ಕೃಷ್ಣ ವಿಶ್ವರೂಪಿಯಾದರೆ, ರಾಮ ವಿಶ್ವವ್ಯಾಪಿ. ಜಾಗತಿಕವಾಗಿ ಜನಪ್ರಿಯತೆಯ ದೃಷ್ಟಿಯಿಂದ ಕೃಷ್ಣನೇ ಮೊದಲಾದರೂ ಸಂಖ್ಯೆಯದೃಷ್ಟಿಯಿಂದ ರಾಮನ ಕಥೆಗಳೇ ಹೆಚ್ಚೆಂದು ತೋರುತ್ತದೆ. ರಾಮ ಆಯಾ ನೆಲದ ಸೊಗಡಿಗೆ ನಿಲುಕಿದಂತೆ ಮರುರೂಪಗೊಳ್ಳುತ್ತಾ ಹೋಗಿದ್ದಾನೆ. ಹಲವು ವಿಚಾರಧಾರೆಗಳು, ಸಿದ್ಧಾಂತಗಳು, ನಂಬುಗೆಗಳು ಮಾತ್ರವಲ್ಲದೆ; ಸ್ತ್ರೀವಾದ, ಪುರುಷಪ್ರಧಾನ ವ್ಯವಸ್ಥೆಯ ಹಿನ್ನೆಲೆಯಲ್ಲಿ ಶ್ರೀರಾಮ, ಅದರ ಖಂಡನೆಯ ಹಿನ್ನೆಲೆಯಲ್ಲೂ ಹಲವು ರಾಮ ಕಥನ – ರಾಮಾಯಣಗಳು ರಚನೆಗೊಂಡಿವೆ. ಅಂಥವುಗಳಲ್ಲಿ 51 ರಾಮಕಥನಗಳ ಹೆಸರನ್ನು ಲೇಖಕಿ ಶೈಲಜಾ ಕಂಜರ್ಪಣೆ ಪಟ್ಟಿ ಮಾಡಿದ್ದು, ಅವು ಇಲ್ಲಿವೆ …
- ರಾಮಕಥಾಭ್ಯುದಯ
- ಅದ್ಭುತ ರಾಮಾಯಣ
- ಶ್ರೀ ರಾಮಾಶ್ವಮೇಧ
- ಶಂಕರ ರಾಮಾಯಣ
- ಮೂಲಬಲ ರಾಮಾಯಣ
- ಅಧ್ಯಾತ್ಮ ರಾಮಾಯಣ
- ಮಾರ್ಕಂಡೇಯ ರಾಮಾಯಣ
- ರಾಮ ವಿಜಯ ಕಾವ್ಯ
- ತೊರವೆ ರಾಮಾಯಣ
- ತಿರುಮಲ ರಾಮಚಾರಿತ್ರ್ಯ
- ಕೋಸಲ ರಾಮಚರಿತಂ
- ರಾಮಚಂದ್ರ ಚರಿತ ಪುರಾಣಂ
- ಕೌಶಿಕ ರಾಮಾಯಣ
- ಭುವನೈಕ್ಯ ರಾಮಾಭ್ಯುದಯಂ
- ಶೇಷ ರಾಮಾಯಣ
- ಕುಮುದೇಂದು ರಾಮಾಯಣ
- ರಾಮಕಥಾವತಾರ
- ರಾಮಾಯಣ ದರ್ಶನಂ
- ರಾಮಚಂದ್ರ ಚರಿತಂ.
- ಮಂದಾರ ರಾಮಾಯಣ
- ಗೊಂಡರ ರಾಮಾಯಣ
- ತುಳಸೀ ರಾಮಾಯಣ
- ವಾಸಿಷ್ಠ ರಾಮಾಯಣ
- ರಂಗನಾಥ ರಾಮಾಯಣಂ
- ತಿಮ್ಮಣ್ಣ ಕವಿಯ ತೆಲುಗು ರಾಮಾಯಣಂ
- ಶತಕಂಠ ರಾವಣ ಚರಿತಂ
- ಸೀತಾಕಥಾ ಸಾಗರಂ
- ಕಂಬ ರಾಮಾಯಣಂ
- ಸೀತಾ ಚರಿತಂ
- ರಾವಣವಧಂ
- ಚಂದ್ರಾವತೀ ಕಾವ್ಯಂ
- ಪದ್ಮ ರಾಮಾಯಣಂ
- ಆನಂದ ರಾಮಾಯಣಂ
- ಆಧ್ಯಾತ್ಮ ರಾಮಾಯಣಂ
- ಜಗಭದ್ರನ ತ್ರಿಷಷ್ಠಿ ಶಲಾಕ ಪುರಾಣಂ
- ರಘುವಂಶ ಕಾವ್ಯಂ
- ಬೌದ್ಧ ರಾಮಾಯಣಂ
- ಟಿಬೆಟಿಯನ್ ರಾಮಾಯಣ
- ಖೋಟಾನ್ ರಾಮಾಯಣ
- ಲಾವೋಸಿನ ರಾಮಜಾತಕ
- ಸಯಾಮಿನ ರಾಮಕೀರ್ತಿ ಕಾವ್ಯ
- ಸಿಂಹಳೀಯ ರಾಮ ಚರಿತಂ
- ಚರಿತ್ರ ಮಹಾರಾಜನ ಕಥೆ
- ಬರ್ಮಾ, ಇಂಡೋನೇಶಿಯಾ, ಚೈನಾ, ಬಲಿ ದ್ವೀಪ ರಾಮಾಯಣ
- ಐಗುಪ್ತ ರಾಮಾಯಣ
- ಪಂಪ ರಾಮಾಯಣ
- ಲಂಕಾ ರಾಮಾಯಣ
- ಜೈನ ರಾಮಾಯಣ
- ಗಾಯತ್ರೀ ರಾಮಾಯಣ.
- ರಾಮಾಯಣ ದರ್ಶನಂ
- ರಾಮಾನ್ವೇಷಣಂ