ಇರುವುದನ್ನು ಪಡೆಯಲು ತಿಳಿದಿರಬೇಕು : ಸುಭಾಷಿತ

ಈ ದಿನದ ಸುಭಾಷಿತ

ತಿಲೇ ತೈಲಂ ಗವಿ ಕ್ಷೀರಂ ಕಾಷ್ಠೇ ವಾ ಪಾವಕಂ ತಥಾ |
ಧಿಯಾ ಧೀರೋ ವಿಜಾನೀಯಾತ್
ಉಪಾಯಾಶ್ಚಾರ್ಥ ಸಿದ್ಧಯೇ ||

ತಾತ್ಪರ್ಯ: ಎಳ್ಳಿನಲ್ಲಿ ಎಣ್ಣೆ ಇದೆ. ಅದನ್ನು ಪಡೆಯಲು ಗಾಣ, ಅಥವಾ ಯಂತ್ರದ ಉಪಯೋಗ ನಮಗೆ ತಿಳಿದಿರಬೇಕು. ಹಸುವಿನ ಕೆಚ್ಚಲಿನಲ್ಲಿ ಹಾಲು ಇದೆ. ಹಾಲು ಪಡೆಯಲು ನಮಗೆ ಕೆಚ್ಚಲಿನಿಂದ ಹಾಲು ಕರೆಯುವ ಕಲೆ ಗೊತ್ತಿರಬೇಕು. ಕಟ್ಟಿಗೆಯಲ್ಲಿ ಬೆಂಕಿ ಇದೆ. ಬೆಂಕಿಯನ್ನು ಪಡೆಯಲು ನಾವು ಮಥಿಸಬೇಕು. ಯಾವುದರಲ್ಲಿ ಏನು ಇದೆ ಎಂದು ತಿಳಿದರಷ್ಟೆ ಸಾಲದು, ಅದನ್ನು ಹೇಗೆ ಪಡೆಯಬೇಕು ಎಂದು ಅರಿತು, ಅವನ್ನು ಗಳಿಸುವವರು ಸಾಧಕರೂ ಧೀರರೂ ಅನಿಸಿಕೊಳ್ಳುತ್ತಾರೆ.

Leave a Reply