ಯಾವುಯಾವುದಕ್ಕೋ ತಲೆಕೆಡಿಸಿಕೊಂಡು ಸುಮ್ಮನೆ ಕೊರಗುತ್ತ ಕೂರಬೇಡಿ… ಕೊರಗಿನಿಂದ ಹೊರಬರುವುದು ಹೇಗೆ? ಈ ಚಿಕ್ಕ ವಿಡಿಯೋ ನೋಡಿ!
ಕೊರಗು ನೀಗುವಲ್ಲಿ ಪ್ರತಿಯೊಬ್ಬರೂ ಹಾಯುವ ಈ 5 ಹಂತಗಳನ್ನು ಗಮನಿಸಿ. ನೀವು ಯಾವ ಹಂತದಲ್ಲಿ ಸಿಲುಕಿದ್ದೀರಿ, ನಿರುಕಿಸಿ. ಕೊನೆಗೂ ನೀವು ನಿಮ್ಮ ಬದುಕನ್ನು ಬಾಳಲೇಬೇಕು. ಕಾಲವ್ಯರ್ಥ ಮಾಡಬೇಡಿ, ಖುಷಿಯಾಗಿರಿ!!
ಸಂಬಂಧಗಳು ಕಳಚಿಹೋದಾಗ, ಸಂಗಾತಿ ತೀರಿಹೋದಾಗ ಅಥವಾ ಬೆಸುಗೆಯೇ ಸುಳ್ಳಾದಾಗ ಉಂಟಾಗುವ ಕೊರಗು ಕಡಿಮೆಯಲ್ಲ. ಇಂಥದನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಅನುಭವಿಸಿಯೇ ಇರುತ್ತಾರೆ. ಆದರೆ ಇದನ್ನು ಎದುರಿಸುವ ರೀತಿ ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನ. ಕೆಲವರು ವಿಪರೀತ ವಿಷಾದದಲ್ಲಿ ತಮ್ಮ ಬದುಕನ್ನೆ ನಷ್ಟಮಾಡಿಕೊಂಡರೆ, ಮತ್ತೆ ಕೆಲವರು ಬಹಳ ಬೇಗ ನೋವಿನಿಂದ ಹೊರಬಂದು ತಮ್ಮ ಬದುಕಿನ ಹಾದಿ ಹಿಡಿಯುತ್ತಾರೆ.
ಯಾವ ನೋವೂ ಶಾಶ್ವತವಲ್ಲ, ನಲಿವು ಕೂಡಾ. ಆದರೆ ಈ ಎರಡನ್ನೂ ಶಾಶ್ವತವಾಗಿ ಇರಿಸಿಕೊಳ್ಳುವ ಚಾವಿ ಇರುವುದು ನಮ್ಮ ಕೈಯಲ್ಲೇ. ನಾವು ಕೊರಗನ್ನು ಎದೆಯೊಳಗೆ ಕೂಡಿಟ್ಟು ಬೀಗ ಜಡಿದರೆ ಶಾಶ್ವತ ದುಃಖಿಗಳಾಗಿ ಉಳಿಯುತ್ತೇವೆ. ಅದೇ ಕೊರಗನ್ನು ಬಾಗಿಲಾಚೆ ಅಟ್ಟಿ ಒಳಬರದಂತೆ ಬೀಗ ಜಡಿದರೆ ಶಾಶ್ವತ ಖುಷಿ ನಮ್ಮದಾಗುತ್ತದೆ.
ನಿಮಗೇನು ಬೇಕು, ನೀವೇ ನಿರ್ಧರಿಸಿ!!