ಚಂಚಲತೆಗೆ ಉದಾಹರಣೆ: ಇಂದಿನ ಸುಭಾಷಿತ

ಇಂದಿನ ಸುಭಾಷಿತ…

ಮನೋ ಮಧುಕರೋ ಮೇಘೋ ಮಧ್ಯಪೋ ಮತ್ಕುಣೋ ಮರುತಃ।
ಮಾ ಮದೋ ಮರ್ಕಟೋ ಮತ್ಸ್ಯೋ ಮಕರಾ ದಶ ಚಂಚಲಾಃ॥

ಸುಭಾಷಿತ ಸಂಗ್ರಹ

ಅರ್ಥ: ಮನಸ್ಸು, ಜೇನು ಹುಳು, ಮೋಡ, ಮದ್ಯ ಪಾನೀಯ, ಕೀಟ, ಹಣ, ಗಾಳಿ, ಸಂಪತ್ತಿನ ಮದ, ಮಂಗ, ಮತ್ತು ಮೀನು – ಇವೆಲ್ಲವೂ ಅತ್ಯಂತ ಚಂಚಲವಾಗಿರುವಂಥವು

ತಾತ್ಪರ್ಯ: ಇದೊಂದು ಭಾಷಾ ಚಮತ್ಕಾರದ ಸುಭಾಷಿತ. ಸಂಸ್ಕೃತದಲ್ಲಿ ಮಕಾರದಿಂದ ಆರಂಭವಾಗುವ ಮೇಲೆ ಹೇಳಿದ ಎಲ್ಲವೂ ಚಂಚಲತೆಗೆ ಹೆಸರುವಾಸಿಯಾಗಿವೆ. ಅವನ್ನು ನೋಡಿದಾಗ ನಾವು ಯಾಕೆ ಚಂಚಲವಾಗಿರಬಾರದು ಅನ್ನುವುದನ್ನು ನೆನೆಸಿಕೊಳ್ಳಬೇಕೆಂದು ಇಂಥ ಸರಳ ಮತ್ತು ಚಮತ್ಕಾರಿಕ ಸೂತ್ರವನ್ನು ಹೆಣೆಯಲಾಗಿದೆ.

Leave a Reply