‘ಹಾದಿ ಪರಿಪೂರ್ಣವಾಗಿದೆ’ : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 2.3

ಸಮಸ್ಯೆಗಳು ಎದುರಾಗೋದೇ ಮನುಷ್ಯನಿಂದ, ಅವನಿಗೆ ಸಾಧ್ಯವಾಗಿರುವ ಪ್ರಜ್ಞೆಯ ಕಾರಣಕ್ಕಾಗಿ.  ಇದೇ ಕಾರಣಕ್ಕಾಗಿ ಅಲ್ಲವೆ ಅವ ಸರಿ – ತಪ್ಪು ಎಣಿಸೋದು ? ಸುಂದರ – ಕುರೂಪ ಅನ್ನೋದು? ಇದೇ ಕಾರಣಕ್ಕಾಗಿ ಅಲ್ಲವೆ ಅವ ಗೊಂದಲದ ಗೂಡಾಗಿರೋದು?  ~ ಓಶೋ ರಜನೀಶ್ ಹಾದಿ ಪರಿಪೂರ್ಣವಾಗಿದೆ, ಅಪಾರ ಬಯಲಿನಂತೆ. ಒಂದಿನಿತೂ ಹೆಚ್ಚು – ಕಡಿಮೆಯಿಲ್ಲ. ಹೌದು, ಸ್ವೀಕಾರ ಮತ್ತು ನಿರಾಕರಣೆಗಳ ನಡುವಿನ ನಮ್ಮ ಆಯ್ಕೆ ವಿಷಯಗಳ ನೈಜ ಸ್ವಭಾವದಿಂದ ನಮ್ಮನ್ನು ವಿಮುಖರನ್ನಾಗಿಸಿದೆ.  ನಿಸ್ಸಂಶಯವಾಗಿ ಇಲ್ಲಿ ಯಾವುದೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ, ಹಾಗೆಯೇ ಯಾವುದಕ್ಕೂ ಕೊರತೆ ಇಲ್ಲ. ಈ ಜಗತ್ತಿಗಿಂತ ಬೇರೊಂದು ಉತ್ತಮ ಜಗತ್ತು ಉಂಟೆ? ನೀವು ದಡ್ಡರಾಗಿದ್ದರೆ […]

ಮಾಸ್ಟರ್ ಬಾಂಕಿಗೆ ಜ್ಞಾನೋದಯವಾಗಿತ್ತೆ? : Tea time Story

ಸಾವನ್ನು ಎದುರು ನೋಡ್ತಾ ಇರೋ ಝೆನ್ ಮಾಸ್ಟರ್, ತನ್ನ ಶಿಷ್ಯರನ್ನು ಎದುರು ಕೂರಿಸಿಕೊಂಡು ಒಂದು ಕೊನೆಯ ಮಾತು ಹೇಳೋದು ಝೆನ್’ಲ್ಲಿ ಒಂದು ಬಹು ಮುಖ್ಯ ಸಂಪ್ರದಾಯ. ಹೀಗೆ ಝೆನ್ ಮಾಸ್ಟರ್’ಗಳು ಹೇಳಿದ ಕೊನೆಯ ಮಾತುಗಳನ್ನ, ಪದ್ಯಗಳನ್ನ, ಝೆನ್ ವಿದ್ಯಾರ್ಥಿಗಳು ತುಂಬ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ. ಝೆನ್ ಮಾಸ್ಟರ್ ಬಾಂಕಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಶಿಷ್ಯರೆಲ್ಲ ಬಾಂಕಿಯ ಸುತ್ತ ನೆರೆದಿದ್ದರು. ಸಾವಿಗೂ ಮೊದಲು ಕೊನೆಯದಾಗಿ ಒಂದು ಜ್ಞಾನದ ಮಾತು ಹೇಳುವಂತೆ ಹಿರಿಯ ಶಿಷ್ಯ, ಮಾಸ್ಟರ್ ಬಾಂಕಿಯನ್ನು ಕೇಳಿಕೊಂಡ. ಒಂದು […]

