ಕುಂಡಲಿನಿ ಶಕ್ತಿ ಅಥವ ಸರ್ಪೆಂಟ್ ಪವರ್ : ಓಶೋ

ಇಡೀ ವಿಶ್ವದಲ್ಲಿ ಸರ್ಪವನ್ನು ವರ್ಣಿಸದೆ ಧರ್ಮವೆ ಇಲ್ಲ. ಏಕೆಂದರೆ ಸರ್ಪಕ್ಕೆ ಕುಂಡಲನಿಗೆ ಸರಿ ಹೊಂದುವ ಅನೇಕ ಗುಣಗಳಿವೆ. ಸರ್ಪವೆಂದ ಕೂಡಲೆ ನೆನಪಾಗುವದು ಅದರ ಹರಿದಾಡುವ ಚಲನೆˌ ತೆರಳುವಿಕೆ. ಕುಂಡಲಿನಿ ಎಂದರೆ ಅಂರ್ತಮುಖ ಚಲನೆ… ~ ಓಶೋ | ಜಯದೇವ ಪೂಜಾರ್

ಸರ್ಪವು ಕುಂಡಲಿನಿ ಶಕ್ತಿಯ ಪ್ರತೀಕವಾಗಿ ಯಾಕೆ ಆಯ್ಕೆ ಮಾಡಲ್ಪಟ್ಟಿದೆ? ಸರ್ಪದ ಪ್ರತೀಕವು ಕುಂಡಲನಿಗೆ ಹೆಚ್ಚು ಔಚಿತ್ಯವು ಮತ್ತು ಅರ್ಥಪೂರ್ಣವಾಗಿದೆ. ಇದಕ್ಕಿಂತ ಉತ್ತಮ ಪ್ರತೀಕ ಬೇರೊಂದಿಲ್ಲ. ಅದರಿಂದಾಗಿ ಕುಂಡಲಿನಿ ಮಾತ್ರವೇ ಅಲ್ಲ ಸರ್ಪವು ಕೂಡ ಮಹತ್ತರ ಯಾತ್ರೆಯ ಪ್ರತೀಕವಾಗಿದೆ.

ಇಡೀ ವಿಶ್ವದಲ್ಲಿ ಸರ್ಪವನ್ನು ವರ್ಣಿಸದೆ ಧರ್ಮವೆ ಇಲ್ಲ. ಏಕೆಂದರೆ ಸರ್ಪಕ್ಕೆ ಕುಂಡಲನಿಗೆ ಸರಿ ಹೊಂದುವ ಅನೇಕ ಗುಣಗಳಿವೆ. ಸರ್ಪವೆಂದ ಕೂಡಲೆ ನೆನಪಾಗುವದು ಅದರ ಹರಿದಾಡುವ ಚಲನೆˌ ತೆರಳುವಿಕೆ. ಕುಂಡಲಿನಿ ಎಂದರೆ ಅಂರ್ತಮುಖ ಚಲನೆ. ಸರ್ಪದ ಇನ್ನೊಂದು ವಿಚಾರವೆಂದರೆ ಅದಕ್ಕೆ ಕಾಲಿಲ್ಲದೆ ಚಲಿಸುತ್ತದೆ. ಅದರ ಚಲನೆಗೆ ಸಾಧನವೇನು ಇಲ್ಲ. ಅದು ಕೇವಲ ಊರ್ಜೆ. ಆದರು ಅದು ಪಯಣಿಸುತ್ತದೆ. ಮೂರನೇಯ ವಿಚಾರವೆಂದರೇ ಅದು ಯಾವಗ ಕುಳಿತುಕೊಳ್ಳುವುದೋ ಅದು ಆಗ ಅದು ಸುರಳಿಯಾಕಾರದಲ್ಲಿ ಸುತ್ತಿಕೊಳ್ಳುತ್ತದೆ.

