ಅಂತಿಮ ಪ್ರವಾದಿ ಹೇಳಿದ್ದು : ಅರಳಿಮರ POSTER

“ತನ್ನನ್ನು ತಾನು ಅರಿತವರು ಅಲ್ಲಾಹ್’ನನ್ನು ಅರಿಯಬಲ್ಲರು” ಅನ್ನುತ್ತಾರೆ ಪ್ರವಾದಿ ಮಹಮ್ಮದ್.

allah
ರಿವು ಹುಡುಕುತ್ತಾ ನಡೆದವರೆಲ್ಲರೂ ಆತ್ಯಂತಿಕವಾಗಿ ಪಡೆಯುವುದು ಒಂದನ್ನೇ. ಆ ಒಂದನ್ನೇ ಹಲವರು ಹಲವು ಬಗೆಯಲ್ಲಿ ಹೇಳುವರು. ಭಗವಂತನ ಹುಡುಕಾಟದ ಬಗ್ಗೆ ಯಾರು ಏನು ಹೇಳಿದ್ದಾರೆ ಅನ್ನುವುದನ್ನು ‘ಚಿತ್ರಭಿತ್ತಿ’ಯ ಹಲವು Posterಗಳಲ್ಲಿ ನೊಡಿದ್ದೀರಿ. ಇಸ್ಲಾಮ್ ಸಮುದಾಯದ ಅಂತಿಮ ಪ್ರವಾದಿ ಮಹಮ್ಮದ್ ಕೂಡ ಅದನ್ನೇ ಹೇಳಿರುವುದನ್ನು ಗಮನಿಸಿ. “ತನ್ನನ್ನು ತಾನು ಅರಿತವರು ಅಲ್ಲಾಹನನ್ನು ಅರಿಯಬಲ್ಲರು” ಅನ್ನುವ ಮೂಲಕ ನಾವು ಭಗವಂತನ ವಿಸ್ತರಣೆ ಎಂದು ಪ್ರವಾದಿಯವರು ಸೂಚ್ಯವಾಗಿ ಹೇಳಿದ್ದಾರೆ. 

ಮುಂದೆ ಸೂಫಿ ಪರಂಪರೆಯಲ್ಲಿ ಗುರುತಿಸಲ್ಪಡುವ ಮನ್ಸೂರ್ ಅಲ್ ಹಲ್ಲಾಜ್ ಮತ್ತು ಶಮ್ಸ್ ತಬ್ರೀಜಿ ಈ ಚಿಂತನೆಯನ್ನೇ ಅದ್ವೈತಕ್ಕೆಳೆಸಿ ‘ಅನ್ ಅಲ್ ಹಕ್’ ಅಂದರು. “ತನ್ನನ್ನು ತಾನು ಅರಿತವರು ಅಲ್ಲಾಹನನ್ನು ಅರಿಯಬಲ್ಲರು” ಎಂಬ ತಿಳಿವಿನ ವಿಸ್ತೃತಾರ್ಥ “ನಾನೇ ಭಗವಂತ (ನಾನೇ ಪರಮ ಸತ್ಯ)” ಎಂದು ಅವರು ಪ್ರತಿಪಾದಿಸಿದರು.

Leave a Reply