ಝೆನ್ ಗುರು ನಕ್ಕಿದ್ದು ಯಾಕೆ? ~ ಟೀ ಟೈಮ್ ಸ್ಟೋರಿ

ಚೀನಾದಲ್ಲಿ ಒಬ್ಬ ಯುವ ಝೆನ್ ಸನ್ಯಾಸಿಯಿದ್ದ. ಅವನು ಝೆನ್ ಅನ್ನು ಬಹಳ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದ. ಎಷ್ಟು ಗಂಭೀರ ಅಂದರೆ… ಅವನ ಮುಖ ಯಾವಾಗಲೂ ಬಿಗಿದುಕೊಂಡೇ ಇರುತ್ತಿತ್ತು. ಅಷ್ಟು ಗಂಭೀರ!! ಒಮ್ಮೆ ಏನನ್ನೋ ಅಧ್ಯಯನ ಮಾಡುವಾಗ ಯಾವುದರದ್ದೋ ಅರ್ಥ ತಿಳಿಯಲಿಲ್ಲ. ಸಾಕಷ್ಟು ಪ್ರಯತ್ನ ನಡೆಸಿ, ಸೋತು, ಗುರುವಿನ ಬಳಿ ಹೋದ. “ಮಾಸ್ಟರ್, ನನಗಿದು ಅರ್ಥವಾಗುತ್ತಿಲ್ಲ. ದಯವಿಟ್ಟು ವಿವರಿಸಿ” ಎಂದು ಗಂಭೀರ ಗಂಟು ಮುಖ ಹೊತ್ತು ನಿಂತ. ಶಿಷ್ಯನ ಸಮಸ್ಯೆ ಕೇಳುತ್ತಲೇ ಗುರು ಜೋರಾಗಿ ನಗಲಾರಂಭಿಸಿದ. ಶಿಷ್ಯನ ಮುಖ […]

ಡೈಮಂಡ್ ಸೂತ್ರ ಮತ್ತು ರೊಟ್ಟಿಯ ಮುದುಕಿ : ಝೆನ್ ಕಥೆ

ಜಪಾನಿನಲ್ಲೊಬ್ಬ ಝೆನ್ ಸನ್ಯಾಸಿ ಇದ್ದ. ಜಗತ್ತಿನಲ್ಲಿ ನಷ್ಟವಾಗಿಹೋಗಿದ್ದ ಬೌದ್ಧ ಧರ್ಮದ ‘ಡೈಮಂಡ್ ಸೂತ್ರ’ವನ್ನು ಅವನು ಅರೆದು ಕುಡಿದಿದ್ದ. ಅದು ಹೇಗೋ ಡೈಮಂಡ್ ಸೂತ್ರದ ಒಂದು ಪ್ರತಿ ಅವನ ಬಳಿ ಇದ್ದುಬಿಟ್ಟಿತ್ತು. ಅವನು ಅದನ್ನು ಜತನದಿಂದ ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತಿದ್ದ. ಡೈಮಂಡ್ ಸೂತ್ರದ ಬಗ್ಗೆ ಭಿಕ್ಖುಗಳೇ ಅಲ್ಲ, ಜನಸಾಮಾನ್ಯರೂ ಕುತೂಹಲಿಗಳಾಗಿದ್ದರು. ಈ ಸನ್ಯಾಸಿಯ ಬಳಿ ಅದರ ಪ್ರತಿ ಇದೆ, ಅದರ ಜ್ಞಾನವಿದೆ ಎಂದು ಕೇಳಿ, ಅವನ ಬಳಿ ಧಾವಿಸಿ ಬರುತ್ತಿದ್ದರು. ಆ ಸನ್ಯಾಸಿ, ಡೈಮಂಡ್ ಸೂತ್ರದ ಪ್ರತಿಯನ್ನು ಬೆನ್ನಿಗೆ […]

