ವಿಜ್ಞಾತಮ್ ಅವಿಜಾನತಾಂ : ದಿನಕ್ಕೊಂದು ಸುಭಾಷಿತ #19

“ಅರಿಯುವವರಿಗೆ ಅದು ತಿಳಿಯದು, ಅರಿವಿಲ್ಲದವರಿಗೆ ಅದು ತಿಳಿದಿದೆ” ಅನ್ನುತ್ತದೆ ಕೇನೋಪನಿಷತ್ತು.


ಅವಿಜ್ಞಾತಮ್ ವಿಜಾನತಾಂ, ವಿಜ್ಞಾತಮ್ ಅವಿಜಾನತಾಂ || ಕೇನೋಪನಿಷತ್ ||
“ಅರಿಯುವವರಿಗೆ ಅದು ತಿಳಿಯದು, ಅರಿವಿಲ್ಲದವರಿಗೆ ಅದು ತಿಳಿದಿದೆ”
ಇಲ್ಲಿ ಅರಿವು ಎಂದರೆ ವಿಷಯ ವಸ್ತುಗಳನ್ನು ಅರಿಯುವಂಥ ಅರಿವು ಎಂದು ಅರ್ಥ ಮಾಡಿಕೊಳ್ಳಬೇಕು. ಹಾಗಾದರೆ ಬ್ರಹ್ಮವನ್ನು ತಿಳಿಯುವುದು ಹೇಗೆ?
ಉಪನಿಷತ್ತು ಹೇಳುತ್ತದೆ; “ನಮ್ಮ ಅಂತರಂಗದಲ್ಲಿ ಉಂಟಾಗುವ ಎಲ್ಲ ಚಿಂತನೆಗಳನ್ನು ಅರಿಯುವುದು ಆತ್ಮ. ಎಲ್ಲ ಮಾನಸಿಕ ಅಲೆಗಳನ್ನು ನೋಡಬಲ್ಲ, ಬೆಳಗುವ ಚೈತನ್ಯಶಕ್ತಿಯಾದ ಅದು, ಆ ಎಲ್ಲ ಚಿಂತನಾಲಹರಿಗಳಲ್ಲೂ ಸಮಾನವಾಗಿ ತೋರುತ್ತದೆ. ಮಾನಸಿಕ ಪ್ರತ್ಯಯಗಳು ಬದಲಾಗುತ್ತ ಇರುತ್ತವೆ. ಆದರೆ ಅವುಗಳನ್ನು ತನ್ ಚೈತನ್ಯದಿಂದ ಬೆಳಗುವ ಆತ್ಮದಲ್ಲಿ ಯಾವ ವಿಕಾರವೂ ಉಂಟಾಗುವುದಿಲ್ಲ. ಆತ್ಮವನ್ನು ಈ ಮಾನಸಿಕ ಚಿಂತನೆಯ ಅಲೆಗಳ ಮೂಲಕವೇ ಅರಿಯಲು ಸಾಧ್ಯ. ಅದಕ್ಕೆ ಬೇರೆ ದಾರಿಯೇ ಇಲ್ಲ.
ಮನಸ್ಸಿನ ಅಲೆಗಳೆಲ್ಲದರ ಒಳಗಿರುವುದು ಆತ್ಮವೆಂದು ನಾವು ಯಾವಾಗ ಅರಿಯುತ್ತೇವೋ, ಆಗ ಮಾತ್ರ ಅದನ್ನು ನಿಜವಾಗಿ ಅರಿತಂತೆ. ಇದುವೇ ದರ್ಶನ.

Leave a Reply