28 ವ್ಯಾಸರು : ಯಾವ ಮನ್ವಂತರದಲ್ಲಿ ಯಾರು!?

ಪರಾಶರ ಮುನಿಗಳು ಹೇಳುವಂತೆ ವೈವಸ್ವತ ಮನ್ವಂತರದ ಪ್ರತಿ ದ್ವಾಪರಯುಗದಲ್ಲಿಯೂ ಇಪ್ಪತ್ತೆಂಟು ಬಾರಿ ವೇದವನ್ನು ವಿಭಜಿಸಲಾಯಿತು. ವಿಷ್ಣುಪುರಾಣದಲ್ಲಿ ಹೇಳಲಾಗಿರುವಂತೆ 28 ವ್ಯಾಸರು ಮತ್ತು ಅವರು ವೇದವಿಭಜನೆ ಮಾಡಿದ ಮನ್ವಂತರದ ಹೆಸರುಗಳು ಇಲ್ಲಿದೆ… 

“ವ್ಯಸ್ಯತಿ ವೇದಾನ್ ಇತಿ ವ್ಯಾಸಃ” ಅನಂತವಾದ ವೇದರಾಶಿಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳಾಗಿ ವಿಭಜಿಸಿದ್ದರಿಂದ ವೇದವ್ಯಾಸ ಎಂಬ ಹೆಸರಿನ ಉತ್ಪತ್ತಿಯಾಗಿದೆ.

ವ್ಯಾಸರೆಂದರೆ ಒಬ್ಬರೇ ವ್ಯಕ್ತಿಯಲ್ಲ. ಅದೊಂದು ಉಪಾಧಿ. ಅದೊಂದು ಪದವಿ. ಮಹಾಭಾರತ ಬರೆದವರು  ಕೃಷ್ಣದ್ವೈಪಾಯನ ವ್ಯಾಸರು. ಅವರಂತೆಯೇ ಪ್ರತಿ ಮನ್ವಂತರದಲ್ಲೂ ಒಬ್ಬೊಬ್ಬ ವ್ಯಾಸರು ಆಗಿಹೋಗಿದ್ದಾರೆಂದು ಪರಾಶರ ಮುನಿಗಳು ಹೇಳುತ್ತಾರೆ. ವಿಷ್ಣು ಪುರಾಣದಲ್ಲಿ ಇದನ್ನು ವಿವರವಾಗಿ ಕೊಡಲಾಗಿದೆ.

ಪರಾಶರ ಮುನಿಗಳು ಹೇಳುವಂತೆ ವೈವಸ್ವತ ಮನ್ವಂತರದ ಪ್ರತಿ ದ್ವಾಪರಯುಗದಲ್ಲಿಯೂ ಇಪ್ಪತ್ತೆಂಟು ಬಾರಿ ವೇದವನ್ನು ವಿಭಜಿಸಲಾಯಿತು.

ಈ ಮನ್ವಂತರದ ಇಪ್ಪತ್ತೆಂಟು ದ್ವಾಪರಯುಗಗಳಲ್ಲಿ ಇಪ್ಪತ್ತೆಂಟು ವ್ಯಾಸರು ಬಂದು ಹೋದರು. ಅವರು ಪ್ರತೀ ದ್ವಾಪರಯುಗದಲ್ಲಿ ವೇದವನ್ನು ನಾಲ್ಕು ಭಾಗ ಮಾಡಿದರು. ಮೊದಲನೇ ದ್ವಾಪರದಲ್ಲಿ ಸೃಷ್ಟಿಕರ್ತಬ್ರಹ್ಮನೂ, ಎರಡನೆಯದರಲ್ಲಿ ಮನುವೂ, ಮೂರನೆಯದರಲ್ಲಿ ಶುಕ್ರನೂ , ನಾಲ್ಕನೆಯದರಲ್ಲಿ ಬೃಹಸ್ಪತಿಯೂ , ಐದನೆಯದರಲ್ಲಿ ಸೂರ್ಯನೂ ,ಆರನೆಯದರಲ್ಲಿ ಮೃತ್ಯುವೂ , ಏಳನೆಯದರಲ್ಲಿ ಚಂದ್ರನೂ , ಎಂಟನೆಯದರಲ್ಲಿ ವಸಿಷ್ಠನೂ , ಒಂಭತ್ತನೆಯದರಲ್ಲಿ ಸಾರಸ್ವತನೂ , ಹತ್ತನೆಯದರಲ್ಲಿ ತ್ರಿಧಾಮನೂ ವ್ಯಾಸರಾಗಿದ್ದರು. ಕ್ರಮವಾಗಿ ಹನ್ನೊಂದರಿಂದ ಇಪ್ಪತ್ತೆಂಟರವರೆಗೂ ತ್ರಿವೃಷಾ , ಭರದ್ವಾಜ, ಅಂತರಿಕ್ಷ,ಧರ್ಮಿ, ತ್ರಯ್ಯಾರುಣಿ, ಧನಂಜಯ, ಕೃತಂಜಯ, ಸಂಜಯ, ಭಾರದ್ವಾಜ, ಗೌತಮ, ಉತ್ತಮ , ವೇನ, ವಾಜಶ್ರವ, ಋಕ್ಷಭಾರ್ಗವ , ಶಕ್ತಿ,  ಪರಾಶರ, ಜಾತಕರ್ಣ, ಕೃಷ್ಣದ್ವೈಪಾಯನ ಎಂಬುವರು ವ್ಯಾಸರಾದರು.

ವೇದವು ಪ್ರತಿದ್ವಾಪರಯುಗದ ಕೊನೆಯ ಸಂಧಿಕಾಲದಲ್ಲಿ ಈ ವ್ಯಾಸರಿಂದ ನಾಲ್ಕುಭಾಗವಾಗಿ ವಿಭಜಿಸಲ್ಪಟ್ಟಿತು. ಕೃಷ್ಣದ್ವೈಪಾಯನ ನಂತರ, ಮುಂದೆ ದ್ರೋಣನ ಮಗನಾದ ಅಶ್ವತ್ಥಾಮನು ವ್ಯಾಸನಾಗುವನು.

(ಆಕರ : ಸತ್ಯಪ್ರಕಾಶ)

1 Comment

Leave a Reply