ನಕ್ಷತ್ರಗಳು ಸ್ವಭಾವ ಹೇಳುತ್ತವೆ! ನಿಮ್ಮ ನಕ್ಷತ್ರ ಯಾವುದು?

ನಿರ್ದಿಷ್ಟ ರಾಶಿ – ನಕ್ಷತ್ರಗಳಲ್ಲಿ ಜನಿಸಿದವರು ನಿರ್ದಿಷ್ಟ ಸ್ವಭಾವ ಹೊಂದಿರುತ್ತಾರೆ ಎಂಬ ನಂಬಿಕೆ ಜಾಗತಿಕವಾಗಿದೆ. ಅದರಂತೆ ಹಿರಿಯರು ಇಂಥಾ ನಕ್ಷತ್ರದವರ ಸ್ವಭಾವ ಹೀಗಿದೆ ಎಂದು ಬರೆದಿಟ್ಟಿದ್ದು, ಅವುಗಳಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ಸಾರಾಂಶ ಇಲ್ಲಿ ನೀಡಿದ್ದೇವೆ. ನೀವೂ ನಕ್ಷತ್ರಗಳ ಆಧಾರದ ಮೇಲೆ ಸ್ವತಃ ನಿಮ್ಮ ಅಥವಾ ನಿಮ್ಮ ಪ್ರೀತಿಪಾತ್ರರ ಅಥವಾ ಇತರರ ಸ್ವಭಾವ ತಿಳಿಯಬಹುದು. ಯತ್ನಿಸಿ ನೋಡಿ!

ಅಶ್ವಿನಿ
ಈ ನಕ್ಷತ್ರದಲ್ಲಿ ಜನಿಸಿರುವವರಿಗೆ ವಿದ್ಯೆಗಿಂತಲೂ ಬುದ್ದಿಶಕ್ತಿ ಹೆಚ್ಚು. ಇವರು ಬಹಳ ಬೇಗ ಜನರ ಸ್ನೇಹ ಸಂಪಾದಿಸುತ್ತಾರೆ.
ಈ ನಕ್ಷತ್ರದ ಅಧಿಪತಿ ಕೇತು.

ಭರಣಿ
ಭರಣಿ ನಕ್ಷತ್ರದವರು ಧರಣಿ ಆಳುತ್ತಾರೆ ಅಂತ ಮಾತಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಅಧಿಕಾರಯುತವಾಗಿ ಮಾತಾಡಬಲ್ಲರು, ಮತ್ತೊಬ್ಬರಿಗೆ ಮಾರ್ಗದರ್ಶನವನ್ನೂ ಮಾಡಬಲ್ಲರು. ಇವರು ಏನೇ ಕೆಲಸ ಮಾಡಲಿ ಹತ್ತು ಸಲ ಯೊಚನೆ ಮಾಡಿ ಮಾಡುತ್ತಾರೆ.
ಈ ನಕ್ಷತ್ರದ ಅಧಿಪತಿ ಶುಕ್ರ.

ಕೃತ್ತಿಕಾ
ಈ ನಕ್ಷತ್ರದಲ್ಲಿ ಜನಿಸಿದವರು ಒಳ್ಳೆಯ ಕೆಲಸಗಾರರು. ತಾವು ಯಾವದೇ ಕೆಲಸ ಮಾಡಲಿ, ಆ ಕೆಲಸಕ್ಕೆ ನ್ಯಾಯ ಒದಗಿಸುವರು. ‌ಆದರೆ ಇವರಲ್ಲಿ ಅಹಂ ಸ್ವಲ್ಪ ಜಾಸ್ತಿ.
ಈ ನಕ್ಷತ್ರದ ಅಧಿಪತಿ ರವಿ.

ರೋಹಿಣಿ
ಈ ನಕ್ಷತ್ರದವರು ಉತ್ತಮ ಸ್ವಭಾವ. ಇವರು ಅತಿಥಿ ಸತ್ಕಾರ ಮನೋಭಾವದವರು, ಉತ್ತಮ ಅಭಿರುಚಿ ಉಳ್ಳವರು.
ಈ ನಕ್ಷತ್ರದ ಅಧಿಪತಿ ಚಂದ್ರ.

ಮೃಗಶಿರಾ
ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು. ಆದರೆ ಆಲಸಿಗಳಾದ ಇವರು ತಮ್ಮ ಬುದ್ಧಿಶಕ್ತಿಯನ್ನು ಇವರು ಉಪಯೋಗಿಸುವುದು ಕಡಿಮೆ. ಈ ನಕ್ಷತ್ರದಲ್ಲಿ ಜನಿಸಿದವರು ಭೋಗ ಪ್ರೀಯರು.
ಈ ನಕ್ಷತ್ರದ ಅಧಿಪತಿ ಕುಜ.

