ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #31

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಮ್ಮ
ನಂಬಿಕೆ, ವಿಶ್ವಾಸಗಳು
ನಿಮ್ಮೊಳಗೆ ಗಟ್ಟಿಯಾಗಿ ಬೇರೂರ ಬೇಕಾದರೆ
ಮೊದಲು ನಿಮ್ಮ ಹೃದಯ
ಮೃದುವಾಗಬೇಕು, ಆರ್ದ್ರವಾಗಬೇಕು.

ನಿಜ,
ಅನಾರೋಗ್ಯ, ಅಪಘಾತ, ವಿರಹ,
ಮೋಸ, ದುಗುಡ,
ಒಂದಿಲ್ಲೊಂದು ರೀತಿಯಿಂದ ನಮ್ಮನ್ನು
ಹಣ್ಣು ಮಾಡುತ್ತವೆ,
ಹೆಚ್ಚೆಚ್ಚು ನಿಸ್ವಾರ್ಥಿಗಳನ್ನಾಗಿ,
ಉದಾರಿಗಳನ್ನಾಗಿ, ಉದಾತ್ತರನ್ನಾಗಿಸುತ್ತವೆ,
ನಮ್ಮಅಹಂಕಾರ, ತಾರತಮ್ಯ ಸ್ವಭಾವಗಳನ್ನು
ಎಚ್ಚರಿಸುತ್ತವೆ.

ಆದರೆ,
ಕೆಲವರು ಮಾತ್ರ
ಬದುಕಿನಿಂದ ಪಾಠ ಕಲಿತು
ಅಂತಃಕರುಣಿಗಳಾಗುತ್ತಾರೆ,

ಇನ್ನೂ ಕೆಲವರು
ಮತ್ತಷ್ಟು ಕಠಿಣರಾಗುತ್ತ
ಬದುಕಿಗೆ ಸವಾಲಾಗುತ್ತಾರೆ.

30ನೇ ನಿಯಮ ಇಲ್ಲಿ ನೋಡಿ :  https://aralimara.com/2020/02/08/sufi-84/

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

9 Responses

  1. Shashanka

    ಹೌದು, ನಿಯಮ ೧೨ ನನಗೂ ಸಿಗಲಿಲ್ಲ, ದಯವಿಟ್ಟು ಲಿಂಕನ್ನು ಮತ್ತೊಮ್ಮೆ ಶೇರ್ ಮಾಡಿ ಸರ್.

      1. Ramesh

        Sir, Please help me to find ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #12. I am unable find that sir, Many Thanks

Leave a Reply