ಒಳಿತು ಎಲ್ಲರಿಗಾಗಲಿ…. : ವೇದೋಕ್ತಿ

“ಎಲ್ಲರೂ ಸುಖಿಗಳಾಗಲಿ, ಎಲ್ಲರೂ ಆರೋಗ್ಯವಂತರಾಗಲಿ, ಎಲ್ಲರೂ ಒಳಿತನ್ನು ಕಾಣಲಿ, ಯಾರಿಗೂ ದುಃಖ ಅನಭವವಾಗದಿರಲಿ ಎಲ್ಲೆಡೆಯೂ ಶಾಂತಿ ನೆಲೆಸಲಿ” ಎಂದು ವೇದೋಕ್ತಿಯು ಹಾರೈಸುತ್ತದೆ…


ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ ಭವೇತ್ ||
ಓಂ ಶಾಂತಿಃ ಶಾಂತಿಃ ಶಾಂತಿಃ

ಸರ್ವರಿಗೂ ಹಿತವನ್ನು ಬಯಸುವುದರಿಂದ ನಮಗೂ ಹಿತವಾಗುತ್ತದೆ. ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ, ಭಾಗ್ಯಗಳು ದೊರೆಯಲೆಂದು ನಿತ್ಯವೂ ಪ್ರಾರ್ಥಿಸುವುದರಿಂದ ನಮ್ಮ ಸುತ್ತಲೂ ಸಕಾರಾತ್ಮಕ ತರಂಗಗಳು ನಿರ್ಮಾಣಗೊಳ್ಳುತ್ತವೆ.

“ಎಲ್ಲರಿಗೂ ಒಳಿತಾಗಲಿ” ಎಂಬ ಈ ಪ್ರಾರ್ಥನೆ ನಮ್ಮ ನಿತ್ಯದ ಪ್ರಾರ್ಥನೆಯಾಗಲಿ.

ಪ್ರತಿದಿನದ ಪ್ರಾರ್ಥನೆಯಲ್ಲಿ ಎಲ್ಲರ ಪಾಲಿರಬೇಕು. ಆಗಮಾತ್ರ ನಾವು ಕೂಡಾ ಸುಖದಿಂದ, ಸುರಕ್ಷಿತವಾಗಿರಲು ಸಾಧ್ಯ. ನಮಗೆ ಮಾತ್ರ ಒಳ್ಳೆಯದಾಗಲಿ ಎಂದು ಬಯಸಿದರೆ, ಮತ್ತೊಬ್ಬರು ಅನುಭವಿಸುವ ಕೆಡುಕಿನ ಪ್ರತಿಫಲನ ನಮ್ಮ ಮೇಲೆಯೂ ಹಾದು, ನಾವು ಕೂಡ ಬಾಧೆ ಪಡಬೇಕಾಗುತ್ತದೆ.

ಆದ್ದರಿಂದ, ಯಾರಿಗೂ ಕೆಡಕಾಗುವುದು ಬೇಡ, ಎಲ್ಲರೂ ಸುಖವಾಗಿ, ದುಃಖರಹಿತ ಜೀವನ ನಡೆಸುವಂತಾಗಲಿ ಎನ್ನುವ ಈ ವೇದಬೋಧೆ ನಮ್ಮ ದಿನನಿತ್ಯದ ಪ್ರಾರ್ಥನೆಯಾಗಲಿ.

1 Comment

 1. ಇದೂ ಇದೆ
  ಸ್ವಸ್ತಿ ಪ್ರಜಾಭ್ಯಾಮ್ ಪರಿಪಾಲಯಂತಾಂ
  ಜ್ಞಾನೇನ ಮಾರ್ಗೇಣ ಮಹೀ ಮಹಿಷಾಹ
  ಗೋ ಬ್ರಾಹ್ಮಣೇಭ್ಯಮ್ ಶುಭಮಸ್ತು ನಿತ್ಯಂ
  ಲೋಕಾ ಸಮಸ್ತಾ ಸುಖಿನೋ ಭವಂತು
  ಕಾಲೇ ವರ್ಷತು ಪರ್ಜನ್ಯಹ
  ಪೃಥುವೀ ಸಸ್ಯಶಾಲಿನೀ
  ದೇಶೋಯಂ ಕ್ಷೋಭ ರಹಿತಃ
  ಬ್ರಾಹ್ಮಣಾ ಸಂತು ನಿರ್ಭಯಾಹ

Leave a Reply