ದೈನ್ಯ ತೋರುವುದು ಎಂದರೆ ಅಹಂಕಾರ ತೋರದಿರುವವರು ಎಂದು. ತಮ್ಮ ಅಸ್ತಿತ್ವ, ಸಾಧನೆ, ಸಂಪತ್ತೆಲ್ಲವೂ ಭಗವಂತನ ದೇಣಿಗೆ ಎಂಬ ಅರಿವು ಹೊಂದಿದವರು. ಅಂಥವರೇ ಧನ್ಯರು. ದೇವರು ಅಂಥವರನ್ನು ಪುರಸ್ಕರಿಸುತ್ತಾನೆ. ತಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪದಿಂದ ದುಃಖಿಸುವವರು ಧನ್ಯರು. ಅವರಿಗೆ ಸಮಾಧಾನ ದೊರೆಯುತ್ತದೆ. ಸಮಾಧಾನ ಹೊಂದಿದವರು ಜೀವನದ ಇತರ ಸಂಗತಿಗಳನ್ನು ಸರಾಗವಾಗುತ್ತದೆ. ವಿನಯವಂತರು ಧನ್ಯರು. ಅವರಿಗೆ ಎಲ್ಲೆಡೆ ಮನ್ನಣೆ ದೊರೆಯುತ್ತದೆ. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಈ ಅರ್ಥದಲ್ಲಿ ಭೂಮಿ ಅವರದಾಗುತ್ತದೆ.