ಝೆನ್ ಬಿಕ್ಖು ಡೊಕ್ಯೊ ಏತಾನ್’ನ ಸಾವಿನ ಪದ್ಯ

ಜೆನ್ ಬಿಕ್ಖು ಡೊಕ್ಯೊ ಎತಾನ್’ನ ಸಾವಿನ ಪದ್ಯ ಮತ್ತು ವಿವರಣೆ | ಕನ್ನಡಕ್ಕೆ : ಚಿದಂಬರ ನರೇಂದ್ರ

ದೊಡ್ಡ ದೊಡ್ಡ ಝೆನ್ ವಿಹಾರಗಳನ್ನು ಸೇರುವಂತೆ ಹಲವಾರು ಬಾರಿ ಒತ್ತಾಯಗಳು ಬಂದರೂ, ಡೊಕ್ಯೊ ಕೊನೆತನಕ ಗುಡಿಸಲಿನಲ್ಲೇ ವಾಸಮಾಡಿದ. Zazen ಧ್ಯಾನದಲ್ಲಿ ಝೆನ್ ನ ಮೂಲ ಧಾತುವನ್ನು ಕಂಡುಕೊಡಿದ್ದ ಡೊಕ್ಯೊ, ಝೆನ್ ಸಿದ್ಧಾಂತವನ್ನು ತನ್ನಿಂದ ತಿಳಿಯಬಯಸುವವರನ್ನು ಬಹಳ ಕಠಿಣವಾಗಿ ನಡೆಸಿಕೊಳ್ಳುತ್ತಿದ್ದ ಹಾಗು (ಹಿಂದೊಮ್ಮೆ ಸಮುರಾಯ್ ಆಗಿದ್ದರಿಂದಲೋ ಏನೋ ) ಒಮ್ಮೊಮ್ಮೆ ತನ್ನ ಖಡ್ಗ ಹೊರ ತೆಗೆದು ಅವರನ್ನು ಓಡಿಸುತ್ತಿದ್ದ.

ಅದೆನೋ ಡೊಕ್ಯೊ ಗೆ ಝೆನ್ ಮಾಸ್ಟರ್ ಹಕೂಯಿನ್ ನ್ನ ಕಂಡರೆ ಆಗುತ್ತಿರಲಿಲ್ಲ. ಒಮ್ಮೆ ಸಭೆಯಲ್ಲಿ ಮಾತನಾಡಲು ಎದ್ದು ನಿಂತುಕೊಂಡ ಹಕೂಯಿನ್ ನನ್ನು ಡೊಕ್ಯೊ ಬಲವಾಗಿ ತಳ್ಳಿ ಬೀಳಿಸಿದ್ದ, ಆತ ಎಷ್ಟು ಜೋರಾಗಿ ತಳ್ಳಿದ್ದನೆಂದರೆ ಹಕೂಯಿನ್ ಮೂರ್ಛೆ ಹೋಗಿಬಿಟ್ಟಿದ್ದ. ಕೊನೆ ವರೆಗೂ ಹಕೂಯಿನ್ ನೊಂದಿಗೆ ವೈರ ಸಾಧಿಸಿದ ಡೊಕ್ಯೊ , ಹಕೂಯಿನ್ ಇತರ ಝೆನ್ ಭಿಕ್ಷುಗಳಂತೆ ಮನೆ ಮನೆಗೆ ಹೋಗಿ ಭಿಕ್ಷೆ ಕೇಳುವಂತೆ ಮಾಡಿದ.

ಡೊಕ್ಯೊ ತನ್ನ ಈ ಕೊನೆಯ ಮಾತುಗಳನ್ನ ಝೆನ್ ಧ್ಯಾನ ಭಂಗಿಯಲ್ಲಿ ಕುಳಿತು ಬರೆದು, ಬ್ರಶ್ ಕೆಳಗಿಟ್ಟು, ಹಳೆಯ ಹಾಡೊಂದನ್ನ ತನ್ನೊಳಗೆ ತಾನೇ ಗುನುಗಿ, ಒಮ್ಮೆಲೇ ಜೋರಾಗಿ ಗಹಗಹಿಸಿ ನಕ್ಕು, ಪ್ರಾಣ ತ್ಯಜಿಸಿದ.

(ಡೊಕ್ಯೊ ತೀರಿಕೊಂಡದ್ದು, ಹತ್ತನೇ ತಿಂಗಳ, ಆರನೇಯ ದಿನ, 1721 )

Leave a Reply