ಎಲ್ಲವೂ ನಿನ್ನನ್ನೇ ಸೇರುವವು : ಶಿವಮಹಿಮ್ನಃ ಸ್ತೋತ್ರದಿಂದ…

ಅಂತಿಮ ಗುರಿ ಒಂದೇ; ಒಬ್ಬನೇ ಭಗವಂತನನ್ನು ತಿಳಿಯುವುದು!

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ
ಪ್ರಭಿನ್ನೇ ಪ್ರಸ್ಥಾನೇ ಪರಮಿದ ಮದಃ ಪಥ್ಯಮಿತಿ ಚ |
ರುಚೀನಾಂ ವೈಚಿತ್ರ್ಯಾದ್ ಋಜುಕುಟಿಲನಾನಾಪಥಜುಷಾಂ
ನೃಣಾಮೇಕೋ ಗಮ್ಯಸ್ತ್ವಮಸಿ ಪಯಸಾಮರ್ಣವ ಇವ ||
~ ಶಿವಮಹಿಮ್ನಃ ಸ್ತೋತ್ರಮ್ – 7
ಅರ್ಥ : ನಿನ್ನನ್ನು ಸೇರುವ ದಾರಿಯು ವೈದಿಕ, ಸಾಂಖ್ಯ ಯೋಗ, ಪಾಶುಪತ, ವೈಷ್ಣವ ಎಂದು ಬೇರೆ ಬೇರೆಯಾಗಿವೆ. ರುಚಿಗಳ ವೈವಿಧ್ಯದಿಂದ ಇದು ಶ್ರೇಷ್ಠ, ಇದು ಹಿತ ಎಂದು ನೇರ, ಸುತ್ತುಬಳಸು – ಇತ್ಯಾದಿ ಭಿನ್ನ ಮಾರ್ಗಗಳಲ್ಲಿ ಜನರು ಹೋಗುತ್ತಾರೆ.
ಅವರೆಲ್ಲರಿಗೂ ನದಿಗಳಿಗೆ ಸಮುದ್ರದಂತೆ, ನೀನೊಬ್ಬನೆ ಗಮ್ಯ ಸ್ಥಾನವಾಗಿರುವೆ.
ಸಾರಾಂಶ : ಯಾವ ದಾರಿಯಿಂದ ಸಾಧನೆ ನಡೆಸಿದರೂ ಎಲ್ಲರ ಅಂತಿಮ ಗುರಿ ಒಂದೇ; ಒಬ್ಬನೇ ಭಗವಂತನನ್ನು ತಿಳಿಯುವುದು.

Leave a Reply