ಮೃತ್ಯು ಧ್ಯಾನ: ಬುದ್ಧ ದೇಹ ತ್ಯಾಗ ಮಾಡಿದ ವಿಧಾನ…

ದೇಹವು ಸಾಯುತ್ತಿದ್ದಂತೆ ಮನಸ್ಸು ಕೂಡ ಅಲೋಚಿಸುವುದನ್ನು ನಿಲ್ಲಿಸುತ್ತದೆ- ಕಾರಣ, ಎಲ್ಲಾ ಅಲೋಚನೆಗಳು ಜೀವಂತಿಕೆಗೆ ಸಂಬಂಧಿಸಿದ್ದಾಗಿದೆ. ನೀವು ಸಾಯಲು ಆರಂಭಿಸುತ್ತಿದ್ದಂತೆ, ಮನಸ್ಸು ಬೀಳಲು ಆರಂಭಿಸುತ್ತದೆ. ಕೇವಲ ಎರಡು-ಮೂರು ತಿಂಗಳ ಅಭ್ಯಾಸದ ಬಲದಿಂದ ಕೇವಲ ಐದು ನಿಮಷಗಳ ಒಳಗೆ ಸಾಯಲು ಆರಂಭಿಸುವಿರಿ…. | ಓಶೋ, ಭಾವಾನುವಾದ: ಸ್ವಾಮಿ ಧ್ಯಾನ್‌ ಉನ್ಮುಖ್

ಹಾಸಿಗೆ ಮೇಲೆ ಮಲಗಿ, ದೀಪವನ್ನು ಆರಿಸಿ, ಸಾವು ಸಂಭವಿಸುತ್ತಿದೆ ಎಂದು ಭಾವಿಸಿ. ದೇಹವನ್ನು ಸಡಿಲಗೊಳಿಸಿತ್ತಾ ಹೋಗಿ ಮತ್ತು ನೀವು ಸಾಯುತ್ತಿರುವಿರಿ ಎಂದು ಭಾವಿಸಿ, ಆದ್ದರಿಂದ ಈಗ ನಿಮ್ಮ ದೇಹ ಚಲನೆ ಸಾಧ್ಯವಾಗುತ್ತಿಲ್ಲ – ನೀವು ಕೈಯನ್ನು ಚಲಿಸಲು ಬಯಸಿದ್ದರೂ ಸಹ, ನಿಮಗೆ ಸಾಧ್ಯವಾಗುತ್ತಿಲ್ಲ. ನೀವು
‘ಸಾಯುತ್ತಿರುವಿರಿʼ ಎಂಬ ಭಾವನೆಯನ್ನು ಮುಂದುವರಿಸಿ – ನೀವು ಸಾಯುತ್ತಿದ್ದೀರಿ, ಸಾಯುತ್ತಿದ್ದೀರಿ ಮತ್ತು ದೇಹವು ಸತ್ತಿದೆ ಎಂಬ ನಾಲ್ಕು ಅಥವಾ ಐದು ನಿಮಿಷಗಳ ಭಾವನೆ. ಮತ್ತು ಸಾಯುವ ಈ ಐದು ನಿಮಿಷಗಳ ಅನುಭವದ ಮೂಲಕ ನೀವು ಸಂಪೂರ್ಣವಾಗಿ ವಿಭಿನ್ನವಾದ ಜೀವನದ ಗುಣಮಟ್ಟವನ್ನು ಅನುಭವಿಸುವಿರಿ.

ದೇಹವು ಸಾಯುತ್ತಿದ್ದಂತೆ ಮನಸ್ಸು ಕೂಡ ಅಲೋಚಿಸುವುದನ್ನು ನಿಲ್ಲಿಸುತ್ತದೆ- ಕಾರಣ, ಎಲ್ಲಾ ಅಲೋಚನೆಗಳು ಜೀವಂತಿಕೆಗೆ ಸಂಬಂಧಿಸಿದ್ದಾಗಿದೆ. ನೀವು ಸಾಯಲು ಆರಂಭಿಸುತ್ತಿದ್ದಂತೆ, ಮನಸ್ಸು ಬೀಳಲು ಆರಂಭಿಸುತ್ತದೆ. ಕೇವಲ ಎರಡು-ಮೂರು ತಿಂಗಳ ಅಭ್ಯಾಸದ ಬಲದಿಂದ ಕೇವಲ ಐದು ನಿಮಷಗಳ ಒಳಗೆ ಸಾಯಲು
ಆರಂಭಿಸುವಿರಿ.

