ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಭಗವಂತನನ್ನು ನಾವು
ಯಾವ ರೀತಿ ಕಾಣುತ್ತೇವೆ ಎನ್ನುವುದು,
ನಮ್ಮನ್ನು ನಾವು ಯಾವ ರೀತಿ ಕಾಣುತ್ತೇವೆ ಎನ್ನುವುದರ ನೇರ ಪ್ರತಿಬಿಂಬ.
ಭಗವಂತನ ನೆನಪು
ನಮ್ಮಲ್ಲಿ ಭಯ ಮತ್ತು ದೂಷಣೆ ಹುಟ್ಟಿಸಿದರೆ,
ನಮಗೆ ನಮ್ಮ ಬಗ್ಗೆ ಭಯ ಮತ್ತು
ನಾವು ನಮ್ಮನ್ನೇ ದೂಷಣೆಗೆ ಗುರಿಮಾಡಿಕೊಂಡಿದ್ದೇವೆ
ಎಂದೇ ಅರ್ಥ.
ಭಗವಂತ ಪೂರ್ಣ
ಪ್ರೇಮಮಯಿಯಾಗಿಯೂ,
ಅಂತಃಕರಣದಿಂದ
ಕಂಗೊಳಿಸುವವನಂತೆ ಕಂಡರೆ
ನಾವೂ ಪ್ರೇಮದಲ್ಲಿ ಮುಳುಗಿದವರು
ಮತ್ತು ಅಂತಃಕರಣ ತುಂಬಿಕೊಂಡವರು.
2ನೇ ನಿಯಮ ಇಲ್ಲಿ ನೋಡಿ : https://aralimara.wordpress.com/2019/11/16/sufi-48/


[…] 3ನೇ ನಿಯಮ ಇಲ್ಲಿ ನೋಡಿ : https://aralimara.com/2019/11/20/sufi-49/ […]
LikeLike