ಸನಾತನ ಸಾಹಿತ್ಯದ ಪ್ರಬೋಧಕ ಗೀತೆಗಳು

ನಮಗೆ ಭಗವದ್ಗೀತೆ ಗೊತ್ತು. ಭಗವದ್ಗೀತೆಯಂತೆಯೇ ಇನ್ನಿತರ ಕೆಲವು ತಿಳಿವಿನ ಗಣಿಗಳೂ ಇವೆ. ಅವುಗಳಲ್ಲಿ ಎಂಟು ಗೀತೆಗಳ ಕಿರು ಮಾಹಿತಿ ಇಲ್ಲಿದೆ…

ಅನು ಗೀತಾ
ಕುರುಕ್ಷೇತ್ರ ಯುದ್ಧಾನಂತರ ಪಾಂಡವರು ರಾಜ್ಯಕಾರ್ಯಗಳಲ್ಲಿ ನಿರತರಾಗುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಬೋಧಿಸಿದ ಗೀತೆ ಇದು.

ಉದ್ಧವ ಗೀತಾ
ಭಾಗವತ ಪುರಾಣದಲ್ಲಿ ಬರುವ ಉದ್ಧವ ಗೀತೆಯನ್ನು ಹಂಸ ಗೀತಾ ಎಂದೂ ಕರೆಯಲಾಗುತ್ತದೆ. ಶ್ರೀ ಕೃಷ್ಣ ತನ್ನ ಅವತಾರ ಲೀಲೆ ಮುಗಿಸಿ ವೈಕುಂಠಕ್ಕೆ ತೆರಳುವ ಮುನ್ನ ತನ್ನ ಸಂಗಾತಿ ಉದ್ಧವನಿಗೆ ನೀಡುವ ಬೋಧನೆ ಈ ಗೀತೆಯಲ್ಲಿದೆ.

ವ್ಯಾಧ ಗೀತಾ
ಇದು ಮಹಾಭಾರತದಲ್ಲಿ ಬರುತ್ತದೆ. ವ್ಯಾಧನೊಬ್ಬ (ಬೇಡ) ಗರ್ವಿಷ್ಠ ಆಶ್ರಮವಾಸಿಗೆ ಜೀವನ ಮೌಲ್ಯಗಳನ್ನು ಬೋಧಿಸುವ ಗೀತೆಯಿದು. ಗೃಹಸ್ಥ ಜೀವನದಲ್ಲಿ ಅಧ್ಯಾತ್ಮ, ಸೇವೆ, ಸತ್ಕರ್ಮಗಳು ಮೊದಲಾದವನ್ನು ವ್ಯಾಧ ಈ ಗೀತೆಯ ಮೂಲಕ ಬೋಧಿಸುತ್ತಾನೆ.

ಗುರು ಗೀತಾ
ಮಹಾದೇವನು ಪಾರ್ವತಿಗೆ ಆಧ್ಯಾತ್ಮಿಕ ಮೌಲ್ಯಗಳು ಮತ್ತು ಅವುಗಳ ಸಾಧನೆಯನ್ನು ಬೋಧಿಸುವ ಗೀತೆಯಿದು. ಶಿವನು ಗುರುವಾಗಿ ತನ್ನ ಪತ್ನಿಗೆ ಬೋಧಿಸುವ ಈ ಗೀತೆ, ಸ್ಕಂದ ಪುರಾಣದಲ್ಲಿ ಬರುತ್ತದೆ.

ಗಣೇಶ ಗೀತಾ
ಗಜಾನನಾದ ಗಣೇಶನು ವರೇಣ್ಯನೆಂಬ ರಾಜನಿಗೆ ಜಗತ್ತಿನ ಸತ್ಯದರ್ಶನ ಮಾಡಿಸುವ ಗೀತೆಯಿದು. ಗಣೇಶ ಪುರಾಣದಲ್ಲಿದೆ.

ಅವಧೂತ ಗೀತಾ
ಇದು, ತಾಂತ್ರಿಕರ ಮಹಾಗುರು ದತ್ತಾತ್ರೇಯ ಪರಮಸತ್ಯವನ್ನು ವಿವರಿಸುವ ಗೀತೆ.

ಅಷ್ಟಾವಕ್ರ ಗೀತಾ
ಅಷ್ಟಾವಕ್ರ ಋಷಿಯು ಜನಕ ರಾಜನಿಗೆ ಬೋಧಿಸುವ ಗೀತೆಯೇ ಅಷ್ಟಾವಕ್ರ ಗೀತೆ. ಇದರಲ್ಲಿ ಅಷ್ಟಾವಕ್ರನು ಆತ್ಮದ ಕುರಿತು ಬೋಧಿಸುತ್ತಾನೆ.

ರಾಮ ಗೀತಾ
ಸೀತಾಪರಿತ್ಯಾಗದ ನಂತರ ರಾಮನು ಲಕ್ಷ್ಮಣನಿಗೆ ಬೋಧಿಸುವ ಗೀತೆಯೇ ರಾಮ ಗೀತೆ. ಅತ್ತಿಗೆಯನ್ನು ಕಾಡಿಗೆ ಬಿಟ್ಟು ಬಂದು ದುಃಖ ತೋಡಿಕೊಳ್ಳುವ ಲಕ್ಷ್ಮಣನನ್ನು ಸಮಾಧಾನಪಡಿಸಲು ರಾಮನು ಇದನ್ನು ಬೋಧಿಸುತ್ತಾನೆ.

Leave a Reply