ಕೃಷ್ಣ: ಮ್ಯಾನೇಜ್ಮೆಂಟ್ ಗುರು !

ಕೃಷ್ಣ ಬಹು ಆಯಾಮದಲ್ಲಿ ಈ ಭೂಮಿಯ ಮೇಲೆ ಬದುಕಿ ಬಾಳಿದವನು. ಈ ಪೃಥ್ವಿಯ ಪೂರ್ತಿ ಜೀವನವನ್ನು ಇಡಿಯಾಗಿ ಸ್ವೀಕರಿಸುತ್ತಾನೆ. ಕೃಷ್ಣ ಹೇಳುವ ಮೋಕ್ಪ ಈ ಭೂಮಿಯ ಮೇಲೆ ಇದೆ. ಅವನು ಸಮಗ್ರ ಸ್ವಿಕೃತಿಯನ್ನು ಹೇಳುತ್ತಾನೆ. ಅವನಿಗೆ ನಿರಾಕರಿಸುವಂಥದು, ನಿಷೇಧಿಸುವಂಥದು ಏನೂ ಇಲ್ಲವೆ ಇಲ್ಲ | ಜಯದೇವ ಪೂಜಾರ್

ಓಶೋ ಹೇಳುವಂತೆ, ಕೆಲವು ಮಹತ್ವಪೂರ್ಣ ವ್ಯಕ್ತಿಗಳು ತಮ್ಮ ಸಮಯಕ್ಕಿಂತ ಮೊದಲೇ ಹುಟ್ಟುತ್ತಾರೆ. ಹಾಗೇ ಕೃಷ್ಣ ತನ್ನ ಕಾಲಕ್ಕಿಂತ 5000 ವರ್ಷ ಮುಂಚಿತವಾಗಿ ಜನಿಸಿದ. ಗತಕಾಲವು ಕೃಷ್ಣನನ್ನು ಅರ್ಥ ಮಾಡಿಕೊಳ್ಳುವಲ್ಲಿ ಯೋಗ್ಯವಾಗಲಿಲ್ಲ. ಬರುವ ಭವಿಷ್ಯದಲ್ಲಿ ನಾವುಗಳು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಯೋಗ್ಯವಾಗಬಹುದು. ನಾವು ಯಾರನ್ನು ಅರ್ಥ ಮಾಡಿಕೊಳ್ಳಲು ಆಗುದಿಲ್ಲವೋ ಅವರನ್ನು ಪೂಜಿಸಲು ಪ್ರಾರಂಭಿಸುತ್ತೆವೆ.

ಕೃಷ್ಣ ಸಂಕೀರ್ಣ ವ್ಯಕ್ತಿತ್ವ ಎಲ್ಲರನ್ನು ಆಕರ್ಷಿಸುತ್ತದೆ. ಅನೇಕ ಮಹಾನ ವ್ಯಕ್ತಿಗಳು ಅವನಿಂದ ಪ್ರೇರಣೆ ಪಡಿದಿದ್ದಾರೆ. ಬುದ್ದ, ಮಹಾವೀರ, ಜೀಸಸ್, ಜರಾತೂಸ್ತ್ರ, ನಾನಕ… ಇವರೇಲ್ಲ ಬೋರಿಂಗ್ ವ್ಯಕ್ತಿತ್ವಗಳು ಬಹುತೇಕ ಒಂದೇ ಆಯಾಮದಲ್ಲಿ ಬದುಕಿದವರು, ಪೂಜಿಸಿಕೊಳ್ಳಲು ಯೋಗ್ಯರೆನ್ನಿಸಿಕೊಂಡು ಬಿಡುತ್ತಾರೆ. ಬದುಕಲಲ್ಲವೆನ್ನಿಸುತ್ತದೆ. ಆದರೆ ಕೃಷ್ಣ ಬಹು ಆಯಾಮದಲ್ಲಿ ಈ ಭೂಮಿಯ ಮೇಲೆ ಬದುಕಿ ಬಾಳಿದವನು. ಈ ಪೃಥ್ವಿಯ ಪೂರ್ತಿ ಜೀವನವನ್ನು ಇಡಿಯಾಗಿ ಸ್ವೀಕರಿಸುತ್ತಾನೆ. ಕೃಷ್ಣ ಹೇಳುವ ಮೋಕ್ಪ ಈ ಭೂಮಿಯ ಮೇಲೆ ಇದೆ. ಅವನು ಸಮಗ್ರ ಸ್ವಿಕೃತಿಯನ್ನು ಹೇಳುತ್ತಾನೆ. ಅವನಿಗೆ ನಿರಾಕರಿಸುವಂಥದು, ನಿಷೇಧಿಸುವಂಥದು ಏನೂ ಇಲ್ಲವೆ ಇಲ್ಲ.

