‘ಉಪವಾಸ’, ‘ಉಪಾಸನೆ’ಗಳ ಅರ್ಥ ನಿಜಕ್ಕೂ ಏನು? ಎಂದು ವಿವರಿಸಿದ್ದಾರೆ ಪ್ರದೀಪ್ ಶಿರಸಿ, ಓದುಗರ ಅಂಕಣದಲ್ಲಿ…
ಹೊಟ್ಟೆಗೆ ಆಹಾರ ಸೇವಿಸದಿರುವುದು ಉಪವಾಸವೇ?
ಜಡಮೂರ್ತಿಗೆ ಅಲಂಕರಿಸುವುದು ಉಪಾಸನೆಯೇ?
‘ಉಪ’ ಅಂದರೆ ಸಮೀಪ
‘ವಾಸ’ ‘ಆಸನ’ ಅಂದರೆ ನೆಲೆಸುವುದು, ಕುಳಿತುಕೊಳ್ಳುವುದು.
ಯಾವುದರ ಸಮೀಪ ?
ಯಾವುದು ನಮಗೆ ಅತೀ ಸಮೀಪದಲ್ಲಿದೆಯೊ ಅದರ ಸಮೀಪ ನೆಲೆಸುವುದು …
ಯಾವುದರ ‘ಇರುವಿಕೆ’ ಇಂದ ನಾವು ಇದ್ದೇವೆ ಎಂಬ ಅರಿವಾಗುವುದೋ ಅದರ ಹೆಸರು ‘ಪ್ರಾಣ’ ಎನ್ನಿ ‘ಚಿತ್’ ಎನ್ನಿ.
‘ಪ್ರಾಣ’ಕ್ಕಿಂತ ಪ್ರಿಯ ,ಸಮೀಪ ಯಾವದೂ ಇಲ್ಲ..
ಅದನ್ನು ತಲುಪಲು ಒಂದು ವಾಹನ ಬೇಕಲ್ಲವೇ?
ಅದೇ ‘ಶ್ವಾಸ’.
ಉಪವಾಸ, ಉಪಾಸನೆ = ವಿಪಸನಾ
ಪ್ರೇಮದಿಂದ ಉಸಿರಿನ ಜೊತೆ ಅದೆಲ್ಲಿಯವರೆಗೆ ಕರೆದೊಯ್ಯುವುದೊ ಅಲ್ಲಿಗೆ ತಲುಪಿ ನಿಂತು ಪ್ರೇಮದಿಂದ ಬರುವಿಕೆಯೇ ‘ವಿಪಸನಾ’ .ಇದೇ ‘ಉಪವಾಸ’ ಇದೇ ‘ಉಪಾಸನಾ’.
ಸನಾತನ ಎಂದೂ, ಅವರು ಮಾಡುತ್ತಾರೆ ಎಂದೂ, ಭಯದಿಂದ ಏನೇನಲ್ಲಾ ಸಿಗಬೇಕೆಂದು ಏನೇನಲ್ಲಾ ಮಾಡಿ ಏನೂ ಸಿಕ್ಕಿಲ್ಲ ಎಂಬ ಅರಿವಾದವರು ‘ಶಿವರಾತ್ರಿ’ಯನ್ನು ಹೀಗೂ ಆಚರಿಸಬಹುದು.
ರಾತ್ರಿ ನಿದ್ರೆಯಿಂದ ಎಚ್ಚರವಿರುವುದೇ ‘ಜಾಗರಣೆ’ ಅಲ್ಲ.
ಅದೇನು ಆಗುತ್ತಿದೆಯೋ (ಶ್ವಾಸ) ಅದರ ಆಲಿಸುವಿಕೆಯ ಅರಿವೇ ‘ಜಾಗರಣೆ’.
ಕ್ಷಣ ಒಂದರ ದಿವ್ಯಮೌನ, ಒಂದು ಮಧುರ, ಸುಶ್ರಾವ್ಯ ಉಸಿರಿನ ಆಲಿಸುವಿಕೆಯ ಅರಿಯುವಿಕೆಯಿಂದ ‘ಚಿತ್ತ’ ನಿರ್ಮಲವಾಗುತ್ತದೆ.
ನಿರ್ಮಲ ಚಿತ್ತದಲ್ಲಿ ಶಾಂತಿ. ಶಾಂತಿ ಇರುವಲ್ಲಿ ‘ಆನಂದ’ ವಿರದಿರಲು ಕಾರಣವೇ ಇಲ್ಲ.
ಇದೇ ‘ಚಿದಾನಂದ’.
ಮಡಿಯಿಲ್ಲ, ಮೈಲಿಗೆಯಿಲ್ಲ,ಜಾತಿಬೇಧ, ಲಿಂಗಬೇಧವಿಲ್ಲ, ಗಂಟೆ ಜಾಗಟೆಗಳಿಲ್ಲ, ಅರ್ಚಕರಿಲ್ಲ, ಮಂತ್ರಘೋಷಗಳಿಲ್ಲ..
ಕೊನೇ ಪಕ್ಷ ಕಳೆದುಕೊಳ್ಳುವುದೇನೂ ಇಲ್ಲ.
ಪಂಚಾಮೃತವನ್ನೂ, ಎಳೆನೀರನ್ನೂ, ಕಬ್ಬಿನರಸವನ್ನೂ ಸೇವಿಸಿ ‘ಇಲ್ಲದವರಿಗೇ’ ಕೊಟ್ಟು..
ಯಾವುದೆಲ್ಲ ಮಂಗಲಕರವೋ, ಶಾಂತವೋ ಅದೆಲ್ಲದರ ಸಾಂಕೇತಿಕ ನಾಮವೇ ಸಂಸ್ಕೃತ ವೆಂಬ ಭಾಷೆಯಲ್ಲಿ “ಶಿವ”.
ಗಮನಿಸಿ!! : ‘ಅರಳಿಮರ’ಕ್ಕೆ ಲೇಖನ ಕಳುಹಿಸಲು ಬಯಸುವ ಓದುಗರು aralimara123@gmail.com ಗೆ e mail ಮೂಲಕ ಕಳುಹಿಸಿಕೊಡಿ. ಅರಳಿಮರ ವೆಬ್ ಸೈಟ್ ನ ಆಶಯಕ್ಕೆ ಪೂರಕವಾದ ಲೇಖನಗಳನ್ನು ಪ್ರಕಟಿಸಲಾಗುವುದು.