ನಿರ್ವಿಕಲ್ಪ ಸಮಾಧಿ ಸ್ಥಿತಿ ಎಂದರೇನು?

ಸಮಾಧಿ ಸ್ಥಿತಿಯಲ್ಲಿ ಮನಸ್ಸು ಮನದಾಕಾಶದಿಂದ ಮಹಾದಾಕಾಶವರೆಗೆ ಜಿಗಿಯುತ್ತದೆ ಅಥವ ಪ್ರಜ್ಞೆ ವಿಸ್ತಾರವಾಗುತ್ತದೆ ( conscious expound). ಇದು ಮನಸ್ಸು ದಾಟಿದ ನಂತರ ಅಥವ ಅಮನ ಸ್ಥಿತಿಯಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿ ಅನುಭಾವಕ್ಕೆ ಸಿಗುವದು | ಜಯದೇವ ಪೂಜಾರ್

ವಿಜ್ಞಾನ ಮತ್ತು ಮನೋವಿಜ್ಞಾನಕ್ಕೂ ನಿಲುಕದˌ ವಿವರಣೆಗೂ ಸಿಗದ ಮನಸ್ಸು ಇಲ್ಲದ ಅವಸ್ಥೆಯೊಂದಿದೆ. ಇದನ್ನು ವಿಜ್ಞಾನವಾಗಲಿ ಅಥವ ಮನೋವಿಜ್ಞಾನವಾಗಲಿ ಅಮನ ಸ್ಥಿತಿ ( No mind state) ಬಗ್ಗೆ ಏನೂ ಶೋಧಿಸಲಾಗಲಿಲ್ಲ. ಆದರೇˌ ಅಂಥದೊಂದು ಅನುಭಾವದ ಸ್ಥಿತಿ ಧ್ಯಾನದಲ್ಲಿ ಇದೆ.

ಮನೋವಿಜ್ಞಾನ ಮೂರು ಹಂತಗಳಲ್ಲಿ ಪ್ರಜ್ಞೆಯ ವಿಸ್ತಾರವನ್ನು ಹೇಳುತ್ತದೆ..

1) ಎಚ್ಚರದ ಸ್ಥಿತಿ: ( Awaken state): ನಾನು ( ಅರಿವು ಅಥವ concious) ಇದ್ದೇನೆˌ ಆಲೋಚನೆಗಳು ಇವೆ.

2) ಸುಷಪ್ತಿ: ( Dream state) : ನಾನು ಇಲ್ಲ ˌ ಆಲೋಚನೆಗಳು ಇವೆ.

3) ನಿದ್ರೆ: ( Deep sleep state) : ನಾನು ಇಲ್ಲ ˌ ಆಲೋಚನೆಗಳು ಇಲ್ಲ.

ಮನೋವಿಜ್ಞಾನ ಮನುಷ್ಯನನ್ನು ಈ ಮೂರು ಮನಸ್ಥಿತಿಗಳಲ್ಲಿ ಅಧ್ಯಯನ ಮಾಡುತ್ತದೆ. ಇದಕ್ಕಿಂತ ಆಚೆಗೆ ಹೋಗಲು ಅದಕ್ಕೆ ಆಗಲಿಲ್ಲ. ಸಿಗ್ಮಂಡ್ ಪ್ರಾಯ್ಡ್ ˌ ಆಡ್ಯಲ್ಲರ್ ˌ ಕಾರ್ಲ ಯಂಗ್ ಕೂಡ ಈ ಮೂರು ಮನೋಸ್ಥಿತಿಗಳನ್ನು ಮಾತ್ರ ಅಧ್ಯಯನ ಮಾಡುತ್ತಾರೆ. ಆದರೇˌ ಭಾರತದ ಋಷಿˌ ಮುನಿಗಳು ತುರಿಯಾವಸ್ಥೆˌ ತುರಿಯಾತೀತ ಅವಸ್ಥೆ ಬಗ್ಗೆ ಹೇಳಿದ್ದಾರೆ. ಇದು ವಿಜ್ಞಾನಕ್ಕೆ ನಿಲುಕದ್ದು ಮತ್ತು ಧ್ಯಾನದ ಆಳದಲ್ಲಿ ದರ್ಶನವಾಗುವಂತದ್ದು. ವಿಜ್ಞಾನ ಕೇವಲ objective ಅದಕ್ಕೆ subjective ಬಗ್ಗೆ ಏನೂ ಗೊತ್ತಿಲ್ಲ. ಏಲ್ಲವನ್ನು ಅರಿಯುವವ ಯಾರು? ಎಂಬ subjective ಗೆ ಸಂಬಂಧಿಸಿದಂತೆ ವಿಜ್ಞಾನಕ್ಕೆ ಏನೂ ಗೊತ್ತಿಲ್ಲ. ಅರಿಯಲ್ಪಡುವ ವಸ್ತು ವಿಷಯಗಳನ್ನು objective matters ಬಗ್ಗೆ ಮಾತ್ರ ಶೋಧಿಸುತ್ತದೆ.

ಸಾಮಾನ್ಯ ಮನುಷ್ಯನಿಗೆ ಈ ಮೂರು ಮನಸ್ಥಿತಿಗಳ ಅನುಭವ ಮಾತ್ರವಿರುತ್ತದೆ. ತನ್ನ ಪ್ರಜ್ಞೆ ವಿಕಸನಕ್ಕೆ ಅವಕಾಶವನ್ನೆ ಕೊಡದೇˌ ಕೇವಲ ಭೌತಿಕ ವಿಷಯಗಳಲ್ಲಿ ಮಾತ್ರ ಆಸಕ್ತವಾಗಿರುತ್ತದೆ.