ಆರ್ದ್ರಾ
ಈ ನಕ್ಷತ್ರದಲ್ಲಿ ಜನಿಸಿದವರಲ್ಲಿ ಗೊಂದಲದ ಮನಸ್ಥಿತಿ ಇರುತ್ತದೆ. ಇವರು ಬೇಗನೆ ನಿರ್ದಾರ ತೆಗೆದುಕೊಳ್ಳುವುದಿಲ್ಲ . ಆದರೆ ಒಂದು ಸಲ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಅದಕ್ಕೆ ಬದ್ಧರಾಗಿರುತ್ತಾರೆ.
ಈ ನಕ್ಷತ್ರ ದ ಅಧಿಪತಿ ರಾಹು.

ಪುನರ್ವಸು
ಈ ನಕ್ಷತ್ರದಲ್ಲಿ ಜನಿಸಿದವರದು ಒಳ್ಳೆಯ ಸ್ವಭಾವ. ದೈವ ಭಕ್ತಿ ಹೆಚ್ಚು. ಇವರು ಎಲ್ಲರೊಂದಿಗೆ ಹಂಚಿ ತಿನ್ನುವ ಪ್ರವೃತ್ತಿ ಯವರು.
ಈ ನಕ್ಷತ್ರದ ಅಧಿಪತಿ ಗುರು.

ಪುಷ್ಯ
ಈ ನಕ್ಷತ್ರದಲ್ಲಿ ಜನಿಸಿದವರು ರಾಜಕೀಯ ಇಷ್ಟ ಪಡುವವರು. ಜನ ಸೇವೆಯಲ್ಲಿ ಒಲವು ತೋರುವವರು. ಗುರು ಹಿರಿಯರಲ್ಲಿ ಗೌರವ ತೋರುವವರು.
ಈ ನಕ್ಷತ್ರದ ಅಧಿಪತಿ ಶನಿ.

ಆಶ್ಲೇಷಾ
ಈ ನಕ್ಷತ್ರದಲ್ಲಿ ಜನಿಸಿದವರು ಆಡಂಬರಪ್ರಿಯರು ಮತ್ತು ಅಲಂಕಾರಕ್ಕೆ ಮನ ಸೋಲುವವರು. ಇವರು ಸೌಂದರ್ಯಪ್ರಿಯರು.
ಈ ನಕ್ಷತ್ರದ ಅಧಿಪತಿ ಬುಧ.

ಮಖಾ
ಈ ನಕ್ಷತ್ರದಲ್ಲಿ ಜನಿಸಿದವರು ತುಸು ಹೆಚ್ಚೆನಿಸುವಷ್ಟೇ ಸ್ವಾಭಿಮಾನಿಗಳು. ಯಾರ ಬಳಿಯಾದರೂ ಸಹಾಯ ಕೇಳುವುದು ಅಪರೂಪ ಎನಿಸುವಷ್ಟು ಕಡಿಮೆ.
ಈ ನಕ್ಷತ್ರದ ಅಧಿಪತಿ ಕೇತು.

ಪುಬ್ಬಾ
ಈ ನಕ್ಷತ್ರದವರು ಸ್ವಭಾವತಃ ಹಾಸ್ಯ ಪ್ರಿಯರು. ಇವರಲ್ಲಿ ಸಿಟ್ಟು ಕಡಿಮೆ, ತಾಳ್ಮೆ ಜಾಸ್ತಿ. ಎಲ್ಲರೊಡನೆ ಹೊಂದಿಕೊಂಡು ಹೋಗುವ ಸ್ವಭಾವ.
ಈ ನಕ್ಷತ್ರದ ಅಧಿಪತಿ ಶುಕ್ರ.

ಉತ್ತರಾ
ಈ ನಕ್ಷತ್ರದವರು ವ್ಯಾವಹಾರಿಕವಾಗಿ ವಿಪರೀತ ಚತುರರು. ಎಲ್ಲರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳುವರು.‌ ಈ ನಕ್ಷತ್ರದ ಅಧಿಪತಿ ರವಿ.

ಹಸ್ತಾ
ಈ ನಕ್ಷತ್ರದವರು ವಿಲಾಸಿಪ್ರಿಯರು. ಈ ನಕ್ಷತ್ರದವರಿಗೆ ಸಿಟ್ಟು ಜಾಸ್ತಿ. ಆದರೆ ಒಳ್ಳೆಯ ಹೃದಯವಂತರು.
ಈ ನಕ್ಷತ್ರದ ಅಧಿಪತಿ ಚಂದ್ರ.

