ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #28

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಭಗವಂತ,
ಮಂದಿರ, ಮಸಿದಿ, ಚರ್ಚುಗಳಿಗೆ
ಸೀಮಿತನಲ್ಲವಾದ್ದರಿಂದ,
ಬ್ರಹ್ಮಾಂಡದ ಯಾವುದರ ಮುಖಾಂತರವೂ
ಯಾರ ಮೂಲಕವೂ
ನೀವು ಅವನನ್ನು ತಲುಪಬಹುದು.

ಆದರೂ ನಿಮಗೆ
ಅವನ ಖಾಸಾ ಮನೆಯನ್ನು ಹುಡುಕುವ
ಹುಕಿ ಇದ್ದರೆ,
ನಿಜದ ಪ್ರೇಮಿಯ
ಹೃದಯದ ಬಾಗಿಲನ್ನ ತಟ್ಟಿ.

ಭಗವಂತನ ಮನೆ ಇರುವುದೇ ಅಲ್ಲಿ,
ಪ್ರೇಮ ಇರುವಲ್ಲಿ.

ಭಗವಂತನನ್ನು ಕೇಳುವ ಉಮೇದು ನಿಮಗಿದ್ದರೆ,
ಹೃದಯದಲ್ಲಿ ಪಿಸುಗುಡುತ್ತಿರುವ
ಪ್ರೇಮದ ದನಿಗೆ ಕಿವಿಯಾಗಿ.

27ನೇ ನಿಯಮ ಇಲ್ಲಿ ನೋಡಿ : https://aralimara.com/2020/02/01/sufi-80/

One thought on “ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #28

Leave a Reply