ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ
ಭೂಮಿಯ ಮೇಲಿರುವ
ನಕಲೀ ಗುರುಗಳ
ಮತ್ತು ಕಪಟಿ ಶಿಕ್ಷಕರ ಸಂಖ್ಯೆ
ಬ್ರಹ್ಮಾಂಡದಲ್ಲಿರುವ
ಒಟ್ಟು ನಕ್ಷತ್ರಗಳ ಸಂಖ್ಯೆಗಿಂತ ಹೆಚ್ಚು.
ಅಧಿಕಾರದ ಲಾಲಸೆ,
ಸ್ವಂತ ಹಿತಾಸಕ್ತಿಗಳೇ ಉಸಿರಾಗಿರುವ
ಇಂಥ ಮೋಸಗಾರರನ್ನ
ನಿಜದ ಮಾರ್ಗದರ್ಶಕರೆಂದು
ಗೊಂದಲ ಮಾಡಿಕೊಳ್ಳಬೇಡಿ.
ನಿಜದ ಅಧ್ಯಾತ್ಮ ಸಾಧಕ
ನಿಮ್ಮ ಗಮನವನ್ನ ತನ್ನೆಡೆಗೆ ಬಯಸುವುದಿಲ್ಲ,
ಸಂಪೂರ್ಣ ಶರಣಾಗತಿಯನ್ನ
ನಿಮ್ಮಿಂದ ನಿರೀಕ್ಷಿಸುವುದಿಲ್ಲ,
ನಿಮ್ಮ ಮೆಚ್ಚುಗೆ ಮತ್ತು ಹೊಗಳಿಕೆಯನ್ನ ಸಹಿಸುವುದಿಲ್ಲ.
ನಿಜದ ಗುರು,
ಗಾಜಿನಂತೆ ಪಾರದರ್ಶಕ,
ಭಗವಂತನ ಬೆಳಕು ಹಾಯ್ದು ಹೋಗಲು
ಅವಕಾಶ ಮಾಡಿಕೊಡುತ್ತಾನೆ
ತನ್ನ ಮೂಲಕ.
15ನೇ ನಿಯಮ ಇಲ್ಲಿ ನೋಡಿ : https://aralimara.com/2019/12/21/sufi-64/
[…] 16ನೇ ನಿಯಮ ಇಲ್ಲಿ ನೋಡಿ: https://aralimara.com/2020/01/03/sufi-67/ […]