ಮೂಲ: ಜಲಾಲುದ್ದಿನ್ ರೂಮಿ । ಕನ್ನಡಕ್ಕೆ : ಮಂಜುಳಾ ಪ್ರೇಮ್ ಕುಮಾರ್
ನಾನು ಪ್ರಶ್ನಿಸಿದೆ, ಅವನು ಉತ್ತರಿಸಿದ.
ನಾನು : ನನ್ನ ಕಣ್ಣುಗಳನ್ನೇನು ಮಾಡಲಿ?
ಅವನು : ನೇರ ರಸ್ತೆಯ ಮೇಲಿಡು,
ನಾನು : ನನ್ನ ಮನೋವಿಕಾರಗಳನ್ನು?
ಅವನು : ನಿರಂತರವಾಗಿ ಸುಡುತ್ತಲೇ ಇರು,
ನಾನು : ಹೃದಯವನ್ನೇನು ಮಾಡಲಿ?
ಅವನು : ಹೇಳು, ಅದರಲ್ಲಿರುವುದಾದರೂ ಏನು?
ನಾನು : ನೋವು ಮತ್ತು ಸಂಕಟಗಳಷ್ಟೇ,
ಅವನು : ನನ್ನ ಜೊತೆಯಾಗು, ನಿನ್ನ ಗಾಯದೊಳಗಿಂದಲೇ ಜ್ಞಾನದ, ಚೈತನ್ಯದ ಬೆಳಕೊಂದು ಉದಯಿಸುತ್ತದೆ.