|| ಅಸತೋಮಾ ಸದ್ಗಮಯ | ತಮಸೋಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂಗಮಯ ||
“ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನನ್ನನ್ನು ನಡೆಸು” ಅನ್ನುತ್ತದೆ ಬೃಹದಾರಣ್ಯಕ ಉಪನಿಷತ್.
ಇದು ನಮ್ಮ ಪ್ರತಿ ಬೆಳಗಿನ ನಮ್ರ ಪ್ರಾರ್ಥನೆಯಾಗಬೇಕು. ಈ ಪ್ರಾರ್ಥನೆಯನ್ನು ಹೊರಗಿನ ಶಕ್ತಿಗೆ ಸಲ್ಲಿಸುವುದಲ್ಲ; ನಮ್ಮೊಳಗಿನ ಚೈತನ್ಯಕ್ಕೆ ಮಾಡಿಕೊಳ್ಳಬೇಕು. ನಮ್ಮ ಅಂತರಂಗವನ್ನು, ನಮ್ಮ ಮನಸ್ಸನ್ನು ಇದಕ್ಕಾಗಿ ಕೇಳಿಕೊಳ್ಳಬೇಕು. ನನ್ನನ್ನು ವಿಚಲಿತಗೊಳಿಸದೆ, ಕತ್ತಲಿಂದ ಬೆಳಕು, ಅಸತ್ಯದಿಂದ ಸತ್ಯದೆಡೆಗೆ – ಅಂದರೆ ಒಟ್ಟಾರೆ ಕೆಡುಕಿನಿಂದ ಒಳಿತಿನ ಹಾದಿಯಲ್ಲಿ ಕರೆದೊಯ್ಯುವಂತೆ ಅಂತಃಶಕ್ತಿಯನ್ನು ಕೇಳಿಕೊಳ್ಳಬೇಕು.