ಕುಂಡಲಿನಿಯು ನಮ್ಮಲ್ಲಿ ಅಜಾಗೃತ ಸ್ಥಿತಿಯಲ್ಲಿದ್ದಾಗ ಇದೇ ರೀತಿ ವಿಶ್ರಮಿಸುತ್ತಿರುತ್ತದೆ. ಉದ್ದನೆಯ ವಸ್ತು ತನ್ನನ್ನು ಚಿಕ್ಕ ಸ್ಥಳದಲ್ಲಿ ಇರಿಸಿಕೊಳ್ಳಬೇಕಾದಗ ಅದು ಸುರಳಿಯಾಗಿಸಿಕೊಳ್ಳುತ್ತದೆ. ಬೇರಾವುದೇ ದಾರಿಯಿಲ್ಲ. ಅತಿ ದೊಡ್ಡ ಶಕ್ತಿ ಚಿಕ್ಕ ಕೇಂದ್ರದ ಮೇಲೆ ಕುಳಿತ್ತಿದೆ. ಹಾಗಾಗಿ ಅದು ಸುರುಳಿಯಾಗಿ ಸುತ್ತಿಕೊಳ್ಳಬೇಕಾಗುತ್ತದೆ. ಯಾವಾಗ ಸರ್ಪವು ಮೇಲೇಳುತ್ತದೋ ಆಗ ಸುರಳಿಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ. ನಮ್ಮೊಳಗೆ ಕುಂಡಲಿನಿ ಶಕ್ತಿ ಮೇಲ್ಮುಖವಾಗಿ ಹರಿದಾಗ ಕುಂಡಲಿನಿಯು ಸುರಳಿ ಇದೇ ರೀತಿ ಬಾಲ ಬಿಚ್ಚಿಕೊಳ್ಳುತ್ತಿರುವ ಅನುಭವವಾಗುತ್ತದೆ.

ಕೆಲವೊಮ್ಮೆ ಸರ್ಪವು ಆಟ ಆಡುವಾಗ ತನ್ನ ಬಾಲವನ್ನು ತಾನೇ ಬಾಯಿಂದ ಹಿಡಿದುಕೊಳ್ಳುವದು. ಮಹತ್ವಪೂರ್ಣ ಮತ್ತು ಮೌಲಿಕವಾದ ಪ್ರತೀಕವಾಗಿದೆ. ಏಕೆಂದರೆ ಯಾವಗ ಕುಂಡಲಿನಿ ಸಂಪೂರ್ಣ ಜಾಗೃತಿಯಾಗುವದೋ ಆಗ ಅದು ವರ್ತುಲಾಕಾರವನ್ನು ಹೊಂದುತ್ತದೆ ಮತ್ತು ಮಂಡಲವನ್ನು ರಚಿಸುತ್ತದೆ. ಅದರ ಹೆಡೆ ತನ್ನದೆ ಬಾಲವನ್ನು ಹಿಡಿದುಕೊಳ್ಳುತ್ತದೆ. ಅದಕ್ಕಾಗಿ ಈ ಪ್ರತೀಕವನ್ನು ಎಲ್ಲ ಕಡೆ ಬಳಸಲಾಗಿದೆ. ಕುಂಡಲಿನಿ ಸಂಪೂರ್ಣ ಜಾಗೃತವಾದಾಗ ಅದು ಸಹಸ್ರಾರವನ್ನು ತಲುಪತ್ತದೆ. ಅದು ಸರ್ಪದ ಹೆಡೆಯ ಹಾಗೇ ತೆರೆದುಕೊಳ್ಳುತ್ತದೆ ಮತ್ತು ಅರಳುತ್ತದೆ. ತನ್ನಲ್ಲಿ ಅನೇಕ ಹೂಗಳು ಅರಳಿದಂತೆ. ಮತ್ತೆ ಅದರ ಬಾಲ ಚಿಕ್ಕದಾಗುತ್ತದೆ.

