51 ರಾಮ ಕಥನಗಳ ಹೆಸರು ಗೊತ್ತೆ… !?

ಕೃಷ್ಣ ವಿಶ್ವರೂಪಿಯಾದರೆ, ರಾಮ ವಿಶ್ವವ್ಯಾಪಿ. ಜಾಗತಿಕವಾಗಿ ಜನಪ್ರಿಯತೆಯ ದೃಷ್ಟಿಯಿಂದ ಕೃಷ್ಣನೇ ಮೊದಲಾದರೂ ಸಂಖ್ಯೆಯದೃಷ್ಟಿಯಿಂದ ರಾಮನ ಕಥೆಗಳೇ ಹೆಚ್ಚೆಂದು ತೋರುತ್ತದೆ.  ರಾಮ ಆಯಾ ನೆಲದ ಸೊಗಡಿಗೆ ನಿಲುಕಿದಂತೆ ಮರುರೂಪಗೊಳ್ಳುತ್ತಾ ಹೋಗಿದ್ದಾನೆ. ಹಲವು ವಿಚಾರಧಾರೆಗಳು, ಸಿದ್ಧಾಂತಗಳು, ನಂಬುಗೆಗಳು ಮಾತ್ರವಲ್ಲದೆ; ಸ್ತ್ರೀವಾದ, ಪುರುಷಪ್ರಧಾನ ವ್ಯವಸ್ಥೆಯ ಹಿನ್ನೆಲೆಯಲ್ಲಿ ಶ್ರೀರಾಮ, ಅದರ ಖಂಡನೆಯ ಹಿನ್ನೆಲೆಯಲ್ಲೂ ಹಲವು ರಾಮ ಕಥನ – ರಾಮಾಯಣಗಳು ರಚನೆಗೊಂಡಿವೆ. ಅಂಥವುಗಳಲ್ಲಿ 51 ರಾಮಕಥನಗಳ ಹೆಸರನ್ನು ಲೇಖಕಿ ಶೈಲಜಾ ಕಂಜರ್ಪಣೆ ಪಟ್ಟಿ ಮಾಡಿದ್ದು, ಅವು ಇಲ್ಲಿವೆ …

  1. ರಾಮಕಥಾಭ್ಯುದಯ
  2. ಅದ್ಭುತ ರಾಮಾಯಣ
  3. ಶ್ರೀ ರಾಮಾಶ್ವಮೇಧ
  4. ಶಂಕರ ರಾಮಾಯಣ
  5. ಮೂಲಬಲ ರಾಮಾಯಣ
  6. ಅಧ್ಯಾತ್ಮ ರಾಮಾಯಣ
  7. ಮಾರ್ಕಂಡೇಯ ರಾಮಾಯಣ
  8. ರಾಮ ವಿಜಯ ಕಾವ್ಯ
  9. ತೊರವೆ ರಾಮಾಯಣ
  10. ತಿರುಮಲ ರಾಮಚಾರಿತ್ರ್ಯ
  11. ಕೋಸಲ ರಾಮಚರಿತಂ
  12. ರಾಮಚಂದ್ರ ಚರಿತ ಪುರಾಣಂ
  13. ಕೌಶಿಕ ರಾಮಾಯಣ
  14. ಭುವನೈಕ್ಯ ರಾಮಾಭ್ಯುದಯಂ
  15. ಶೇಷ ರಾಮಾಯಣ
  16. ಕುಮುದೇಂದು ರಾಮಾಯಣ
  17. ರಾಮಕಥಾವತಾರ
  18. ರಾಮಾಯಣ ದರ್ಶನಂ
  19. ರಾಮಚಂದ್ರ ಚರಿತಂ.
  20. ಮಂದಾರ ರಾಮಾಯಣ
  21. ಗೊಂಡರ ರಾಮಾಯಣ
  22. ತುಳಸೀ ರಾಮಾಯಣ
  23. ವಾಸಿಷ್ಠ ರಾಮಾಯಣ
  24. ರಂಗನಾಥ ರಾಮಾಯಣಂ
  25. ತಿಮ್ಮಣ್ಣ ಕವಿಯ ತೆಲುಗು ರಾಮಾಯಣಂ
  26. ಶತಕಂಠ ರಾವಣ ಚರಿತಂ
  27. ಸೀತಾಕಥಾ ಸಾಗರಂ
  28. ಕಂಬ ರಾಮಾಯಣಂ
  29. ಸೀತಾ ಚರಿತಂ
  30. ರಾವಣವಧಂ
  31. ಚಂದ್ರಾವತೀ ಕಾವ್ಯಂ
  32. ಪದ್ಮ ರಾಮಾಯಣಂ
  33. ಆನಂದ ರಾಮಾಯಣಂ
  34. ಆಧ್ಯಾತ್ಮ ರಾಮಾಯಣಂ
  35. ಜಗಭದ್ರನ ತ್ರಿಷಷ್ಠಿ ಶಲಾಕ ಪುರಾಣಂ
  36. ರಘುವಂಶ ಕಾವ್ಯಂ
  37. ಬೌದ್ಧ ರಾಮಾಯಣಂ
  38. ಟಿಬೆಟಿಯನ್ ರಾಮಾಯಣ
  39. ಖೋಟಾನ್ ರಾಮಾಯಣ
  40. ಲಾವೋಸಿನ ರಾಮಜಾತಕ
  41. ಸಯಾಮಿನ ರಾಮಕೀರ್ತಿ ಕಾವ್ಯ
  42. ಸಿಂಹಳೀಯ ರಾಮ ಚರಿತಂ
  43. ಚರಿತ್ರ ಮಹಾರಾಜನ ಕಥೆ
  44. ಬರ್ಮಾ, ಇಂಡೋನೇಶಿಯಾ, ಚೈನಾ, ಬಲಿ ದ್ವೀಪ ರಾಮಾಯಣ
  45. ಐಗುಪ್ತ ರಾಮಾಯಣ
  46. ಪಂಪ ರಾಮಾಯಣ
  47. ಲಂಕಾ ರಾಮಾಯಣ
  48. ಜೈನ ರಾಮಾಯಣ
  49. ಗಾಯತ್ರೀ ರಾಮಾಯಣ.
  50. ರಾಮಾಯಣ ದರ್ಶನಂ
  51. ರಾಮಾನ್ವೇಷಣಂ
Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.