ಭಯವನ್ನು ಆಸ್ವಾದಿಸುವ ಮನಸ್ಥಿತಿಯಿಂದ ಹೊರಬನ್ನಿ : ಓಶೋ ರಜನೀಶ್

oshoಒಮ್ಮೆ ಶಿಷ್ಯರೊಬ್ಬರು ಓಶೋ ಅವರನ್ನು ಸಾಂಕ್ರಾಮಿಕ ಪಿಡುಗಿನ (ಮಹಾಮಾರಿಯ) ಕುರಿತು ಪ್ರಶ್ನಿಸುತ್ತಾರೆ. ಅದಕ್ಕೆ ಅವರ ಉತ್ತರ ಹೀಗಿದೆ…. | ಭಾವಾನುವಾದ : ಧ್ಯಾನ್ ಉನ್ಮುಖ್

ಸಾಂಕ್ರಾಮಿಕ ಪಿಡುಗೆಂಬ ಮಹಾಮಾರಿಯಿಂದ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು ? ಇದು ಸರಿಯಾದ ಪ್ರಶ್ನೆಯಲ್ಲ. ಅದೇ ಪ್ರಶ್ನೆಯನ್ನು ಹೀಗೆ ಕೇಳಬಹುದು, ಪಿಡುಗಿನ ಕಾರಣದಿಂದ ನನ್ನಲ್ಲಿ ಹುಟ್ಟಿರುವ ಸಾವಿನ ಭಯದ ಕುರಿತು ಹೇಳಿ ಎಂದು. ಈ ಭಯದಿಂದ ಪಾರಾಗುವುದು ಹೇಗೆಂದು.

ವೈರಸ್ ಇಂದ ರಕ್ಷಣೆ ಪಡೆಯುವುದು ಸುಲಭ, ಆದರೆ ಅದರ ಕುರಿತು ನಿಮ್ಮಲ್ಲಿ ಅಡಗಿರುವ ಭಯ ಹೋಗಲಾಡಿಸುವುದು ಕಷ್ಟಸಾಧ್ಯ. ಜನ ಮಹಾಮಾರಿಯಿಂದ ಕಡಿಮೆ, ಅದರ ಕುರಿತು ಭಯದಿಂದ ಹೆಚ್ಚು ಸಾಯುತ್ತಾರೆ. ʼಭಯʼಕ್ಕಿಂತ ಭಯಾನಕ ಯಾವುದೂ ಇಲ್ಲ. ಈ ಭಯವನ್ನು ಅರಿಯಿರಿ, ಇಲ್ಲದಿದ್ದಲ್ಲಿ ಸಾವು ಬರುವುದಕ್ಕಿಂತ ಮೊದಲೇ ಸಾಯುತ್ತೀರಿ. ಈಗ ನೀವೇನು ಭಯದ ವಾತಾವರಣ ನೋಡುತ್ತಿದ್ದೀರಿ, ಅದಕ್ಕೆ ವೈರಸ್ನೊಂದಿಗೆ ಯಾವುದೇ ಸಂಬಂಧವಿಲ್ಲ. ಇದೊಂದು ಸಾಮೂಹಿಕ ಸನ್ನಿಯಷ್ಟೇ. ಕಾರಣಗಳು ಬೇರೆಯೇ ಇರಬಹುದು ಇಂತಹ ಸಾಮೂಹಿಕ ಹುಚ್ಚುತನ ಕಾಲಕಾಲಕ್ಕೆ ಪ್ರಕಟವಾಗುತ್ತಲೇ ಇರುತ್ತವೆ.  ಇಂಥ ಘಟನೆಗಳು ಇತಿಹಾಸದಲ್ಲಿ ಹಲವು ಬಾರಿ ಆಗಿಹೋಗಿದೆ, ಮುಂದೆಯೂ ಘಟಿಸಲಿವೆ. ಎಲ್ಲಿಯವರೆಗೂ ʼಭಯ ಹಾಗೂ ಸಮೂಹದʼ ಮನೋವಿಜ್ಞಾನ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ಘಟಿಸುತ್ತಲೇ ಇರುತ್ತವೆ.

