ಹರ್ಟ್ ಫೀಲಿಂಗ್ಸ್… । ಜಿಡ್ಡು ಕಂಡ ಹಾಗೆ…

ಇನ್ನೊಬ್ಬರಿಗೆ ನೋವಾಗದಂತೆ ನಾವು ವರ್ತಿಸುವುದು ಹೇಗೆ? ಇದನ್ನೇ ಅಲ್ಲವೆ ನೀವು ತಿಳಿಯಬಯಸಿರುವುದು ? । ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ: ಚಿದಂಬರ ನರೇಂದ್ರ

ಇನ್ನೊಬ್ಬರಿಗೆ ನೋವಾಗದಂತೆ ನಾವು ವರ್ತಿಸುವುದು ಹೇಗೆ? ಇದನ್ನೇ ಅಲ್ಲವೆ ನೀವು ತಿಳಿಯಬಯಸಿರುವುದು ? ಹಾಗಾದರೆ ನೀವು ಏನನ್ನೂ ಮಾತನಾಡದೇ, ಯಾವ ಕೆಲಸವನ್ನೂ ಮಾಡದೇ ಸುಮ್ಮನಿರುವುದೇ ಒಳ್ಳೆಯದು. ನಿಮ್ಮ ಬದುಕನ್ನು ನೀವು ಪೂರ್ತಿಯಾಗಿ ಬದುಕುವಿರಾದರೆ, ನಿಮ್ಮ ವರ್ತನೆ, ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನುಂಟು ಮಾಡುವ ಸಾಧ್ಯತೆಗಳೇ ಹೆಚ್ಚು ; ಆದರೆ ನಿಮಗೆ ಯಾವುದು ಮುಖ್ಯ, ನಿಮ್ಮ ನಿಜವನ್ನು ಬದುಕುವುದೋ ಅಥವಾ ಇನ್ನೊಬ್ಬರನ್ನು ಹರ್ಟ್ ಮಾಡದಿರುವುದೋ? ಇದು ಎಷ್ಟು ಸರಳ ಪ್ರಶ್ನೆಯೆಂದರೆ ನಿಮಗೆ ಉತ್ತರದ ಅವಶ್ಯಕತೆಯೇ ಇಲ್ಲ.

ಯಾಕೆ ನೀವು ಇನ್ನೊಬ್ಬರ ಭಾವನೆಗಳನ್ನು, ಅವರ ಆಲೋಚನೆಗಳನ್ನು ಗೌರವಿಸಬಯಸುತ್ತೀರಿ ? ನಿಮಗೆ ನಿಮ್ಮ ಸ್ವಂತದ ಭಾವನೆಗಳಿಗೆ ನೋವಾಗುವ ಅಥವಾ ವಿಷಯದ ಬಗೆಗಿನ ನಿಮ್ಮ ಸ್ವಂತದ ದೃಷ್ಟಿಕೋನಗಳು ಬದಲಾಗುವ ಭಯವೆ? ನಿಮ್ಮ ಅಭಿಪ್ರಾಯಗಳಿಗಿಂತ ಬೇರೆಯಾದ ಅಭಿಪ್ರಾಯಗಳನ್ನು ಜನ ಹೊಂದಿದ್ದಾರೆಂದರೆ, ಆ ಅಭಿಪ್ರಾಯಗಳ ನಿಜವನ್ನು ನೀವು ಪ್ರಶ್ನೆ ಮಾಡುವುದರಿಂದ, ಅವರೊಂದಿಗೆ ನೇರವಾಗಿ ಕ್ರಿಯಾತ್ಮಕ ಸಂಪರ್ಕ ಸಾಧಿಸುವುದರಿಂದ ಮಾತ್ರ ತಿಳಿದುಕೊಳ್ಳಬಲ್ಲಿರಿ. ಆ ಅಭಿಪ್ರಾಯಗಳು, ಆ ತಿಳುವಳಿಕೆ ಸತ್ಯದಿಂದ ದೂರ ಎನ್ನುವುದನ್ನ ನೀವು ಗುರುತಿಸಿ ಕಂಡುಕೊಳ್ಳಬಲ್ಲಿರಾದರೆ , ನಿಮ್ಮ ಈ ಗುರುತಿಸುವಿಕೆ ಆ ಇನ್ನೊಬ್ಬರನ್ನು ಯಾರು ಈ ಅಭಿಪ್ರಾಯಗಳನ್ನು ಹೊತ್ತುಕೊಂಡಿದ್ದಾರೋ ಅವರನ್ನು ಖಂಡಿತ ಕಳವಳಕ್ಕೆ ದೂಡಬಲ್ಲದು.

ಹಾಗಾದರೆ ಏನು ಮಾಡುವುದು ? ಆ ನಿಮ್ಮ ಗೆಳೆಯರಿಗೆ ನೋವಾಗಬಹುದೆಂದು ರಾಜಿ ಸಂಧಾನಕ್ಕೆ ಮುಂದಾಗುವುದೆ? ಈ ಬಿಕ್ಕಟ್ಟಿನಿಂದ ದೂರ ಉಳಿಯುವುದೇ? ಅವರೊಂದಿಗೆ ಹೊಂದಿಕೊಂಡು ಹೋಗುವುದೇ? ಇದು ನಿಮ್ಮಿಬ್ಬರ ಅಂತಃಕರಣಕ್ಕೆ ಬಿಟ್ಟ ಪ್ರಶ್ನೆ. ನಿಮ್ಮ ಗೆಳೆತನ, ನಿಮ್ಮ ಪ್ರಶ್ನೆಯಲ್ಲಿ ಸಾಚಾತನವಿದ್ದಾಗ ನೋವು ಕಾಡುವುದಿಲ್ಲ, ಪರಸ್ಪರರಲ್ಲಿ ಗೌರವ ಹೆಚ್ಚಾಗುತ್ತದೆ.

Leave a Reply