ವೀರಬ್ರಹ್ಮ ಕಾಲಜ್ಞಾನದಲ್ಲಿ ಕರೋನ ಕುರಿತು ಹೇಳಲಾಗಿತ್ತೇ!?

ವೀರಬ್ರಹ್ಮಂ ಕಾಲಜ್ಞಾನದಲ್ಲಿ ಕರೋನ ಕುರಿತು ಹೇಳಲಾಗಿತ್ತೇ? ಇಲ್ಲಿದೆ ನೋಡಿ ಆ ಭವಿಷ್ಯ ವಾಣಿಯ ಅನುವಾದ… | ವಿ.ಚಂದ್ರಶೇಖರ ನಂಗಲಿ

ವೀರಬ್ರಹ್ಮಂ ಕಾಲಜ್ಞಾನದ 114 ನೇ ಪದ್ಯವು
ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದೆ. ತೆಲುಗಿನಲ್ಲಿರುವ ಇದನ್ನು ಕನ್ನಡದಲ್ಲಿ ಹೀಗೆ ಅನುವಾದಿಸಬಹುದು:

ತೆಲುಗಿನಲ್ಲಿ ಕೋರಂಕಿ…

“ಈಶಾನ್ಯ ದಿಕ್ಕಿನಲಿ ವಿಷಗಾಳಿ ಹುಟ್ಟುವುದು
ಲಕ್ಷಾಂತರ ಪ್ರಜೆಗಳು ಸಾಯ್ತಾರಯ್ಯಾ !
ಕೋರಂಕಿಯೆಂಬ ಸೋಂಕು
ಕೋಟಿಮಂದಿಗೆ ತಗುಲಿ
ಕೋಳಿಯಂತೆ ತೂಗಿ ಸಾಯ್ತಾರಯ್ಯಾ ॥”

ಕಾಲಜ್ಞಾನ ಎಂದರೆ ಮುಂದಾಗುವುದನ್ನು
ಈಗಲೇ ಕಂಡು ಹೇಳುವುದು ಎಂಬುದು
ಜನಪ್ರಿಯ ಅರ್ಥ! ಭೂತ ವರ್ತಮಾನ ಭವಿಷ್ಯತ್ ಗಳ ಕಾಲಗತಿಯನ್ನು ಮನಗಂಡು ಹೇಳುವುದು ಎಂಬುದು ನಿಜಾರ್ಥ!

ದಾರ್ಶನಿಕರು ದ್ರಷ್ಟಾರರು ಎಷ್ಟೋ ಮಂದಿ ಇಂಥ ಕಾಲಗತಿಯನ್ನು ಖಚಿತವಾಗಿ ನಿರ್ಣಯಿಸಿ ಹೇಳಬಲ್ಲರು. ಇದೇ ಕಾಲಜ್ಞಾನವೆಂದು ಹೆಸರಾಗಿದೆ.

ವೀರಬ್ರಹ್ಮಂ ಒಬ್ಬ ದಾರ್ಶನಿಕ ಸಂತ. ಸಮಾಜ ಸುಧಾರಕ! ಈತ ಮಾನವರ ಜೀವನಗತಿಯ ಹಳೆಕಾಲ ಮತ್ತು ಹೊಸಕಾಲಗಳ ಸ್ಥಿತ್ಯಂತರ/ ಸಂಕ್ರಮಣದ ಸೇತುವೆಯಾಗಿದ್ದವನು. ಸಹಜ ಎನ್ನಬಹುದಾದ ವಿನೂತನ ಕಾಣ್ಕೆಗಳನ್ನು
ಮನಗಂಡವನು.

ಮೇಲ್ಕಂಡ ಪದ್ಯದಲ್ಲಿ “ಈಶಾನ್ಯದಿಕ್ಕಿನ ವಿಷಗಾಳಿ” ಎಂದರೆ ಚೀನಾದೇಶಕ್ಕೆ ಸರಿಹೊಂದುತ್ತದೆ. ‘ಕೋರಂಕಿ’ಗೂ ‘ಕೊರೋನ’ ಗೂ ಪದಸಾಮ್ಯವಿದೆ. ಲಕ್ಷಾಂತರ ಸಾವು, ಸೋಂಕು, ಕೋಟಿ ಮಂದಿಯ ಸಾವು, ಕೋಳಿಜ್ವರದ ತರಹ ತೂಗಿ ಸಾಯುವರು ಎಂಬ ವಿವರಗಳಲ್ಲಿ ವೈರಲ್ ಫೀವರ್ ಛಾಯೆ ಸ್ಪಷ್ಟವಾಗಿದೆ. ವೀರಬ್ರಹ್ಮಂ ಎಂದ ಮಾತು ಪೊಳ್ಳಾಗದು ಎಂಬುದಿಲ್ಲಿ ನಿಜವೆನಿಸುತ್ತದೆ.

Leave a Reply