ಸೂರ್ಯಕವಚ ಸ್ತೋತ್ರ, ಕನ್ನಡ ಅರ್ಥ ಸಹಿತ

ಯಾಜ್ಞವಲ್ಕ್ಯರು ಬೋಧಿಸಿದ, ದೇಹವನ್ನು ದೃಢವಾಗಿಸುವಂತೆ ಪ್ರಾರ್ಥಿಸುವ ಸೂರ್ಯ ಕವಚ ಸ್ತೋತ್ರ ಇಲ್ಲಿದೆ…


|| ಶ್ರೀ ಗಣೇಶಾಯ ನಮಃ ||
ಯಾಜ್ಞವಲ್ಕ್ಯ ಉವಾಚ:-
ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ |
ಶರೀರಾರೋಗ್ಯದಂ ದಿವ್ಯಂ ಸರ್ವ ಸೌಭಾಗ್ಯದಾಯಕಮ್ ||1||
ಭಾವಾರ್ಥ:
ಯಾಜ್ಞವಲ್ಕ್ಯರು ಹೇಳಿದರು; ಎಲೈ ಮುನಿಪುಂಗವನೇ! ಮಂಗಲದಾಯಕವೂ ಶ್ರೇಷ್ಠವೂ, ಶರೀರಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ಒದಗಿಸಿಕೊಡುವಂತಹದೂ ಆಗಿರುವ ಸೂರ್ಯ ಕವಚವನ್ನು ನಿನಗೆ ಅರುಹುವವನಾಗಿದ್ದೇನೆ. ಕೇಳುವವನಾಗು.

ದೇದೀಪ್ಯಮಾನ ಮುಕುಟಂ ಸ್ಫುರನ್ಮಕರ ಕುಂಡಲಮ್ |
ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತುದುದೀರಯೇತ್ ||2||
ಭಾವಾರ್ಥ: ಅತ್ಯಂತ ಪ್ರಕಾಶಿಸುತ್ತಿರುವ ಕಿರೀಟವುಳ್ಳವನೂ, ರಂಜಿಸುತ್ತಿರುವ ಮಕರ ಕರ್ಣ ಕುಂಡಲಗಳನ್ನು ಧರಿಸಿದವನೂ, ಸಾವಿರ ಕಿರಣಗಳೂಳ್ಳವನೂ ಆಗಿರುವ ಸೂರ್ಯನನ್ನು ಧ್ಯಾನಿಸುತ್ತಾ ಈ ಸ್ತುತಿಯನ್ನು ಪಠಿಸಬೇಕು.

ಶಿರೋಮೇ ಭಾಸ್ಕರಃ ಪಾತು ಲಲಾಟಂ ಮೇsಮಿತದ್ಯುತಿಃ |
ನೇತ್ರೇ ದಿನಮಣಿಃ ಪಾತು ಶ್ರವಣೇವಾಸರೇಶ್ವರಃ ||3||
ಭಾವಾರ್ಥ: ಹಣೆಯಲ್ಲಿ ಅಮಿತ ಪ್ರಕಾಶವುಳ್ಳ ಭಾಸ್ಕರನು ನನ್ನ ತಲೆಯನ್ನು ಕಾಪಾಡಲಿ. ದಿನಮಣಿಯು ನಯನಗಳನ್ನೂ, ದಿನಾಧಿಪತಿಯು ನನ್ನ ಕಿವಿಗಳನ್ನೂ ರಕ್ಷಿಸಲಿ.

ಘ್ರಾಣಂ ಫರ್ಮಘೃಣಿಃ ಪಾತು ವದನಂ ವೇದವಾಹನಃ |
ಜಿಹ್ವಾಂ ಮೇ ಮಾನವಃ ಪಾತು ಕಂಠಂ ಮೇ ಸುರವಂದಿತಃ ||4||
ಭಾವಾರ್ಥ: ನಾಸಿಕವನ್ನು ಉಷ್ಣ ಕಿರಣನೂ, ಮುಖವನ್ನು ವೇದವಾಹನನೂ ಕಾಪಾಡಲಿ. ಹಾಗೆಯೇ ನನ್ನ ನಾಲಿಗೆಯನ್ನು ಗೌರವದಾಯಕನೂ, ಕುತ್ತಿಗೆಯನ್ನು ಸುರರಿಂದ ವಂದಿಸಲ್ಪಡುವವನು ಕಾಪಾಡಲಿ.

