ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #37

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಸತ್ತ ಮೇಲೆ ಎಲ್ಲ ಇಲ್ಲೇ ಬಿಟ್ಟು ಹೋಗಬೇಕು ಎನ್ನುವುದು ಗೊತ್ತಿದ್ದರೂ,
ಮನುಷ್ಯ,
ಇನ್ನೊಂದು ಹಂತಕ್ಕೆ ಏರಲು
ಇನ್ನೊಬ್ಬನ ಹಾಗೆ ಬದುಕಲು
ಸದಾ ತುಡಿಯುತ್ತಿರುತ್ತಾನೆ.

ಆದರೆ ನೀನು ಮಾತ್ರ
ಆತ್ಯಂತಿಕ ಖಾಲಿಯತ್ತ ಹೆಜ್ಜೆ ಹಾಕು.

ಬೆಳಕಿನಂತೆ ಬದುಕು ಮತ್ತು
ಹೂವಿನ ಹಾಗೆ ವಿದಾಯ ಹೇಳು.

ಮನುಷ್ಯ ಥೇಟ್ ಮಡಿಕೆಯಂತೆ.
ಹೊರಗಿನ ಯಾವ ಅಲಂಕಾರಗಳೂ ಅಲ್ಲ,
ಹೊರ ಮೈ ಕೂಡ ಅಲ್ಲ,
ಬದುಕಿನ ದಿವ್ಯವನ್ನು ಹಿಡಿದಿಟ್ಟುಕೊಳ್ಳುವುದು
ಒಳಗಿನ ಖಾಲಿಯೇ.

ಹಾಗೆಯೇ
ನಮ್ಮನ್ನು ಕೈ ಹಿಡಿದು ಮುನ್ನಡೆಸುವುದು
ನಾವು ಮುಟ್ಟಲು ಹಾತೊರೆಯುವ ಸಾಧನೆಗಳಲ್ಲ,
ಬದಲಾಗಿ
ಖಾಲೀತನ ಸೃಷ್ಚಿಸುವ
ಅಪಾರ ಸಾಧ್ಯತೆಗಳ ಬಗೆಗಿನ
ಸ್ಪಷ್ಟ ಅರಿವು.

36ನೇ ನಿಯಮ ಇಲ್ಲಿ ನೋಡಿ : https://aralimara.com/2020/02/27/sufi-90/

1 Comment

Leave a Reply