ರಾಜಕಾರಣಿಗಳೆಂಬ ಲಂಪಟರಿಂದ ಈ ದೇಶಕ್ಕೆ ಮುಕ್ತಿ ಯಾವಾಗ? : ಓಶೋ ಉತ್ತರ

ಎಲ್ಲಿಯವರೆಗೂ ನೀವು ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ನೀವು ಲೂಟಿಯಾಗುತ್ತಲೇ ಇರುವಿರಿ.
ನಿಮ್ಮನ್ನು ದೋಚುವವರು ಹೆಸರು ಮಾತ್ರ ಬದಲಾಗುವುದು…. ~ ಓಶೋ | ಕನ್ನಡಕ್ಕೆ: ಸ್ವಾಮಿ ಧ್ಯಾನ್  ಉನ್ಮುಖ್

ಓಶೋ ಅವರನ್ನು ಯಾರೋ ಕೇಳಿದರು
“ ರಾಜಕಾರಣಿಗಳೆಂಬ ಲಂಪಟರಿಂದ ಈ ದೇಶಕ್ಕೆ ಮುಕ್ತಿ ಯಾವಾಗ ?” ಎಂದು.

ಅದಕ್ಕೆ ಓಶೋ ಉತ್ತರಿಸಿದ್ದು ಹೀಗೆ:
“ಉತ್ತರ ಕಠಿಣವಾಗಿದೆ… ಪ್ರಶ್ನೆ ರಾಜಕಾರಣಿಗಳಿಂದ ಮುಕ್ತಿಗೆ ಸಂಬಂದ್ಧಿಸಿದ್ದಲ್ಲ, ನಿಮ್ಮ ಅಜ್ಞಾನದ ಮುಕ್ತಿಗೆ ಸಂಬಂಧಿಸಿದ್ದು.
ನೀವು ಎಲ್ಲಿಯವರೆಗೆ ಅಜ್ಞಾನಿಯಾಗಿರುವಿರೋ ಅಲ್ಲಿಯವರೆಗೆ ನಿಮ್ಮ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ನಿಮ್ಮ ಶೋಷಣೆ ನಿಮ್ಮ ಜಾಗೃತಿಯೊಂದಿಗೆ ಸಂಬಂಧಿಸಿದೆ.
ಇಲ್ಲದಿದ್ದರೆ ನಿಮ್ಮನ್ನು ಯಾರು ಶೋಷಿಸಿದರೆ ವ್ಯತ್ಯಾಸವೇನು ?
ಯಾವ ಪಕ್ಷದ, ಯಾವ ದ್ವಜದ ಹೆಸರಲ್ಲಿ ಶೋಷಿಸಿದರೆ ವ್ಯತ್ಯಾಸವೇನು?

ರಾಜಕಾರಣಿಗಳಲ್ಲದಿದ್ದರೆ ಪಂಡಿತರು, ಪುರೋಹಿತರು, ಮೌಲ್ವಿಗಳು ಯಾರಾದರೂ ಸಹಿ ನಿಮ್ಮ ರಕ್ತವನ್ನು ಹೀರುವುದಂತೂ ಖಚಿತ.
ಎಲ್ಲಿಯವರೆಗೂ ನೀವು ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ನೀವು ಲೂಟಿಯಾಗುತ್ತಲೇ ಇರುವಿರಿ.
ನಿಮ್ಮನ್ನು ದೋಚುವವರು ಹೆಸರು ಮಾತ್ರ ಬದಲಾಗುವುದು.

ದುಷ್ಟ ರಾಜಕಾರಣಿಗಳು ದೋಚುವುದನ್ನು ಯಾವಗ ನಿಲ್ಲಿಸುವರು ಎಂದು ಕೇಳದಿರಿ.
ಇದು ಅರ್ಥಹೀನ ಪ್ರಶ್ನೆ.
ನನ್ನ ಜಾಗೃತಿ ಯಾವಾಗ ಎಂದು ಕೇಳಿ. ಸುಳ್ಳನ್ನು ಸುಳ್ಳಂತೆ ನೋಡುವ ಕ್ಷಮತೆ ಬೆಳಿಸಿಕೊಳ್ಳಿ. ಎಲ್ಲಿಯವರೆಗೂ ಮನುಜಕುಲ ಸುಳ್ಳನ್ನು ಸುಳ್ಳಾಗಿ ನೋಡುವುದಿಲ್ಲವೋ ಅಲ್ಲಿಯವರೆಗೆ ಅವನಿಗೆ ಮುಕ್ತಿಯಿಲ್ಲ.

 

Leave a Reply