ʼಭಯʼವನ್ನು ಅಸ್ವಾದಿಸುವುದನ್ನು ಮೊದಲುನಿಲ್ಲಿಸಿ. ಕೆಲವೊಮ್ಮೆ ಮನುಷ್ಯ ಭಯವನ್ನು ಸಹ ಆಸ್ವಾದಿಸಲು ಆರಂಭಿಸುತ್ತಾನೆ. ಇಲ್ಲದಿದ್ದಲ್ಲಿ ಭೂತಗಳ ಚಲನಚಿತ್ರಗಳನ್ನು ನೋಡಲು ಏಕೆ ಹೋಗುತ್ತಾನೆ ? ನಮ್ಮೊಳಗೆ ಭಯದ ಕುರಿತು ಒಂದು ಆಕರ್ಷಣೆಯಿದೆ, ಇದನ್ನುಅರಿಯರಿ. ಇದನ್ನು ಅರಿಯದೆ ಭಯದ ಮನೋವಿಜ್ಞಾನವನ್ನು ಅರಿಯಲಾಗದು. ನಮ್ಮೊಳಗೆ ಇರುವ ಭಯ ಹಾಗೂ ಭಯದ ಆಕರ್ಷಣೆಯನ್ನು ಒಮ್ಮೆ ನೋಡಿರಿ. ಏಕೆಂದರೆ ಸಾಮಾನ್ಯವಾಗಿ ನಾವು ಹೆದರಿಸುವುದನ್ನು ಹಾಗೂ ಹೆದರವುದನ್ನು ಆಸ್ವಾದಿಸುತ್ತೇವೆ. ಇದು ನಮ್ಮ ಅಚೇತನ ಮನಸ್ಸನ್ನು ಆವರಿಸುವಷ್ಟು ಶಕ್ತಿಶಾಲಿಯಾಗಿರುವುದಿಲ್ಲ. ನಿಮ್ಮ ಭಯದ ಮಾಲೀಕ ನೀವೇ ಆಗಿರುತ್ತೀರಿ, ಆದರೆ ಸಮೂಹಸನ್ನಿಯಲ್ಲಿ ನಿಮ್ಮ ಭಯದ ಮೇಲಿರುವ ಮಾಲಿಕತ್ವ ಕಳೆದುಕೊಳ್ಳುವಿರಿ.

ಎಚ್ಚರವಿರಲಿ… ನಿಮ್ಮೊಳೊಗೆ ಭಯ ಮೂಡಿಸುವಂತ ಹಯಾವುದೇ ವಿಡಿಯೋಗಳನ್ನು, ಸುದ್ದಿಯನ್ನು ನೋಡುವುದು , ಸುದ್ದಿಯನ್ನು ಹರಡುವುದನ್ನು ನಿಲ್ಲಿಸಿ. ಮಹಾಮಾರಿಯ ಕುರಿತು ಮಾತನಾಡುವುದನ್ನು ನಿಲ್ಲಿಸಿ. ಒಂದೇ ವಿಚಾರವನ್ನು ಮತ್ತೆಮತ್ತೆ ಪುನರುಚ್ಚರಿಸುವುದರಿಂದ ಆತ್ಮ ಸಮ್ಮೋಹನಕ್ಕೆ ಒಳಗಾಗುತ್ತೇವೆ. ಇದರಿಂದನಮ್ಮ ಶರೀರದಲ್ಲಿ ರಾಸಾಯನಿಕ ಬದಲಾವಣೆಗಳಾಗುತ್ತವೆ. ಕೆಲವೊಮ್ಮೆ ಈ ರಾಸಯಾನಿಕ ಬದಲಾವಣೆಗಳು ಎಷ್ಟು ಅಪಾಯಕಾರಿ ಎಂದರೆ ಕೆಲವೊಮ್ಮೆ ನಿಮ್ಮ ಜೀವವೇ ಬೆಲೆ ತೆರಬೇಕಾಗುತ್ತದೆ. ಮಹಾಮಾರಿಯ ಹೊರತುಪಡಿಸಿ ಬಹಳಷ್ಟು ಸುಂದರಸಂಗತಿಗಳು ಘಟಿಸುತ್ತಿವೆ. ಅದರತ್ತ ಒಮ್ಮೆ ನೋಡಿ. ಒಳ್ಳೆಯ ಸಾಹಿತ್ಯ ಓದಿ, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಳ್ಳಿ, ಸಾತ್ವಿಕ ಆಹಾರವನ್ನುಸೇವಿಸಿ. ಕೊನೆಯದಾಗಿ,  ತಾಳ್ಮೆಯಿಂದಿರಿ; ಶೀಘ್ರದಲ್ಲಿಯೇ ಎಲ್ಲವೂ ಬದಲಾಗುವುದು.

ಯಾವುದು ಅನಿವಾರ್ಯವೋ ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ. ಭಯ ಒಂದು ಮೌಢ್ಯ. ಅದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ.

 

1 Comment

  1. ಈ ಧ್ವನಿಮುದ್ರಿಕೆಯನ್ನು ಕೇಳಿದ್ದೇನೆ. ನಿಮ್ಮ ಭಾವಾನುವಾದ ತುಂಬಾ ಚೆನ್ನಾಗಿದೆ. ತುಂಬಾ ಸರಳ, ಸಂಕ್ಷ್ಇ ಪ್ತ ವಾಗಿ ಬರೆದಿದ್ದೀರಿ. ಧನ್ಯವಾದಗಳು 🙏

Leave a Reply