ಅಭಯ ನೀಡುವ ಸರ್ವಮಂಗಳ ಸ್ತೋತ್ರ : ನಿತ್ಯಪಾಠ

ಅಭಯ ನೀಡುವ ಸರ್ವಮಂಗಳ ಸ್ತೋತ್ರದ ನಾಲ್ಕು ಶ್ಲೋಕಗಳು ಇಲ್ಲಿವೆ…

ಸರ್ವಮಂಗಲ ಮಾಂಗಲ್ಯೆ ಶಿವೇ ಸರ್ವಾರ್ಥಸಾಧಿಕೆ |
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತು ತೇ ||
ಸರ್ವಮಂಗಲೆಯಾದ ಶಿವಯೇ, ಸಕಲಾಭಿಷ್ಟಗಳನ್ನು ನೀಡುವವಳೇ, ತ್ರಿಯಂಬಕೆ, ಗೌರಿ, ನಾರಾಯಣಿ ನಿನಗಿದೋ ನಮ್ಮ ನಮಸ್ಕಾರ.

ಸೃಷ್ಟಿಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನೀ |
ಗುಣಾಶ್ರಯೇsಗುಣಮಯೇ ದೇವೀ ನಾರಾಯಣಿ ನಮೋಸ್ತು ತೇ ||
ಸೃಷ್ಟಿ – ಸ್ಥಿತಿ – ವಿನಾಶಗಳಿಗೆ ಕಾರಣೀಭೂತಳೇ, ಶಕ್ತಿಸ್ವರೂಪಿಣಿ ದೇವಿಯೇ, ತ್ರಿಗುಣಾತ್ಮಕೆಯಾಗಿಯೂ ಅದನ್ನು ಮೀರಿರುವಳೇ, ನಿನಗಿದೋ ನಮ್ಮ ನಮಸ್ಕಾರ.

ಶರಣಾಗತದೀನಾರ್ತ ಪರಿತ್ರಾಣ ಪರಾಯಣೇ |
ಸರ್ವಸ್ಯಾರ್ತಿಹರೇ ದೇವೀ ನಾರಾಯಣಿ ನಮೋಸ್ತು ತೇ ||
ಶರಣು ಬಂದ ದೀನರಿಗೂ ಆರ್ತರಿಗೂ ನೀನೆ ಶರಣು ದೇವಿ, ಎಲ್ಲ ಜೀವಿಗಳ ಎಲ್ಲ ದಃಖವನ್ನೂ ಪರಿಹರಿಪ ನಿನಗಿದೋ ನಮ್ಮ ನಮಸ್ಕಾರ.

ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವೀ ದುರ್ಗೇ ದೇವೀ ನಮೋಸ್ತು ತೇ ||
ಎಲ್ಲ ಶಕ್ತಿಗಳ ಪಡೆದಿರುವಾಕೆಯೆ, ಎಲ್ಲಕ್ಕೂ ಒಡತಿಯೆ, ಎಲ್ಲವೂ ನೀನೆ ಆಗಿರುವೆ. ಓ ದುರ್ಗೆಯೆ, ಓ ದೇವಿಯೆ ನಮ್ಮ ಭಯವನ್ನು ಹೋಗಲಾಡಿಸು. ನಿನಗಿದೋ ನಮ್ಮ ನಮಸ್ಕಾರ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.