲಿತಿರುವ ಭಾಷೆ
ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ.
ಯಾವುದನ್ನ ಶಬ್ದಗಳ ಮೂಲಕ
ಹೇಳಲಾಗುವುದಿಲ್ಲವೋ
ಅವನ್ನೆಲ್ಲ ಮೌನದ ಮೂಲಕ ಅರ್ಥಮಾಡಿಕೊಳ್ಳಲಾಗುತ್ತದೆ.
ಮೊದಲನೆ ನಿಯಮ ಇಲ್ಲಿ ನೋಡಿ : https://aralimara.com/2019/11/14/rules/
1 Comment