ಅರಗಿಸಿಕೊಳ್ಳಲಾಗದ ಕೆಲಸ ಯಾಕೆ ಮಾಡಬೇಕು! : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ರಾಮಾಯಣದಿಂದ…

ಯತ್ಕೃತ್ವಾ ನ ಭವೇತ್ ಧರ್ಮೋ ನ ಕೀರ್ತಿರ್ನ ಯಶೋ ಧ್ರುವಾಂ
ಶರೀರಸ್ಯ ಭವೇತ್ ಖೇದಃ ಕಸ್ತತ್ಕರ್ಮ ಸಮಾಚರೇತ್
॥ ರಾಮಾಯಣ : 3.50.19 ॥
ಯಾರೇ ಆಗಲಿ ಮಿತಿ ಮೀರಿದ ಭಾರ ಹೊತ್ತುಕೊಳ್ಳಲು ಹೋಗಬಾರದು. ಅರಗಿಸಿಕೊಳ್ಳಲು ಆಗುವಂಥ ಆಹಾರವನ್ನೆ ಸೇವಿಸಬೇಕು. ಯಾರು ಯಾಕಾದರೂ ಯಾವುದೇ ಬಗೆಯ ಲಾಭವಿಲ್ಲದ, ಕೇವಲ ದೇಹವನ್ನು ಆಯಾಸಗೊಳಿಸುವ ಕೆಲಸವನ್ನು ಮಾಡಬೇಕು!?

(ಜಟಾಯು ರಾವಣನಿಗೆ ಹೇಳುವ ಮಾತು. ಸೀತೆಯನ್ನು ಹೊತ್ತೊಯ್ಯುವುದರ ಪರಿಣಾಮ ನಿನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗದು. ಆದ್ದರಿಂದ ಅವಳನ್ನು ಬಿಟ್ಟುಬಿಡು ಎಂದು ಹೇಳುವ ಸಂದರ್ಭದಲ್ಲಿ ಆಡುವ ಮಾತಿದು)

Leave a Reply