ಎಲ್ಲರಲ್ಲೂ ತನ್ನನ್ನು ಕಾಣುವವನೇ ಜ್ಞಾನಿ : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಈಶಾವಾಸ್ಯೋಪನಿಷತ್ತಿನಿಂದ…

ಯಸ್ಮಿನ್ ಸರ್ವಾಣಿ ಭೂತಾನಿ,
ಆತ್ಮೈ ವಾ ಭೂದ್ವಿಜಾನತಃ |
ತತ್ರ ಕೋ ಮೋಹ ಕಃ ಶೋಕ
ಏಕತ್ವಮನುಪಶ್ಯತಃ ||

“ಯಾರು ಎಲ್ಲ ಜೀವಿಗಳಲ್ಲೂ ತಮ್ಮ ಆತ್ಮವನ್ನೆ ಕಾಣುತ್ತಾರೋ ಅವರಿಗೆಂಥ ಮೋಹ? ಅವರಿಗೆಂಥ ಶೋಕ? ಅವರು ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತಾರೆ” ಎಂಬುದು ನೇರ ಅರ್ಥ. ಈ ಶ್ಲೋಕದ ಮೂಲಕ ಈಶಾವಾಸ್ಯವು ಎಲ್ಲರನ್ನೂ ಸಮಾನವಾಗಿ ಕಾಣುವವರಿಗೆ ಮೋಹ – ಶೋಕಗಳಿಲ್ಲ ಎಂದು ಹೇಳುತ್ತದೆ.

ಎಲ್ಲ ಜೀವಿಗಳಲ್ಲಿ, ಎಲ್ಲ ಕಡೆಗಳಲ್ಲಿ, ತನ್ನ ಆತ್ಮವನ್ನೇ ಕಾಣುವವರಿಗೆ ಬಯಕಯೇ ಉಂಟಾಗುವುದಿಲ್ಲ. ಅಂಥವರಿಗೆ ಯಾವುದರ ಬಗ್ಗೆಯೂ ಮೋಹವಿರುವುದಿಲ್ಲ. ತಮ್ಮ ಆತ್ಮದಲ್ಲಿ ಸರ್ವ ಜೀವಿಗಳನ್ನೂ ಕಾಣುವವರು ಕ್ರೋಧ ಲೋಭಾದಿಗಳನ್ನು ಹೊಂದಿರಲು ಅವಕಾಶವೇ ಇಲ್ಲ. ಯಾರ ಬಗ್ಗೆಯೂ ಬೇಸರವನ್ನಾಗಲೀ ಮತ್ಸರವನ್ನಾಗಲೀ ಇಟ್ಟುಕೊಳ್ಳದವರು ಸಹಜವಾಗಿ ಶುದ್ಧಪ್ರೇಮ ಭಾವವನ್ನು ಹೊಂದಿರುತ್ತಾರೆ. ಇಂತಹ ಸಹಜ ಪ್ರೇಮಿಗಳೇ ನಿಜವಾದ ಜ್ಞಾನಿಗಳು.

Leave a Reply