ಚಿತ್ತಾ
ಈ ನಕ್ಷತ್ರದಲ್ಲಿ ಜನಿಸಿರುವವರು ಸಮಚಿತ್ತ ಉಳ್ಳವರು, ಕವಿಗಳು; ಇವರಿಗೆ ಸಾಹಿತ್ಯ ಅಧ್ಯಯನದಲ್ಲಿ ಹೆಚ್ಚು ಆಸಕ್ತಿ. ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹೆಚ್ಚು ಆಸಕ್ತಿ.
ಈ ನಕ್ಷತ್ರದ ಅಧಿಪತಿ ಕುಜ.

ಸ್ವಾತಿ
ಸ್ವಾತಿ ನಕ್ಷತ್ರದವರು ಮೃದು ಸ್ವಭಾವದವರು. ಬಹಳ ಬೇಗ ಇನ್ನೊಬ್ಬರನ್ನು ನಂಬಿಬಿಡುತ್ತಾರೆ. ಪರರಿಗೆ ಸಹಾಯ ಮಾಡಲು ಸದಾ ಮುಂದು.
ಈ ನಕ್ಷತ್ರದ ಅಧಿಪತಿ ರಾಹು.

ವಿಶಾಖ
ಈ ನಕ್ಷತ್ರದವರು ಬುದ್ದಿವಂತರು. ಆದರೆ ಇವರದು ಹಠದ ಸ್ವಭಾವ. ಯಾವ ಕೆಲಸ ಮಾಡಲಿಕ್ಕೂ ಹಿಂಜರಿಯದವರು. ಶ್ರಮವಹಿಸಿ ಕೆಲಸ ಮಾಡುವರು.
ಈ ನಕ್ಷತ್ರದ ಅಧಿಪತಿ ಗುರು.

ಅನುರಾಧಾ
ಈ ನಕ್ಷತ್ರದವರು ಕುಟುಂಬದಲ್ಲಿ ಎಲ್ಲರಿಗೂ ಪ್ರೀತಿಪಾತ್ರರು. ಎಲ್ಲರನ್ನೂ ನಿಭಾಯಿಸಿಕೊಂಡು ಹೋಗಬಲ್ಲವರು. ತಮಗೆ ವಹಿಸಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬಲ್ಲವರು. ಬದ್ಧತೆಯಿಂದ ಕೆಲಸ ಮಾಡುವರು.
ಈ ನಕ್ಷತ್ರದ ಅಧಿಪತಿ ಶನಿ.

ಜೇಷ್ಠಾ
ಜಗಳ ಎಂದರೆ ಏನೆಂದೇ ಅರಿಯದವರು ಈ ನಕ್ಷತ್ರದಲ್ಲಿ ಜನಿಸಿದವರು. ಇವರದು ನಿರ್ಮಲ ಸ್ವಭಾವ. ಯಾರ ತಂಟೆಗೂ ಹೋಗದೆ ತಮ್ಮ ಪಾಡಿಗೆ ತಾವಿರುತ್ತಾರೆ.
ಈ ನಕ್ಷತ್ರದ ಅಧಿಪತಿ ಬುಧ.

ಮೂಲಾ
ಈ ನಕ್ಷತ್ರದವರು ಕಲಾಪ್ರಿಯರು. ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿರಬಲ್ಲವರು. ಶ್ರದ್ಧೆಯಿಂದ ದುಡಿಯುವರು. ಆದರೆ ಇವರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಲೇ ಇರುವುದು.
‌ಈ ನಕ್ಷತ್ರದ ಅಧಿಪತಿ ಕೇತು.

ಪೂರ್ವಾಷಾಢ
ಈ ನಕ್ಷತ್ರದಲ್ಲಿ ಜನಿಸಿದವರು ವಿನಯವಂತರೂ ಮಿತಬಾಷಿಗಳೂ ಆಗಿರುತ್ತಾರೆ. ಬೇರೆಯವರ ದುಃಖಕ್ಕೆ ಬೇಗನೆ ಸ್ಪಂದಿಸುತ್ತಾರೆ.
ಈ ನಕ್ಷತ್ರದ ಅಧಿಪತಿ ಶುಕ್ರ.

ಉತ್ತರಾಷಾಢ
ಈ ನಕ್ಷತ್ರದಲ್ಲಿ ಜನಿಸಿದವರು ಸಮಚಿತ್ತದಿಂದ ನಡೆದುಕೊಳ್ಳುವವರು. ವಿನಯವಂತರಾದ ಇವರ ಮಾತು ಕೂಡಾ ಅತಿ ಸೌಮ್ಯ. ಇವರು ಎಲ್ಲರಿಗೂ ಇಷ್ಟವಾಗುವರು.
ಈ ನಕ್ಷತ್ರದ ಅಧಿಪತಿ ರವಿ.