ಸರ್ಪವು ಹೆಡೆಯೆತ್ತಿ ನಿಂತಿರುವದು ಒಂದು ಅದ್ಬುತ ದೃಶ್ಯ. ಅದು ತನ್ನ ಬಾಲದ ತುದಿಯ ಮೇಲೆ ನೆಟ್ಟಗೆ ನಿಲ್ಲುತ್ತದೆ. ಬಹುಮಟ್ಟಿಗೆ ಇದು ಪವಾಡವೆ ಸರಿ. ಸರ್ಪವು ಬೆನ್ನು ಮೂಳೆ ಹೊಂದಿರದˌ ಮೂಳೆಗಳೇ ಇಲ್ಲದ ಜಂತು ಆದರೂ ಈ ಕ್ರಿಯೆಯನ್ನು ಮಾಡುತ್ತದೆ. ಅದಕ್ಕೆ ತನ್ನೊಳಗಿರುವ ಜೀವನಕ್ಕೆ ಅಗತ್ಯವಾದ ಊರ್ಜೆಯ ಸಹಾಯದಿಂದ ಮಾತ್ರ ಸಾಧ್ಯವಾಗುತ್ತದೆ. ಅದಕ್ಕೆ ನೇರವಾಗಿ ನಿಲ್ಲಲು ಬೇರಾವುದೇ ಗಟ್ಟಿಯಾದ ಸಾಧನವಿಲ್ಲ. ಅದು ಸ್ವಯಂನ ಇಚ್ಚಾಶಕ್ತಿಯ ಬಲದಿಂದ ನಿಲ್ಲುತ್ತದೆ. ಅದಕ್ಕೆ ನಿರ್ಭರಗೊಳ್ಳಲು ಬೇರಾವುದೇ ಭೌತಿಕ ಒಲವಿಲ್ಲ. ಅಂತೆಯೇ ಕುಂಡಲಿನಿ ಜಾಗೃತಗೊಂಡಾಗಲೂ ಅದಕ್ಕಾವುದೆ ಭೌತಿಕ ಆಧಾರವಿರುವುದಿಲ್ಲ. ಅದೊಂದು ಅಭೌತಿಕ ಊರ್ಜೆ.

ಸರ್ಪವು ಒಂದು ಮುಗ್ದ ಜಂತು. ಆದ್ದರಿಂದ ಶಿವ ಅದನ್ನು ಕೊರಳಿಗೆ ಸುತ್ತಿಕೊಂಡ. ತನ್ನಷ್ಟಕ್ಕೆ ತಾನು ಸರ್ಪವು ಯಾವುದೇ ಹಾನಿ ಮಾಡುವುದಿಲ್ಲ. ಆದರೇ ಕೆರಳಿಸಿದರೆ ಅದರಷ್ಟು ಅಪಾಯಕಾರಿ ಯಾವುದು ಇಲ್ಲ. ಅದೇ ಕುಂಡಲಿನಿಗೂ ಅನ್ವಯವಾಗುತ್ತದೆ. ಅದು ತುಂಬ ಮುಗ್ದ ಶಕ್ತಿ . ತನ್ನಷ್ಟಕ್ಕೆ ತಾನೆ ಯಾವುದೆ ತೊಂದರೆ ಮಾಡುವುದಿಲ್ಲ. ಆದರೇ ನೀವೇನಾದರು ಕೆಣಕಿದರೆ ತೊಂದರೆಗೀಡಾಗುವಿರಿ. ಅದು ತುಂಬ ಅಪಾಯಕಾರಿಯಾಗಬಲ್ಲದು. ವಿಶ್ವದೆಲ್ಲೆಡೆ ಸರ್ಪವು ವಿವೇಕದ ಪ್ರತೀಕವಾಗಿದೆ. ಸರ್ಪದಂತೆ ಮನುಷ್ಯ ಬುದ್ದಿವಂತ ಮತ್ತು ಚುರುಕಾಗುತ್ತಾನೆ. ಸರ್ಪ ಬಲು ಬುದ್ದಿವಂತ ಮತ್ತು ಜಾಗೃತ. ತುಂಬ ಎಚ್ಚರಿಕೆˌ ತೀಕ್ಷ್ಣ ಮತ್ತು ವೇಗವುಳ್ಳದ್ದು. ಕುಂಡಲಿನಿಯು ಇದರಂತೆ ಪ್ರಜ್ಞೆಯ ಉನ್ನತ ಸ್ಥಿತಿಗೆ ತಲುಪಬಹುದು.

( ಇನ್ನೂ ಇದೆ…)

1 Comment

Leave a Reply