ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #39

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಭಗವಂತ
ಎಷ್ಟು ಸೂಕ್ಷ್ಮ, ಎಷ್ಟು ನಿಖರ
ಸೃಷ್ಟಿಕರ್ತನೆಂದರೆ,

ಜಗತ್ತಿನ ಪ್ರತಿಯೊಂದು ಘಟನೆಯೂ
ನಿರ್ಧಾರಿತ ರೀತಿಯಲ್ಲೇ
ನಿಗದಿತ ಸಮಯದಲ್ಲೇ ಸಂಭವಿಸುವುದು.
ಒಂದು ನಿಮಿಷ ಕೂಡ
ಆಚೀಚೆ ಆಗುವ ಅವಕಾಶವಿಲ್ಲ.

ಯಾರಿಗೂ ಯಾವುದಕ್ಕೂ
ಗಡಿಯಾರ,
ಆದ್ಯತೆಯನ್ನು ನೀಡುವುದಿಲ್ಲ
ವಂಚನೆಯನ್ನೂ ಮಾಡುವುದಿಲ್ಲ.

ಕಾಲ ಹಾಕಿದ ಗೆರೆಯನ್ನು
ಪ್ರೇಮ ಮತ್ತು ಸಾವು
ದಾಟಿದ ಉದಾಹರಣೆಗಳೇ ಇಲ್ಲ.

36ನೇ ನಿಯಮ ಇಲ್ಲಿ ನೋಡಿ : https://aralimara.wordpress.com/2020/03/04/sufi-92/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