ಕೃಷ್ಣ ಮಕ್ಕಳೊಂದಿಗೆ ಮಕ್ಕಳಂತೆ ಆಟವಾಡುತ್ತಾನೆ, ಬೆಣ್ಣೆ ಕದಿಯುತ್ತಾನೆ, ತುಂಟಾಟ ಮಾಡುತ್ತಾನೆ, ಗೋಪಿಕೆಯರನ್ನು ಚುಡಾಯಿಸುತ್ತಾನೆ, ಮೋಹಿಸುತ್ತಾನೆ, ಪ್ರೇಮಿಸುತ್ತಾನೆ, ಒಲಿದು ಬಂದವರಿಗೆ ಒಲವು ಕರುಣಿಸುತ್ತಾನೆ, ಸಾಮಾನ್ಯನಂತೆ ದನ ಕಾಯುತ್ತಾನೆ, ಅದ್ಬುತವಾಗಿ ಕೊಳಲು ಬಾರಿಸುತ್ತಾನೆ. ಎಲ್ಲರಂತೆ ಹಾಡುತ್ತಾನೆ ಕುಣಿಯುತ್ತಾನೆ. ಇವನು ನಮ್ಮ ದೇವರುಗಳಂತೆ ಗಂಭೀರನ್ನಲ್ಲ, ನಗುನಗುತ್ತ ಜೀವನ ಸ್ವೀಕರಿಸುತ್ತಾನೆ, ಎಲ್ಲ ಮಕ್ಕಳು ಅಳುತ್ತ ಭೂಮಿ ಮೇಲೆ ಬಂದರೆ ಇವನು ನಗುತ್ತ, ಅರ್ಜುನನಿಗೆ ಗೆಳೆಯನಾಗುತ್ತಾನೆ. ಮಾರ್ಗದರ್ಶಕನಾಗುತ್ತಾನೆ, ಗುರುವಾಗುತ್ತಾನೆ, ಯುದ್ದಕ್ಕೆ ಮೊದಲೇ ಸೋತವನಂತೆ ಗಾಂಡಿವವನ್ನೆ ಕೆಳಗಿಟ್ಟು ಕುಳಿತಾಗ, ಅವನಿಗೆ ವಿರಾಟ ಸ್ವರೂಪದ ದರ್ಶನ ಮಾಡಿಸುತ್ತಾನೆ( ಭಗವದ್ಗಿತೆ 13 ನೇಯ ಅಧ್ಯಾಯ), ಕೊನೆಗೆ ತನಗೆ ಸಂಪೂರ್ಣ ಶರಣಾಗುವಂತೆ (surrender) ಹೇಳುತ್ತಾನೆ, ರಾಜನೀತಿಜ್ಞನಂತೆ ಯುದ್ದ ತಂತ್ರ ಹೆಣೆಯುತ್ತಾನೆ, ಸಂಪೂರ್ಣ ಪ್ರೇಮಮಯಿ ಕೃಷ್ಣ ದುಷ್ಟರ ಸಂಹಾರಕ್ಕೆ ಪಾಂಡವರ ಪರ ನಿಂತು, ಸತ್ಯದ ಜಯಕ್ಕೆ ಕಾರಣವಾಗುತ್ತಾನೆ…ಹೀಗೆ ಕೃಷ್ಣ ಬಹು ಆಯಾಮಗಳಲ್ಲಿ ಬದುಕುತ್ತಾ ಅನೇಕ ಸಂದೇಶಗಳನ್ನು ನೀಡುತ್ತಾನೆ.

ಕೃಷ್ಣ ಶಾಂತಿವಾದಿಯಲ್ಲ, ಯುದ್ದವಾದಿಯೂ ಅಲ್ಲ, ವಾದದ ಅರ್ಥ ಎರಡರಲ್ಲಿ ನಾವು ಒಂದು ಆಯ್ದಕೊಳ್ಳುತ್ತೇವೆ ಎಂದು. ಕೃಷ್ಣ ಅ – ವಾದಿ.(ಯಾವುದೇ ವಾದವಿಲ್ಲದವನು).  ಶಾಂತಿಯಿಂದ ಶುಭ ಫಲಿಸಿದರೆ ಸ್ವಾಗತ, ಯುದ್ದದಿಂದ ಲಭಿಸಿದರೂ ಸ್ವಾಗತವೆಂದು…!

ಕೃಷ್ಣ ಯಾವುದೋ ಮಹಾ ಸುಖದ ಅನ್ವೇಷಣೆಗೆ ಈ ಸುಖವನ್ನು ತ್ಯಜಿಸಿ ಹೋಗುವುದಿಲ್ಲ, ಈ ಸುಖವನ್ನು ಆ ಸುಖದ ಮೆಟ್ಟಲಿನ್ನಾಗಿಸಿಕೊಂಡಿದ್ದಾನೆ. ಅವನು ಸುಖದ ವಿರೋಧಿಯಲ್ಲ.

ಸಂಪನ್ಮೂಲಗಳಿಗಿಂತ ಕೌಶಲ್ಯ ಮತ್ತು ಪರಿಶ್ರಮಗಳೇ ಹೆಚ್ಚು ಪರಿಣಾಮಕಾರಿ ಎನ್ನುವ ಕೃಷ್ಣನ management skills ನಮಗೆ ಮಾರ್ಗದರ್ಶಕವಾದವುಗಳು. ಅಷ್ಟಕ್ಕೂ ಅವನು ಪೂರ್ಣಾವತಾರ. ಯಾಕೆಂದರೆ ನವರಸಗಳನ್ನು ಅನುಭವಿಸದವನು. ಕೃಷ್ಣನನ್ನು ಪೂಜೆಗೆ ಸೀಮಿತಗೊಳಿಸದೆ, ಆತನನ್ನು ನಮ್ಮ ಬದುಕೇ ಆಗಿಸಿಕೊಳ್ಳಬೇಕಾಗಿದೆ. 

Leave a Reply