ಸ್ಕಂಧೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ |
ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರಃ ||5||
ಭಾವಾರ್ಥ: ಪ್ರಭಾಕರನು ಹೆಗಲಿನಲ್ಲಿ ನೆಲೆಸಿ ರಕ್ಷಿಸಲಿ, ಜನಪ್ರಿಯನಾದವನು ಎದೆಯನ್ನು ಕಾಪಾಡಲಿ. ದ್ವಾದಶಾತ್ಮನು ಪಾದಗಳನ್ನೂ, ಸರ್ವಾಂಗಗಳನ್ನು ಸಕಲಾಧಿಪನೂ ಕಾಪಾಡಲಿ.

ಸೂರ್ಯ ರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೆ |
ದಧಾತಿ ಯಃ ಕರೇತಸ್ಯ ವಶಗಾಃ ಸರ್ವಸಿದ್ಧಯಃ ||6||
ಭಾವಾರ್ಥ: ಸೂರ್ಯನ ರಕ್ಷಣಾ ಕವಚವನ್ನು ದಯಪಾಲಿಸುವ ಈ ಸ್ತುತಿಯನ್ನು ಭುಜಪತ್ರಾವಳಿಯಲ್ಲಿ ಬರೆದು ಹಸ್ತದಲ್ಲಿ ಧರಿಸುಕೊಳ್ಳುವವರಿಗೆ ಸಮಸ್ತ ಇಷ್ಟಾರ್ಥಗಳು ಲಭಿಸುವವು.

ಸುಸ್ನಾತೋ ಯೋ ಜಪೇತ್ಸಮ್ಯಗ್ಯೋsಧೀತೇಸ್ವಸ್ಥಮಾನಸಃ |
ಸ ರೋಗಮುಕ್ತೋ ಧೀರ್ಘಾಯು: ಸುಖಂ ಪುಷ್ಟಿಂ ಚ ವಿಂದತಿ ||7||
ಭಾವಾರ್ಥ: ಅಂತರಂಗ ಬಹಿರಂಗಗಳೆರಡನ್ನೂ ಶುದ್ಧಿಗೊಳಿಸಿಕೊಂಡು, ಮಾಡಿ ಶಾಂತ ಮನಸ್ಸಿನಿಂದ ಉತ್ತಮ ರೀತಿಯಲ್ಲಿ ಇದನ್ನು ಜಪಿಸುವವರು ರೋಗ ಮುಕ್ತರಾಗಿ ಆರೋಗ್ಯಶಾಲಿಯಾಗುವರು, ಧೀರ್ಘಾಯುಶಾಲಿಯಾಗುವರು, ಸೌಖ್ಯವನ್ನೂ ದೇಹ ಸಾಮರ್ಥ್ಯವನ್ನೂ ಹೊಂದುವರು.

ವಿಸೂ: ಯಾವುದೇ ಸ್ತೋತ್ರಪಠಣಕ್ಕೆ ಮುನ್ನ ಮಾನಸಿಕ ಶುದ್ಧಿ ಅತ್ಯಗತ್ಯ. ಲೋಭಮೋಹಾದಿ ಅರಿಷಡ್ವರ್ಗಗಳಿಂದ ಮುಕ್ತರಾಗಿ, ಸಕಲ ಲೋಕದ ಒಳಿತನ್ನು ಪ್ರಾರ್ಥಿಸಿ, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ, ಸಕಲ ಜೀವರಾಶಿಯಲ್ಲೂ ತಮ್ಮನ್ನೇ ಕಾಣುತ್ತಾ ತಾರತಮ್ಯಮುಕ್ತರಾದವರಿಗೆ ಮಾತ್ರ ಸ್ತೋತ್ರಫಲಗಳು ಲಭಿಸುವವು.

2 Comments

Leave a Reply