4) ತುರಿಯಾ ಅವಸ್ಥೆ : ಸವಿಕಲ್ಪ ಸಮಾಧಿ ( Trance state) : ನಾನು ಇದ್ದೆನೆ ( concicous) ಆಲೋಚನೆಗಳು ಇಲ್ಲ.

5) ತುರಿಯಾತೀತ ಅಥವ ನಿರ್ವಿಕಲ್ಪ ಸಮಾಧಿ ಸ್ಥಿತಿ : ಇಲ್ಲಿ ನಾನು ಇಲ್ಲ ˌ ಆಲೋಚನೆಗಳು ಇಲ್ಲ. ಇರುವುದೊಂದೆ ಏಲ್ಲಕ್ಕೂ ಸಾಕ್ಪಿಯಾದ ಪರಿಶುದ್ದ ಪ್ರಜ್ಞೆ. ಈ ಸ್ಥಿತಿ ತಲುಪಿದಾಗˌ ನೋವುˌ ದುಃಖˌ ಹಸಿವುˌ ಮೋಹˌ ಕಾಮˌ ಬಯಕೆˌ ಬಾಧೆ….ಏನ್ನೆನೂ ಇಲ್ಲದ ಶುದ್ದ ಆನಂದ ಸ್ಥಿತಿ. ಈ ಸ್ಥಿತಿಯಲ್ಲಿ ಬುದ್ದ ˌ ಅಲ್ಲಮˌ ಅಕ್ಕ ಮಹಾದೇವಿˌ ರಮಣರುˌ ರಾಮಕೃಷ್ಣ ಪರಮಹಂಸರು…ಹಾಗೂ ಇತ್ತೀಚಿನ ಓಶೋˌ ಜೆಕೆˌ ಯುಜಿಕೆ ಮುಂತಾದವರು ಇದ್ದವರು.

ಈ ಸ್ಥಿತಿಯನ್ನೆ ಅಲ್ಲಮ ಶೂನ್ಯವೆಂದಿದ್ದು ಅಥವ ಬಯಲು ಎಂದಿದ್ದು. ಬುದ್ದ ನಿರ್ವಾಣವೆಂದಿದ್ದುˌ ಓಶೋ ನೋ ಮೈಂಡ್ ಸ್ಟೇಟ್ ಎಂದಿದ್ದು. ಇದನ್ನೇ ಜೆಕೆ  Choicless awareness ಎಂದಿದ್ದು.  ಯುಜಿ ಇದನ್ನು ‘ಮಹಾಸ್ಫೋಟ್’ ಎಂದರು. 

ಸಮಾಧಿ ಸ್ಥಿತಿಯಲ್ಲಿ ಏನಾಗುತ್ತದೆ? ನಮ್ಮೊಳಗಿನ ಆಕಾಶ ( space) ಇದೆ. ಅದು ಮನದಾಕಾಶˌ ನಮ್ಮೆಲ್ಲ ಆಲೋಚನೆಗಳು ಈ space ದಿಂದ ಜನಿಸಿ ಅಲ್ಲಿಯೇ ಸುಪ್ತಮನದಾಕಶದಲ್ಲಿ ಲೀನವಾಗುವವು. ಇನ್ನೊಂದು ಹೊರಗಡೆಯ ಆಕಾಶˌ ಈ ಆಕಾಶದಡಿಯಲ್ಲಿ ಈ ಲೋಕ ಸೃಷ್ಟಿಯಾಗಿರುವದು ಮತ್ತು ಇರುವದು. ಇನ್ನೊಂದು ಮಹತ್ತರವಾದ ಮಹಾದಾಕಾಶವಿದೆ ಅದು ಬ್ರಹ್ಮಾಂಡ. ಅಲ್ಲಿ ನೂರಾರು ನಕ್ಪತ್ರಕಾಯಗಳುˌ ಸಾವಿರಾರು ಗ್ರಹಗಳುˌ ಲಕ್ಪಾಂತರ ಉಪಗ್ರಹಗಳುˌ ಲಕ್ಪಾಂತರ ಭೂಮಿಯಂತ ಗ್ರಹಗಳಿವೆ. ಇದನ್ನೆ ಇತ್ತಿಚೀನ quantum physicsˌ ” 0″ zero field ಎನ್ನುತ್ತದೆ.

ಸಮಾಧಿ ಸ್ಥಿತಿಯಲ್ಲಿ ಮನಸ್ಸು ಮನದಾಕಾಶದಿಂದ ಮಹಾದಾಕಾಶವರೆಗೆ ಜಿಗಿಯುತ್ತದೆ ಅಥವ ಪ್ರಜ್ಞೆ ವಿಸ್ತಾರವಾಗುತ್ತದೆ ( conscious expound). ಇದು ಮನಸ್ಸು ದಾಟಿದ ನಂತರ ಅಥವ ಅಮನ ಸ್ಥಿತಿಯಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿ ಅನುಭಾವಕ್ಕೆ ಸಿಗುವದು. ಮನದಿಂದ ಮಹಾದಾಕಾಶವರೆಗೆ ಪ್ರಜ್ಞೆ ( Cosmic energy) ವಿಸ್ತಾರವಾಗುವದು. ಇದು ಮನುಷ್ಯನಿಗೆ ಮಾತ್ರ ಸಾಧ್ಯ. ಇದೇ ನಿರ್ವಿಕಲ್ಪ ಸಮಾಧಿ. 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.