ಹೇಗೆ ನಿಮ್ಮ ಮೂರನೇ ಕಣ್ಣು ನಿಮ್ಮ ಇರುವಿಕೆಯನ್ನು ತೋರುವುದೋ, ಹಾಗೆ ನಿಮ್ಮ ಅಂತರ್ ವಾಣಿಯನ್ನು ಆಲಿಸಲು ಮೂರನೇ ಕಿವಿಯು ಸಹಾಯ ಮಾಡುತ್ತದೆ…|ಓಶೋ , ಭಾವಾನುವಾದ: ಶಿವಕುಮಾರ್ ಪಿ.ಬಿ
ಮೂರನೆಯ ಕಣ್ಣು (ಶಿವನೇತ್ರ) ಇರುವ ಹಾಗೆ, ಮೂರನೆಯ ಕಿವಿಯೂ ಸಹ ಇದೆ, ಇದರ ಬಗ್ಗೆ ಯಾವ ಗ್ರಂಥಗಳಲ್ಲಿಯೂ ಉಲ್ಲೇಖವಿಲ್ಲ.
ಹೇಗೆ ನಿಮ್ಮ ಮೂರನೇ ಕಣ್ಣು ನಿಮ್ಮ ಇರುವಿಕೆಯನ್ನು ತೋರುವುದೋ, ಹಾಗೆ ನಿಮ್ಮ ಅಂತರ್ ವಾಣಿಯನ್ನು ಆಲಿಸಲು ಮೂರನೇ ಕಿವಿಯು ಸಹಾಯ ಮಾಡುತ್ತದೆ.
ಯಾವಾಗ ನಿಮ್ಮ ಹೊರಗಿನ ಕಿವಿಗಳು ಸ್ತಬ್ದವಾಗುವವೋ, ಯಾವಾಗ ನೀವು ಯಾರ ಮಾತನ್ನು ಆಲಿಸಲಾಗುವುದಿಲ್ಲವೋ, ನೀವು ಯಾವಾಗ ಸಂಪೂರ್ಣ ಹೊರ ಜಗತ್ತಿಗೆ ಕಿವುಡಾಗುವಿರೋ, ಯಾವ ಹೊರ ಜಗತ್ತಿನ ಮಾತುಗಳು ನಿಮ್ಮ ಹೊರ ಕಿವಿಯ ಮೂಲಕ ಒಳ ಹೋಗಲಾಗುವುದಿಲ್ಲವೋ, ಯಾವಾಗ ನೀವು ನಿಮ್ಮ ಒಳ ಮತ್ತು ಹೊರಗಿನ ಶಬ್ದಗಳನ್ನು ಸಂಪೂರ್ಣವಾಗಿ ಎಸೆಯುತ್ತೀರೋ, ಯಾವಾಗ ನಿಮ್ಮ ಒಳಗಿನ ಗಲೀಜನ್ನು ಹೊರ ಹಾಕುತ್ತಿರೋ, ನೀವು ನಿಮ್ಮೊಳಗೆ ಸಂಪೂರ್ಣ ಖಾಲಿಯಾಗುತ್ತೀರೋ, ಆಗ ನಿಮಗೆ ನಿಮ್ಮ ಒಳಗಿನ ದ್ವನಿ ಸ್ಪಷ್ಟವಾಗಿ ಕೇಳಿಸಲು ಆರಂಭಿಸುತ್ತದೆ. ಅದು ಯಾವಾಗಲೂ ಅಲ್ಲಿ ಇತ್ತು. ನಿಮ್ಮ ಬಿಡುವಿಲ್ಲದ ಚಟುವಟಿಯಿಂದಾಗಿ ಅದು ಕೇಳಿಸುತ್ತಿರಲಿಲ್ಲ. ಅದನ್ನು ಆಲಿಸಲು ಸಂಪೂರ್ಣ ನಿಶ್ಯಬ್ದತೆಯ ಅವಶ್ಯವಾಗಿ ಬೇಕು.
ಎಲ್ಲಾ ಮಕ್ಕಳು ಹುಟ್ಟುತ್ತಲೇ ಈ ಸ್ಥಿತಿಯಲ್ಲಿ ಗಳಿಸಿಕೊಂಡಿರುತ್ತವೆ. ಎಲ್ಲಾ ಮರಗಳೂ ಸಹ ಸಹಜವಾಗಿ ಈ ಸ್ಥಿತಿಯಲ್ಲಿ ಹುಟ್ಟುತ್ತವೆ. ಎಲ್ಲಾ ಪಕ್ಷಿಗಳೂ ಸಹ ಈ ಸ್ಥಿತಿಯಲ್ಲಿ ಪಡೆದು ಹುಟ್ಟುತ್ತವೆ. ಆಮೆಯೂ ಸಹ ಈ ಸ್ಥಿತಿಯಲ್ಲಿ ಜನನ ಪಡೆಯುತ್ತವೆ. ನೀವು ಆಮೆಯನ್ನು ಗಲಿಬಿಲಿ ಗೊಳಿಸಲು ಸಾಧ್ಯವಿಲ್ಲ. ಆಮೆಗೆ ನೀವು ಹೇಳಬಹುದು: ಇಲ್ಲಿ ಬಾ ನಿನಗೆ ಸದ್ಗತಿಯನ್ನು ತೋರಿಸುತ್ತೇನೆಂದು. ಆಮೆ ಆಗ ಹೇಳುವುದು : ಅಯ್ಯಾ! ನೀನು ಮನೆಗೆ ಹೋಗು ನನಗೆ ನನ್ನ ಬಾಲವನ್ನು ಮಣ್ಣಿನಲ್ಲಿ ಹುದುಗಿಸಿ ಆಟವಾಡಲು ಅನುವುಮಾಡಿಕೊಡು ಎಂದು.
ನೀವು ಒಮ್ಮೆಯಾದರೂ ನಿಮ್ಮ ಅಂತರಂಗದ ದ್ವನಿಯನ್ನು ಆಲಿಸಿದರೆ ಸಾಕು, ನಿಮಗೆ ಯಾವ ಮತ್ತು ಯಾರ ನಿಬಂಧನೆಗಳು ಬೇಡವಾಗುತ್ತವೆ. ನಿಮಗೆ ನಿಬಂಧನೆಗಳ ಅವಶ್ಯಕತೆ ಇಲ್ಲದೇ ನೀವು ಸಂಪೂರ್ಣವಾಗಿ ಜೀವಿಸಬಹುದು.