ದೇಹ ಸಾಯುತ್ತಿದ್ದಂತೆ ಶುಧ್ಧ ಅರಿವಾಗುವಿರಿ, ಪ್ರಜ್ವಾಲಿತ ಅರಿವು ಮಾತ್ರ. ನಿಮ್ಮ ತ್ರೀನೇತ್ರದ ಬಳಿಯಲ್ಲಿ ನೀಲಿ ಬೆಳಕನ್ನು ಕಾಣುವಿರಿ. ಅದು ಬದುಕಿನ ಪವಿತ್ರ ಸಾರವಾಗಿದೆ. ನೀಲಿ ಬೆಳಕು ಭಾಸವಾಗುತ್ತಿರುವಂತೆ ನಿದ್ರೆಗೆ ಜಾರಿ.
ಇಡೀ ರಾತ್ರಿ ಮೃತ್ಯುಧ್ಯಾನವಾಗಿ ಪರಿವರ್ತಿತಗೊಳ್ಳುವುದು, ಮುಂಜಾನೆ ಮೊದಲಿಗಿಂತಲೂ ಹೆಚ್ಚು ಜೀವಂತಿಕೆ, ಹೆಚ್ಚು ಯೌವ್ವನ, ಹೆಚ್ಚು ತಾಜತನ ಅನುಭವಿಸುವಿರಿ, ಅದೇ ತಾಜತನವನ್ನು ವಿಶ್ವಕ್ಕೆ ಹಂಚುಕೊಳ್ಳುವಿರಿ. ವಿಶ್ವವನ್ನು ಆಶೀರ್ವಧಿಸುವುದರಿಂದ ನೀವು ಸಹ ಆಶೀರ್ವದಿಸಲ್ಪಡುವಿರಿ.

ಮೃತ್ಯುಧ್ಯಾನದ ನಂತರ ಸಾವೊಂದು ಭ್ರಮೆ ಎಂಬುದು ಅರಿವಾಗುತ್ತದೆ. ಇದುವರೆಗೂ ಯಾರು ಸತ್ತಿಲ್ಲ ಮತ್ತು ಯಾರಿಗೂ ಸಾವಿಲ್ಲ ಎಂದು ಅನುಭವವೇದ್ಯವಾಗುತ್ತದೆ. ಹೆಚ್ಚು ದೇಹಾತ್ಮ ಭಾವ ಇರುವುದರಿಂದ ಸಾವು ಎಂಬುದು ಒಂದಿದೆ ಎಂದು ಎನಿಸುತ್ತಿದೆ; ಕಾರಣ ಈ ದೇಹವೇ ನಮ್ಮ ಜೀವಾಳ ಎಂದು ನಂಬಿದ್ದೇವೆ. ಈ ಧ್ಯಾನ ನಿಮ್ಮ ಸಾವಿಗೆ ಮಹೋನ್ನತ ಸಿದ್ಧತೆಯಾಗಿದೆ. ಒಂದಲ್ಲ ಒಂದು ದಿನ ಸಾಯಲೇ ಬೇಕು, ಅಂತಹ ಸಾವಿಗೆ ನೀವು ಸಿದ್ಧರಾಗಿದ್ದೀರಿ!

ಬುದ್ಧ ಅವರ ಮಹಾನಿರ್ವಾಣಕ್ಕೂ ಮೊದಲು ತಮ್ಮ ಶಿಷ್ಯಂದಿರ ಅನುಮತಿ ಕೇಳಿದರು. ಅವರು ಹೇಳಿದ್ದು,ʼ ಇನ್ನೇನು ನಾನು ಕೆಲವೇ ಕ್ಷಣದಲ್ಲಿ ದೇಹತ್ಯಾಗ ಮಾಡಲಿದ್ದೇನೆ, ನನ್ನಲ್ಲಿ ನಾನು ಅದೃಶ್ಯನಾಗುವ ಸಮಯ ಬಂದಿದೆ. ಏನನ್ನಾದರೂ ಕೇಳುವುದಿದ್ದರೆ ಕೇಳಿ?ʼ

ಕೇಳಲು ಅವರ ಬಳಿ ಏನು ಇರಲಿಲ್ಲ, ಬುದ್ಧ ತಮ್ಮ ಜೀವನದ ಅನುಕ್ಷಣ ಬೋಧಿಸುತ್ತಲೇ ಇದ್ದರು. ಮತ್ತೆ, ಅವರ ಬಳಿ ಕೇಳಲು ಪ್ರಶ್ನೇಗಳಿದ್ದರು ಪ್ರಶ್ನೇ ಕೇಳುವ ಸಮಯ ಅದಲ್ಲ. ಅವರು ಅಳಲು ಪ್ರಾರಂಭಿಸಿದರು. ಬುದ್ಧ ʼಅಳದಿರಿ ನನ್ನ ಜೀವನದ ಸಂಪೂರ್ಣ ಸಂದೇಶವೇ ಇದಾಗಿದೆ, ಸಾಯುವಂತಹದು ಯಾವುದೂ ಇಲ್ಲ, ನನ್ನ
ಮನೆಗೆ ಮರುಳುತ್ತಿದ್ದೇನೆ ಅಷ್ಟೇ.. ನಾನು ಒಳಗೆ ತಿರುಗುತ್ತಿದ್ದೇನೆ.ʼ ಧ್ಯಾನದ ಭಂಗಿಯಲ್ಲಿ ಕುಳಿತು ಕಣ್ಣು ಮುಚ್ಚಿದರು, ನೋಡ ನೋಡುತ್ತಿರುವಂತೆ ದೇಹ ಸಾಯಲು ಆರಂಭಿಸಿತು. ಅವರು ಬದುಕಿರುವಾಗಲೇ ದೇಹ ಸಾವಿನಡೆಗೆ ಜಾರುತ್ತಿತ್ತು! ದೇಹ ಸಂಪೂರ್ಣ ಶವವಾಗಿ ಮಾರ್ಪಟ್ಟಿತು. ಬೌದ್ಧರು ಹೇಳುವಂತೆ ಇದು ಸಾವೀನ
ಮೊದಲ ಹಂತ.