ಶ್ರವಣ 
ಈ ನಕ್ಷತ್ರದವರು ತಮ್ಮ ತಪ್ಪನ್ನು ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ. ಆದರೆ ಮತ್ತೊಬ್ಬರ ನೋವಿಗೆ ಸ್ಪಂದಿಸುವ ಗುಣ ಇವರಲ್ಲಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಪರೋಪಕಾರಿ ಎಂದೇ ಗುರುತಿಸಲ್ಪಡುತ್ತಾರೆ.

ಈ ನಕ್ಷತ್ರದ ಅಧಿಪತಿ ಚಂದ್ರ.

ಧನಿಷ್ಠ
ಈ ನಕ್ಷತ್ರದಲ್ಲಿ ಜನಿಸಿದವರು ಮಾತಿನಲ್ಲಿ ನಿಪುಣರಾದರೂ ಸ್ವಲ್ಪ ಕಠೋರ.  ಕೆಲವೊಮ್ಮೆ ಬೇಜವಾಬ್ದಾರಿ ಅನ್ನಿಸುವಷ್ಟು ಸೋಮಾರಿತನ. ಮತ್ತೊಬ್ಬರನ್ನು ನಂಬಿ ಕೆಡುವುದು ಜಾಸ್ತಿ. ತಮ್ಮ್ನನು ನಂಬಿದವರ ಕೈಬಿಡುವವರಲ್ಲ.

ಈ ನಕ್ಷತ್ರದ ಅಧಿಪತಿ ಕುಜ.

ಶತಭಿಷಾ 
ಈ ನಕ್ಷತ್ರದವರದು ಸಮಯ – ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಚತುರ ಸ್ವಭಾವ. ಹಿಡಿದ ಕೆಲಸ ಮಾಡಿಮುಗಿಸುವವರೆಗೂ ಬೇರೆ ಏನನ್ನೂ ಯೋಚಿಸುವವರಲ್ಲ. ದುಡಿಮೆಯಲ್ಲೂ ಮುಂದು, ಭೋಗದಲ್ಲೂ ಮುಂದು.

ಈ ನಕ್ಷತ್ರದ ಅಧಿಪತಿ ರಾಹು.

ಪೂರ್ವಾಭಾದ್ರಾ
ಈ ನಕ್ಷತ್ರದವರಿಗೆ ಶ್ರದ್ಧೆ ಜಾಸ್ತಿ. ಯಾವದೇ ವಿಷಯವಾದರೂ ಸರಿ. ಕೂಲಂಕಷವಾಗಿ ಅಧ್ಯಯನ ಮಾಡಿ ತಿಳಿದುಕೊಳ್ಳದೆ ಒಪ್ಪಿಕೊಳ್ಳುವ ಜಾಯಮಾನ ಇವರದಲ್ಲ.

ಈ ನಕ್ಷತ್ರದ ಅಧಿಪತಿ ಗುರು.

ಉತ್ತರಾಭಾದ್ರಾ 
ಇವರ ಮಾತಿನಲ್ಲೊಂದು ಗತ್ತು ಇರುತ್ತದೆ. ಚಾತುರ್ಯವಿದ್ದರೂ ಮಿತಭಾಷಿಗಳು. ತಮ್ಮ ಗಾಂಭೀರ್ಯದಿಂದಲೇ ಎಲ್ಲರನ್ನೂ ಸೆಳೆಯಬಲ್ಲವರು. ಎಲ್ಲಿ ಹೋದರೂ ಇವರು ಗೌರವ ಗಳಿಸುತ್ತಾರೆ.

ಈ ನಕ್ಷತ್ರದ ಅಧಿಪತಿ ಶನಿ.

ರೇವತಿ 
ಈ ನಕ್ಷತ್ರದವರು ಸ್ವಭಾವತಃ ಒಳ್ಳೆಯವರು, ಅಧ್ಯಾತ್ಮದ ಒಲವು ಹೊಂದಿರುವವರು. ದೇವರಲ್ಲಿ ನಂಬಿಕೆ – ಭಕ್ತಿ ಹೆಚ್ಚು. ಆದರೆ ಇವರು ಸ್ವಲ್ಪ ಅಹಂ ಹೊಂದಿರುತ್ತಾರೆ.

ಈ ನಕ್ಷತ್ರದ ಅಧಿಪತಿ ಬುಧ.

 

 

Leave a Reply