ನದೀ ಸ್ತೋತ್ರ; ನಾರದ ಪುರಾಣದಿಂದ…

ನಮಗೆ ಪಂಚಮಹಾನದಿಗಳ ಹೆಸರು ಬಾಯಿಪಾಠ. ವಾಸ್ತವದಲ್ಲಿ ಕುವೆಂಪು ಅವರು ಹೇಳಿದ ಹಾಗೆ ನೀರೆಲ್ಲವೂ ತೀರ್ಥವೇ. ಪ್ರತಿಯೊಂದು ನದಿಯೂ ಜೀವನದಿಯೇ. ಅವುಗಳಲ್ಲಿ ಕೆಲವು ಜೀವಿಗಳನ್ನಷ್ಟೆ ಪೊರೆದರೆ, ಇನ್ನು ಕೆಲವು ಹಳ್ಳಿ ಪಟ್ಟಣಗಳಂಥ ಜಡ ಚೈತನ್ಯವನ್ನೂ ಪೊರೆದು ಪೋಷಿಸುತ್ತವೆ. ಅಂತಹ ಕೆಲವು ನದಿಗಳ ಹೆಸರನ್ನು ನಾರದ ಪುರಾಣದಲ್ಲಿ ಬರುವ ‘ನದೀ ಸ್ತೋತ್ರದಲ್ಲಿ ನೋಡಬಹುದು… ಹೆಣ್ಣು ಮಕ್ಕಳಿಗೆ ವಿಶೇಷ ಹೆಸರು ಇಡಬೇಕೆಂದು ಹುಡುಕುವವರೂ ಒಮ್ಮೆ ಕಣ್ಣಾಡಿಸಿ! 

ನದೀ ಸ್ತೋತ್ರಂ  ಪ್ರವಕ್ಷ್ಯಾಮಿ ಸರ್ವಪಾಪಪ್ರಣಾಶನಮ್ |
ಭಾಗೀರಥೀ ವಾರಣಾಸೀ ಯಮುನಾ ಚ ಸರಸ್ವತೀ || ೧ ||

ಫಲ್ಗುನೀ ಶೋಣಭದ್ರಾ ಚ ನರ್ಮದಾ ಗಂಡಕೀ ತಥಾ |
ಮಣಿಕರ್ಣಿಕಾ ಗೋಮತೀ ಪ್ರಯಾಗೀ ಚ ಪುನಃ ಪುನೀ || ೨ ||

ಗೋದಾವರೀ ಸಿಂಧುನದೀ ಸರಯೂರ್ವರ್ಣಿನೀ ತಥಾ |
ಕೃಷ್ಣವೇಣೀ ಭೀಮರಥೀ ಖಾಗಿನೀ ಭವನಾಶಿನೀ || ೩ ||

ತುಂಗಭದ್ರಾ ಮಲಹರೀ ವರದಾ ಚ ಕುಮುದ್ವತೀ |
ಕಾವೇರೀ ಕಪಿಲಾ ಕುಂತೀ ಹೇಮಾವತೀ ಹರಿದ್ವತೀ || ೪ ||

ನೇತ್ರಾವತೀ ವೇದವತೀ ಸುದ್ಯೋತೀ ಕನಕಾವತೀ |
ತಾಮ್ರಪರ್ಣೀ ಭರದ್ವಾಜಾ ಶ್ವೇತಾ ರಾಮೇಶ್ವರೀ ಕುಶಾ || ೫ ||

ಮಂದರೀ ತಪತೀ ಕಾಲೀ ಕಾಲಿಂದೀ ಜಾಹ್ನವೀ ತಥಾ |
ಕೌಮೋದಕೀ ಕುರುಕ್ಷೇತ್ರಾ ಗೋವಿಂದಾ ದ್ವಾರಕೀ ಭವೇತ್ || ೬ ||

ಬ್ರಾಹ್ಮೀ ಮಾಹೇಶ್ವರೀ ಮಾತ್ರಾ ಇಂದ್ರಾಣೀ ಅತ್ರಿಣೀ ತಥಾ |
ನಲಿನೀ ನಂದಿನೀ ಸೀತಾ ಮಾಲತೀ ಚ ಮಲಾಪಹಾ || ೭ ||

ಸಂಭೂತಾ ವೈಷ್ಣವೀ ವೇಣೀ ತ್ರಿಪಥಾ ಭೋಗವತೀ ತಥಾ |
ಕಮಂಡಲು ಧನುಷ್ಕೋಟೀ ತಪಿನೀ ಗೌತಮೀ ತಥಾ || ೮ ||

ನಾರದೀ ಚ ನದೀ ಪೂರ್ಣಾ ಸರ್ವನದ್ಯಃ ಪ್ರಕೀರ್ತಿತಾಃ |
ಪ್ರಾತಃಕಾಲೇ ಪಠೇನ್ನಿತ್ಯಂ ಸ್ನಾನಕಾಲೇ ವಿಶೇಷತಃ || ೯ ||

ಕೋಟಿಜನ್ಮಾರ್ಜಿತಂ ಪಾಪಂ ಸ್ಮರಣೇನ ವಿನಶ್ಯತಿ |
ಇಹಲೋಕೇ ಸುಖೀ ಭೂತ್ವಾ ವಿಷ್ಣುಲೋಕಂ ಸಗಚ್ಛತಿ || ೧೦ ||

|| ಇತಿ ನಾರದೀಯಪುರಾಣೇ ನದೀಸ್ತೋತ್ರಂ ಸಂಪೂರ್ಣಮ್ ||

ಅರಳಿಮರದ ಆಯ್ಕೆ : ಹೆಣ್ಣುಮಕ್ಕಳಿಗೆ ಇಡಲು ಹೊಸತನವುಳ್ಳದ್ದೂ ಅರ್ಥ ಪೂರ್ಣವೂ ವ್ಯವಹಾರಕ್ಕೆ ಅನುಕೂಲವೂ ಆದ ಕೆಲವು ಹೆಸರುಗಳನ್ನು ಅರಳಿಬಳಗ ಹೆಕ್ಕಿ ತೆಗೆದಿದ್ದು, ಅವು ಹೀಗಿವೆ; ಫಲ್ಗುಣೀ, ಮಣಿಕರ್ಣಿಕಾ, ಪ್ರಯಾಗೀ, ಸರಯೂ, ಮಂದರೀ, ದ್ವಾರಕೀ, ಬ್ರಾಹ್ಮೀ, ಸುದ್ಯೋತಾ.

Leave a Reply