ಎರಡನೇಯ ಹಂತದಲ್ಲಿ, ಅಲೋಚನೆಗಳು ಇಲ್ಲವಾಗುವವು. ಬುದ್ಧನ ಶಿಷ್ಯಂದಿರು ನಿಜವಾದ ಧ್ಯಾನಿಗಳು, ಹೆಚ್ಚು ಅರಿವುಳ್ಳವರು, ಹೆಚ್ಚು ಸೂಕ್ಷ್ಮ ಸಂವೇದಶೀಲರಾಗಿದ್ದರು. ಹಾಗಾಗಿ, ಬುದ್ಧನ ತಲೆಯಿಂದ ಅಲೋಚನೆಗಳು ಬೀಳುತ್ತಿರುವುದನ್ನು ನೋಡುವುದು ಅವರಿಗೆ ಸಾಧ್ಯಾವಾಯಿತು. ಮರದಿಂದ ಒಣಗಿದೆ
ಎಲೆಗಳಂತೆ ಅಲೋಚನೆಗಳು ಬೀಳಲಾರಂಭಿಸದವು. ಅಲೋಚನೆಗಳು ತೀರೋಹಿತವಾಗುತ್ತಿದ್ದಂತೆ ಎರಡನೇಯ ಹಂತವು ಪೂರ್ಣಗೊಂಡಿತು.

ಮೂರನೇಯ ಹಂತ: ಅವರ ಹೃದಯ, ಅವರ ಭಾವನೆಗಳು ಕಣ್ಮರೆಯಾಗಲಾರಂಭಿಸಿದವು. ಹೊಗೆಯ ರೂಪದಲ್ಲಿ ಬುದ್ಧರ ದೇಹದಿಂದ ಹೊರಹೊಗುತ್ತಿರುವುದನ್ನು ನೋಡಿದರು. ಎಲ್ಲವೂ ಕಣ್ಮರೆಯಾದ ನಂತರ

ನಾಲ್ಕನೇಯ ಹಂತ: ಅವರು ಅಜ್ಞಾತದೆಡೆಗೆ ಜಾರಿಹೋಗುವುದನ್ನು ಸಹಾ ಶಿಷ್ಯರು ನೋಡಿದರು. ಬುದ್ಧತ್ವಕ್ಕೆ
ಉಪಲಬ್ಧರಾದ ಶಿಷ್ಯರು , ಬಿಂದು ಸಾಗರದೊಂದಿಗೆ ಒಂದುಗುವುದನ್ನು ನೋಡಿದರು.

ಈ ನಾಲ್ಕು ಹಂತಗಳು: ಮೊದಲು ಐದು ನಿಮಿಷಗಳ ಸಾಯುವ ಸರಳ ಧ್ಯಾನವನ್ನು ಪ್ರಾರಂಭಿಸಿ. ನಂತರ ಮೂರನೇ ಕಣ್ಣಿನಲ್ಲಿ ನೀಲಿ ಬೆಳಕನ್ನು ನೋಡುತ್ತಿರಿ. ನಂತರ ನಿದ್ರೆಗೆ ಜಾರುತ್ತೀರಿ. ಈ ಮೂಲಕ ನಾಲ್ಕು ಹಂತಗಳನ್ನು ನೀವು ನೋಡಲು ಸಾಧ್ಯವಾಗುತ್ತದೆ. ನಿಧಾನವಾಗಿ, ನಿಧಾನವಾಗಿ, ನೀವು ಜಾಗೃತರಾಗುತ್ತೀರಿ – ಮತ್ತು ಇದು ಅತ್ಯುತ್ತಮ ತಯಾರಿ. ತದನಂತರ ನೀವು ನಿಜವಾಗಿಯೂ ಸಾಯಬಹುದು! ಒಂದು ದಿನ ಸಾವು ಬಂದಾಗ, ನೀವು ಒಪ್ಪಿಕೊಳ್ಳುವಿರಿ ಮತ್ತು ಸ್ವಾಗತಿಸುವಿರಿ ಮತ್ತು ಅತ್ಯಂತ ಪ್ರೀತಿಯಿಂದ ಅದರೆಡೆಗೆ ಹೋಗುವಿರಿ. ಆಗ ಸಾವು ಸಾವಲ್ಲ, ದಿವ್ಯತ್ವದ ಎಡೆಗೆ ದ್ವಾರವಾಗುತ್ತದೆ.

Leave a Reply