ಇದುವೇ ಸನಾತನ ಧರ್ಮ : ದಿನದ ಸುಭಾಷಿತ


ನ ಹಿ ವೈರೇಣ ವೈರಾಣಿ, ಶಾಮ್ಯನ್ತಿ ಇಹ ಕದಾಚನ
ಅವೈರೇಣ ಶಾಮ್ಯನ್ತಿ ಏಷ ಧರ್ಮಃ ಸನಾತನಃ | ಧಮ್ಮಪದ, 1:5

ವೈರದಿಂದ ವೈರಗಳು ಎಂದಿಗೂ ಶಮನವಾಗುವುದಿಲ್ಲ. ಅವೈರದಿಂದ, ಅಂದರೆ ಸ್ನೇಹ ಪ್ರೀತಿಗಳಿಂದ ವೈರವು ಶಮನವಾಗುತ್ತದೆ. ಇದೇ (ಈ ಮಾರ್ಗವನ್ನು ಅನುಸರಿಸುವುದೇ) ಸನಾತನ ಧರ್ಮ.
ಕಣ್ಣಿಗೆ ಕಣ್ಣು ಅನ್ನುತ್ತಾ ದ್ವೇಷದಲ್ಲಿ ಪರಸ್ಪರ ಕತ್ತಿ ಮಸೆಯುತ್ತಿದ್ದರೆ ಲೋಕದಲ್ಲಿ ಕೊನೆಗೆ ಕುರುಡರಷ್ಟೆ ಉಳಿಯುತ್ತಾರೆ – ಅನ್ನುತ್ತದೆ ಒಂದು ನಾಣ್ಣುಡಿ. ಸೇಡು, ವೈರ ಇವು ಧರ್ಮಲಕ್ಷಣಗಳಲ್ಲ. ನಾವು ಸುಖವಾಗಿರಬೇಕು, ನೆಮ್ಮದಿಯಿಂದ ಇರಬೇಕು ಅಂದರೆ ಧರ್ಮವನ್ನು ಅನುಸರಿಸಬೇಕು. ಮತ್ತು ನಮ್ಮ ಸನಾತನ ಧರ್ಮ ‘ಅವೈರ’ವನ್ನು ಹೇಳಿದೆ. ಅದರಲ್ಲಿ ಸಂಪೂರ್ಣ ನಂಬಿಕೆಯಿಟ್ಟು, ಶ್ರದ್ಧೆಯಿಂದ ಆಚರಿಸಿದರೆ ಶಾಂತಿಯಿಂದ ತುಂಬಿದ ಸಂತಸದ ಬದುಕು ನಿಶ್ಚಿತ.

Leave a Reply