ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #25

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಯತಿ ಎಂದರೆ
ಬದುಕು, ಪೂರ್ವ ನಿರ್ಧಾರಿತ ಎಂದಲ್ಲ.

ವಿಧಿ ಎಂದು ಕೈ ಚೆಲ್ಲಿ
ಬದುಕಿನ ಸಂಗೀತಕ್ಕೆ
ಯಾವ ಹೊಸ ರಾಗಗಳನ್ನೂ ಸೇರಿಸದೆ
ಸುಮ್ಮನಿರುವುದು
ಅಪ್ಪಟ ಮೂರ್ಖತನ.

ನಲವತ್ತು ಹಂತಗಳಲ್ಲಿ
ಸಂಯೋಜನೆಗೊಂಡಿರುವ
ಬದುಕಿನ ಸಂಗೀತ,
ಬ್ರಹ್ಮಾಂಡದ ಪ್ರತಿಯೊಂದರಲ್ಲೂ
ತನ್ನ ಗುಟ್ಟು ಬಚ್ಚಿಟ್ಟುಕೊಂಡಿದೆ.

ನಿನ್ನ ನಿಯತಿ ನಿರ್ಧಾರವಾಗೋದು
ಯಾವ ಹಂತದಲ್ಲಿ ನಿಂತು
ನೀನು ರಾಗ ನುಡಿಸುತ್ತಿರುವೆ
ಎನ್ನುವುದರ ಮೇಲೆ.

ವಾದ್ಯ ಬದಲಾಯಿಸುವುದು
ಸಾಧ್ಯವಾಗದೇ ಹೋಗಬಹುದು
ಆದರೆ
ಅದ್ಭುತ ಸಂಗೀತ ನುಡಿಸುವುದು ಮಾತ್ರ
ನಿನ್ನ ಕಲೆ, ನಿನ್ನ ಬದ್ಧತೆ.

24ನೇ ನಿಯಮ ಇಲ್ಲಿ ನೋಡಿ: https://aralimara.com/2020/01/22/sufi-75/

1 Comment

Leave a Reply to ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #26 – ಅರಳಿಮರCancel reply