ಯುವತಿಯನ್ನು ಕೆಳಗಿಳಿಸದ ಎಕಿಡೊ : ಝೆನ್ ಕಥೆ

ಬೌದ್ಧ ಬಿಕ್ಖುಗಳಾದ ತಾನ್ ಜೆನ್ ಮತ್ತು ಎಕಿಡೋ ಒಟ್ಟಿಗೆ ಝೆನ್ ಕಲಿಯುತ್ತಿದ್ದರು. ಒಮ್ಮೆ ಅವರು ಎಲ್ಲಿಗೋ ಹೋಗುವುದಿತ್ತು. ಹಿಂದಿನ ರಾತ್ರಿ ಸಿಕ್ಕಾಪಟ್ಟೆ ಮಳೆ ಬಂದು ಚಿಕ್ಕ ಹಳ್ಳಗಳೆಲ್ಲ ತುಂಬಿ ರಸ್ತೆ ಮೇಲೆ ಹರಿದಿದ್ದವು. ಸಾಮಾನ್ಯದವರು ರಸ್ತೆ ದಾಟುವುದು ಕಷ್ಟ ಅನ್ನುವ ಪರಿಸ್ಥಿತಿ. ಹೀಗಿರುವಾಗ ತಾನ್ ಜೆನ್ ಮತ್ತು ಎಕಿಡೊ ಸಾಹಸಪಟ್ಟು ನಡೆದುಹೋಗುತ್ತಿದ್ದರು. ಅದೇ ವೇಳೆಗೆ ಹಳ್ಳ ಹರಿಯುತ್ತಿದ್ದ ರಸ್ತೆಯನ್ನು ದಾಟಲಾಗದೆ ಯುವತಿಯೊಬ್ಬಳು ಪರದಾಡುತ್ತಿದ್ದಳು. ಅವಳ ಕಷ್ಟವನ್ನು ನೋಡಲಾಗದೆ ತಾನ್ ಜೆನ್, “ಇರು ಹುಡುಗಿ, ನಾನು ಸಹಾಯ ಮಾಡ್ತೀನಿ” […]

ಅಡುಗೆ ಮಾಡುವುದೂ ಒಂದು ಧ್ಯಾನ!

ಸಂತನಾದವನು ಮಾಡುವ ಅಡುಗೆ ರುಚ್ಚಿಕಟ್ಟಾಗಿ ಇದ್ದೇ ಇರುತ್ತದೆ ಎಂದಿದ್ದರು ಸ್ವಾಮಿ ವಿವೇಕಾನಂದರು. `ಒಳ್ಳೆಯ ಮನಸ್ಸುಳ್ಳವರು ಮಾಡುವ ಅಡುಗೆ ರುಚಿಕರವಾಗಿ ಇದ್ದೇ ಇರುತ್ತದೆ. ಸಂತರ ಮನಸ್ಸು ನಿಷ್ಕಲ್ಮಷವಾಗಿರುತ್ತದೆಯಾದ್ದರಿಂದ ಅದು ಚೆನ್ನಾಗಿರುತ್ತದೆ ಎನ್ನುವುದರಲ್ಲಿ ಸಂದೇಹವೇನು?’ ಅನ್ನೋದು ಅವರ ವಿವರಣೆ! ~ ಗಾಯತ್ರಿ ಅಡುಗೆ ಮಾಡುವುದು ಯಾರೊಬ್ಬರ ಸೊತ್ತಾಗಲೀ ಕರ್ತವ್ಯವಾಗಲೀ ಅಲ್ಲ. ಯಾರಾದರೂ ಆಪ್ತರನ್ನು ಮನೆಗೆ ಕರೆಯುವಾಗ `ಊಟಕ್ಕೆ ಬನ್ನಿ’ ಅಂತ ಹೇಳುತ್ತೇವೆ. ಹಾಗೆ ಆಪ್ತರಾದವರು ಮನೆಗೆ ಬಂದು ಊಟಕ್ಕೆ ನಿಲ್ಲದೆ ಹೋದರೆ ಬೇಜಾರು ಮಾಡಿಕೊಳ್ತೇವೆ. ಇಲ್ಲಿ ಊಟ ಒಂದು ಸಂಕೇತ […]

ರೂಪಾಯಿ ಬೆಲೆಯ ತಂತ್ರ ಶಕ್ತಿ ! : ಝೆನ್ ಕಥೆ

ಝೆನ್ ಆಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಇಬ್ಬರು ಸನ್ಯಾಸಿಗಳು ತಮ್ಮ ಮುಂದಿನ ಸಾಧನೆಗಾಗಿ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಂಡು ಬೇರೆ ಬೇರೆ ದಿಕ್ಕುಗಳಲ್ಲಿ ಪ್ರಯಾಣ ಬೆಳೆಸಿದರು. ಹಿರಿಯ ಸನ್ಯಾಸಿ, ತಂತ್ರ ಸಾಧನೆಯಲ್ಲಿ ತನ್ನನ್ನು ತಾನು ತೀವ್ರವಾಗಿ ತೊಡಗಿಸಿಕೊಂಡು ವಿಶೇಷ ಅತೀಂದ್ರಿಯ ಶಕ್ತಿಗಳನ್ನು ಪಡೆದುಕೊಂಡ. ಕಿರಿಯ ಸನ್ಯಾಸಿ ಸಹಜ ಕೃಷಿಯಲ್ಲಿ ತೊಡಗಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದ. ಇಬ್ಬರೂ ಸನ್ಯಾಸಿಗಳು ಹಳೆಯ ಆಶ್ರಮಕ್ಕೆ ಹೋಗಿ ಗುರುಗಳನ್ನು ಭೇಟಿಯಾಗಿ ತಮ್ಮ ತಮ್ಮ ಸಾಧನೆಗಳ ಬಗ್ಗೆ ಗುರುಗಳಿಗೆ ತಿಳಿಸಬೇಕೆಂದು ನಿಶ್ಚಯಿಸಿದರು. ಆಶ್ರಮ […]

ಝೆನ್ ಪರಂಪರೆ : ಒಂದು ಕಿರು ಪರಿಚಯ

ಝೆನ್, ಸೂಫಿ, ಅವಧೂತ ಹಾಗೂ ಬೌದ್ಧ ಪರಂಪರೆಗಳ ಕುರಿತು ಪರಿಚಯ ಲೇಖನಗಳನ್ನು ಬರೆಯುವಂತೆ ನಮ್ಮ ಓದುಗರು  ಕೇಳಿದ್ದಾರೆ. ಕಾಲಕ್ರಮದಲ್ಲಿ ಈ ಎಲ್ಲವುಗಳ ಕುರಿತು ಲೇಖನಗಳನ್ನು ಪ್ರಕಟಿಸುವ ಪ್ರಯತ್ನ ಮಾಡುತ್ತೇವೆ. ಮೊದಲನೆಯದಾಗಿ ಝೆನ್ ಪರಂಪರೆ ಕುರಿತ ಲೇಖನ ಇಲ್ಲಿದೆ. ಇದು ಝೆನ್ ತಿಳಿವಿಗೆ ಪ್ರವೇಶಿಕೆಯಷ್ಟೇ. ಮುಂದಿನ ದಿನಗಳಲ್ಲಿ ಇತರ ಆಯಾಮಗಳನ್ನು ಪ್ರಕಟಿಸುವ ಪ್ರಯತ್ನ ಮಾಡಲಾಗುವುದು ~ ಅರಳಿ ಬಳಗ ಝೆನ್ ಅಂದರೆ ಅರಿವು. ಇದು ಕೊಡು – ಕೊಳ್ಳುವ ಸಂಗತಿಯಲ್ಲ. ಝೆನ್ ಪರಿಮಳದಂತೆ ಸ್ವಯಂವೇದ್ಯವಾದುದು…. ಝೆನ್ – ಇದು […]